ಜಿಲ್ಲೆ

ಎಎಸ್‌ಜಿ ಕಣ್ಣಿನ ಆಸ್ಪತ್ರೆಯಿಂದ ನ.14ಕ್ಕೆಡಯಾ ವಾಕ್

ಮೈಸೂರು: ವಿಶ್ವ ಮಧುಮೇಹ ದಿನಾಚರಣೆ ಅಂಗವಾಗಿ ಎಎಸ್‌ಜಿ ಕಣ್ಣಿನ ಆಸ್ಪತ್ರೆ ವತಿಯಿಂದ ನ.14ರಂದು ಬೆಳಗ್ಗೆ 8ಕ್ಕೆ ಡಯಾ ವಾಕ್ ರ‌್ಯಾಲಿ ಆಯೋಜಿಸಲಾಗಿದೆ.

ರ‌್ಯಾಲಿಯು ಎಎಸ್‌ಜಿ ಆಸ್ಪತ್ರೆ ಆವರಣದಿಂದ ಹೊರಟು ಸಿದ್ದಪ್ಪ ವೃತ್ತ, ಅಗ್ರಹಾರ ವೃತ್ತ, ಸಂಸ್ಕೃತ ಪಾಠಶಾಲಾ ವೃತ್ತ, ಪಾಲಿಕೆ ಕಚೇರಿ, ಸಂತೆಪೇಟೆ, ದೇವರಾಜ ಅರಸು ರಸ್ತೆ, ಎನ್.ಎಸ್.ರಸ್ತೆ ಮೂಲಕ ಆರಂಭದ ಸ್ಥಳ ತಲುಪಲಿದೆ. ಮಧುಮೇಹ ರೆಟಿನೋಪತಿ ಬಗ್ಗೆ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.

ಜಿಲ್ಲಾ ಆರೋಗ್ಯಾಧಿಕಾರಿ ಡಾ. ಪ್ರಸಾದ್, ಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗರಾಜ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್ ಪಾಲ್ಗೊಳ್ಳುವರು ಎಂದು ಆಸ್ಪತ್ರೆ ವೈದ್ಯ ಡಾ.ಮಹೇಶ್‌ಕುಮಾರ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.