ಜಿಲ್ಲೆ

ಎಐಪಿಎಸ್ ಶಾಲೆಯಲ್ಲಿ ವಿದ್ಯಾರಂಭಂ ಕಾರ್ಯಕ್ರಮ

ಚಿತ್ರದುರ್ಗ: ಜೋಗಿಮಟ್ಟಿ ರಸ್ತೆಯ ಅನುಪಮಾ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ಗುರುವಾರ ವಿದ್ಯಾರಂಭಂ ಕಾರ್ಯಕ್ರಮ ನಡೆಯಿತು.

ಪಾಲಕರೊಂದಿಗೆ ಪೂರ್ವ ಪ್ರಾಥಮಿಕ ವಿದ್ಯಾರ್ಥಿ ಸಮೂಹಕ್ಕೆ ಅಕ್ಷರಾಭ್ಯಾಸವೂ ಶಾಸ್ತ್ರೋಕ್ತವಾಗಿ ನೆರವೇರಿತು. ಚಿಣ್ಣರು ಉತ್ಸಾಹದಿಂದ ಪಾಲ್ಗೊಂಡಿದ್ದರು. ನೆರೆದಿದ್ದ ಎಲ್ಲರಲ್ಲೂ ಸಂಭ್ರಮ ಮನೆಮಾಡಿತ್ತು.

ಸ್ಕೂಲ್‌ನ ಅಧ್ಯಕ್ಷ ಎಸ್.ಭಾಸ್ಕರ್, ಕಾರ್ಯದರ್ಶಿ ಎಸ್.ಬಿ.ರಕ್ಷಣ್, ಪ್ರಾಚಾರ್ಯ ಸಿ.ಡಿ.ಸಂಪತ್‌ಕುಮಾರ್ ಇತರರಿದ್ದರು.