ಚಿಕ್ಕಮಗಳೂರಿನ ಎಐಟಿ ವೃತ್ತದಲ್ಲಿ ಸ್ಥಳೀಯ ವರ್ತಕರು ಹಾಗೂ ಸಾರ್ವಜನಿಕರು ನಟ ಪುನೀತ್ ರಾಜ್‌ಕುಮಾರ್ ಅವರ ಜನ್ಮ ದಿನ ಆಚರಿಸಿದರು. ಹರೀಶ್, ವಿಕ್ರಮ್, ಸಂತೋಷ್, ರವಿ, ಸಂಪತ್ ಮತ್ತಿತರರಿದ್ದರು. 
ಜಿಲ್ಲೆ

ಎಐಟಿ ವೃತದಲ್ಲಿ ಪುನಿತ್ ರಾಜ್ ಕುಮಾರ್ ಜನ್ಮ ದಿನಾಚರಣೆ

ಚಿಕ್ಕಮಗಳೂರು: ನಗರದ ಎಐಟಿ ವೃತ್ತದಲ್ಲಿ ಸ್ಥಳೀಯ ವರ್ತಕರು ನಟ ದಿವಂಗತ ಪುನಿತ್ ರಾಜ್ ಕುಮಾರ್ ಅವರ ೫೦ನೇ ವರ್ಷದ ಜನ್ಮ ದಿನಾಚರಣೆಯನ್ನು ಕೇಕ್ ಕಟ್ ಮಾಡಿ, ಗಿಡ ನೆಡುವ ಮೂಲಕ ಆಚರಿಸಿದರು.

ಈ ವೇಳೆ ಮಾತನಾಡಿದ ಸ್ಮೆÊಲ್ ಫೋಟೋ ಸ್ಟೂಡಿಯೋ ಮಾಲೀಕ ಹಾಗೂ ಪುನೀತ್ ರಾಜ್‌ಕುಮಾರ್ ಅಭಿಮಾನಿ ಹರೀಶ್, ನಟ ಪುನಿತ್ ರಾಜ್ ಕುಮಾರ್ ಅವರು ದೈಹಿಕವಾಗಿ ನಮ್ಮೊಂದಿಗಿಲ್ಲ. ಆದರೆ ಅವರ ಜನಪರ ಕೆಲಸಗಳು, ಅವರ ಸಿನಿಮಾಗಳು ನಮ್ಮೊಂದಿಗಿವೆ ಎಂದರು.

ಪ್ರತಿದಿನ ಹಲವು ಉತ್ತಮ ವಿಚಾರಗಳಿಂದ ಪುನೀತ್ ರಾಜ್‌ಕುಮಾರ್ ನೆನಪಾಗುತ್ತಾರೆ. ಅವರ ದಾನ ಮಾಡುವ ಗುಣ, ಕಷ್ಟದಲ್ಲಿರುವವರಿಗೆ ಸಹಾಯ, ವಿಧ್ಯಭ್ಯಾಸಕ್ಕೆ ಅವರು ನೀಡುತಿದ್ದ ಪ್ರೋತ್ಸಾಹ ಹಾಗೂ ಸಾಮಾಜಿಕ ಕೆಲಸ ಕಾರ್ಯಗಳು ಇಂದಿದೂ ಜೀವಂತವಾಗಿವೆ. ಅವರ ಸಮಾಜಮುಖಿ ಕೆಲಸ ಕಾರ್ಯಗಳು ಈಗ ಮತ್ತಷ್ಟು ಜನರಿಗೆ ಮಾದರಿಯಾಗಿವೆ. ಅವರ ನೆನೆಪಲ್ಲಿ ಗಿಡ ನೆಡಲಾಗಿದೆ. ಹಾಗೆ ಕೇಕ್ ಕತ್ತರಿಸಿ, ಅನ್ನದಾನ ಮಾಡಿ ಹುಟ್ಟುಹಬ್ಬ ಆಚರಣೆ ಮಾಡಿದೇವೆ ಎಂದರು.

ಕಾರ್ಯಕ್ರಮದಲ್ಲಿ ಗ್ರೀನ್ ಸಿಟಿ ಮಾಲಿಕ ವಿಕ್ರಮ್, ಎಸ್.ಎಸ್.ಆರ್ ಬೇಕರಿ ಮಾಲಿಕ ಸಂತೋಷ್, ಸ್ಥಳಿಯರಾದ ರವಿ, ಸಂಪತ್, ಮನ್ವಿತ್, ಪುನಿತ್ ಮತ್ತಿತರರಿದ್ದರು.