ಕೊಳ್ಳೇಗಾಲ ಪಟ್ಟಣದ 10ನೇ ವಾರ್ಡ್ ವ್ಯಾಪ್ತಿಗೆ ಬರುವ ನಾಯಕರ ದೊಡ್ಡ ಬೀದಿಯಲ್ಲಿ ಕಾಂಗ್ರೆಸ್ ಪರವಾಗಿ ಕಾರ್ಯಕರ್ತರು ಶುಕ್ರವಾರ ಮತಯಾಚನೆ ಮಾಡಿದರು. ಕೊಪ್ಪಳಿನಾಯಕ, ಸುಶೀಲಾ, ಜಿ.ಪಿ.ಶಿವಕುಮಾರ್, ರಾಘವೇಂದ್ರ, ಸುಮಾ ಸುಬ್ಬಣ್ಣ ಇದ್ದರು. 
ಜಿಲ್ಲೆ

ಎಆರ್‌ಕೆ ಪರ ಕಾಂಗ್ರೆಸ್ ಸಮಿತಿ ಮತಬೇಟೆ

Chamarajanagar

ಕೊಳ್ಳೇಗಾಲ: ಪಟ್ಟಣದ ನಾಯಕರ ದೊಡ್ಡ ಬೀದಿಯಲ್ಲಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎ.ಆರ್.ಕೃಷ್ಣಮೂರ್ತಿ ಪರವಾಗಿ ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿ ವತಿಯಿಂದ ಮತಯಾಚನೆ ಮಾಡಲಾಯಿತು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೊಪ್ಪಳಿ ಮಹದೇವ ನಾಯಕ, ನಗರಸಭಾ ಉಪಾಧ್ಯಕ್ಷೆ ಸುಶೀಲಾ ಶಾಂತರಾಜು, 10ನೇ ವಾರ್ಡ್ ಸದಸ್ಯ ಜಿ.ಪಿ.ಶಿವಕುಮಾರ್ ಕಾರ್ಯಕರ್ತರೊಡನೆ ಮಾದರಿ ಮತಪತ್ರ ವಿತರಣೆ ಮಾಡಿದರು.

ನಗರಸಭಾ ಉಪಾಧ್ಯಕ್ಷೆ ಸುಶೀಲಾ ಶಾಂತರಾಜು ಮಾತನಾಡಿ, ಕಾಂಗ್ರೆಸ್ ಕಾರ್ಯಕರ್ತರು ಕಳೆದ ಐದಾರು ದಿನಗಳಿಂದ ಇಲ್ಲಿನ 31 ವಾರ್ಡ್‌ಗಳಲ್ಲೂ ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ಮತ ಕೇಳಿಕೊಂಡು ಮನೆ ಬಾಗಿಲಿಗೆ ಹೋದರೆ ಎ.ಆರ್.ಕೃಷ್ಣಮೂರ್ತಿ ಅವರನ್ನು ಗೆಲ್ಲಿಸುತ್ತೇವೆ ಎಂಬುದಾಗಿ ಮತದಾರರೇ ಹೇಳುತ್ತಿದ್ದಾರೆ. ಈ ಬಾರಿ ಕ್ಷೇತ್ರದಲ್ಲಿ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೊಪ್ಪಳಿ ಮಹದೇವನಾಯಕ, ನಗರಸಭಾ ಸದಸ್ಯ ಜಿ.ಪಿ.ಶಿವಕುಮಾರ್, ಸುಮಾ ಸುಬ್ಬಣ್ಣ, ರಾಘವೇಂದ್ರ, ಶಾಂತರಾಜು ಬಸ್ತೀಪುರ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಬಸ್ತೀಪುರ ರವಿ, ಮುಖಂಡರಾದ ನರಸಿಂಹ, ಮಾದಪ್ಪ, ಅಣಗಳ್ಳಿ ಬಸವರಾಜು, ಸಿದ್ದಾರ್ಥ, ಪಾಪಣ್ಣ, ಕೃಷ್ಣರಾಜ್, ನಟರಾಜುಮಾಳಿಗೆ, ಚಿನ್ನಸ್ವಾಮಿ ಮಾಳಿಗೆ, ಪ್ರಕಾಶ್, ಸುರೇಶ್ ಮತ್ತಿತರಿದ್ದರು.