ಜಿಲ್ಲೆ

ಎಐಕೆಕೆಎಂಎಸ್ ಸಂಘಟನೆಯಿದ ಪ್ರತಿಭಟನೆ


ಯಾದಗಿರಿ: ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ (ಎಐಕೆಕೆಎಂಎಸ್) ಸೋಮವಾರ ಜಿ¯್ಲÁಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿ¯್ಲÁಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿತು.

ಜಿ¯್ಲÁಧ್ಯP್ಷÀ ಶರಣಗೌಡ ಗೂಗಲï, ಜಿ¯್ಲÁ ಕಾರ್ಯದರ್ಶಿ ಭೀಮರೆಡ್ಡಿ ಹಿರೆಬಾನರ್ ನೇತೃತ್ವದಲ್ಲಿ ಸೇರಿದ್ದ ನೂರಾರು ಜನರು ವಿವಿಧ ಬೇಡಿಕೆಗಳಿಗೆ ಆಗ್ರಹಿಸಿದರು.

ರೈತರ ಎಲ್ಲ ಬೆಳೆಗಳ ನಷ್ಟಕ್ಕೆ ಸಮರ್ಪಕ ಪರಿಹಾರ ನೀಡಬೇಕು. ಎಲ್ಲ ಬ್ಯಾಂಕ್‌ಗಳಲ್ಲಿರುವ ರೈತರ ಸಾಲ ಮನ್ನಾ ಮಾಡಬೇಕು. ಬರ ಪರಿಹಾರ ಕಾಮಗಾರಿ ಕೂಡಲೇ ಆರಂಭಿಸಬೇಕು. ನರೆಗಾ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು. ಕೃಷಿ ಕಾರ್ಮಿಕರಿಗೆ ಉದ್ಯೋಗವನ್ನು ಖಚಿತಪಡಿಸಬೇಕು. ಹಿಂಸೆ ನೀಡಿ ಸಾಲ ವಸೂಲಿ ಮಾಡುತ್ತಿರುವ ಮೈಕ್ರೊ ಫೈನಾನ್ಸ್ ವಿರುದ್ಧ ಕ್ರಮ ಕೈಗೊಳ್ಳಬೇಕು. ಕನಿಷ್ಟ ಬೆಂಬಲ ಬೆಲೆ ಯಜನೆಯಡಿ ರೈತರಿಂದ ಖರೀದಿ ಮಾಡಿದ ಬೆಳೆಯ ಹಣ ಕೂಡಲೇ ಪಾವತಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆಗೆ ಒತ್ತಾಯಿಸಿದರು.

ಜಮಾಲಸಾಬ್, ಅಮರೇಶ ಕೆಂಭಾವಿ, ಚಂದ್ರಡ್ಡಿ, ತಾಯಪ್ಪ, ಶಂಕ್ರಪ್ಪ, ಖಂಡೆಪ್ಪ, ಮಾರುತಿ, ಮಲ್ಲಮ್ಮ ಅಂಬಗೆರ, ಮಾಹೋಲಿ ಹುಲಕಲï, ಅನಸಮ್ಮ ಹಾದಿಮನಿ, ಶೋಭಾ, ಮಲ್ಲಮ್ಮ, ರೇವಮ್ಮ, ಶರಣಮ್ಮ, ಸುಭಾಷಚಂದ್ರ ಇತರರಿದ್ದರು.