ಜಿಲ್ಲೆ

ಎಂಸಿಡಿಸಿಸಿ ಚುನಾವಣೆ: 12 ಸ್ಥಾನಗಳಿಗೆ 29 ಅಭ್ಯರ್ಥಿಗಳ ಪೈಪೋಟಿ

ಮೈಸೂರು: ಕುತೂಹಲ ಮೂಡಿಸಿರುವ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಬ್ಯಾಂಕ್ (ಎಂಸಿಡಿಸಿಸಿ) ಚುನಾವಣಾ ಅಖಾಡದ ಸ್ಪಷ್ಟ ಚಿತ್ರಣ ಹೊರಬಿದ್ದಿದೆ.

ಕಣದಲ್ಲಿರುವ 29 ಅಭ್ಯರ್ಥಿಗಳು ಗೆಲುವಿಗಾಗಿ ಸೆಣಸಾಟ ನಡೆಸಲಿದ್ದಾರೆ. ಸ್ಪರ್ಧೆ ಬಿರುಸಿನಿಂದ ಕೂಡಿರುವುದರಿಂದ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದೆ. ನಾಲ್ವರು ಶಾಸಕರು, ಒಬ್ಬರು ಮಾಜಿ ಶಾಸಕರು ಅಖಾಡದಲ್ಲಿರುವುದು ವಿಶೇಷ.

ಅಭ್ಯರ್ಥಿಗಳಿಗೆ ಚಿಹ್ನೆ ಹಂಚಿಕೆಯನ್ನು ಮಾಡಿದ್ದು, ಅಭ್ಯರ್ಥಿಗಳ ಹೆಸರಿನೊಂದಿಗೆ ಚಿಹ್ನೆಯನ್ನು ಚುನಾವಣಾಧಿಕಾರಿ ಮೈಸೂರು ವಿಭಾಗಾಧಿಕಾರಿ ಪ್ರಕಟಿಸಿದ್ದಾರೆ.

19 ನಿರ್ದೇಶಕರ ಬಲವನ್ನು ಹೊಂದಿರುವ ಬ್ಯಾಂಕ್ ಆಡಳಿತ ಮಂಡಳಿಯಲ್ಲಿ 16 ಸ್ಥಾನಗಳ ಆಯ್ಕೆಗಾಗಿ ಚುನಾವಣೆ ನಡೆಯಬೇಕಿತ್ತು. ಆದರೆ, ಕೋರ್ಟ್ ತಡೆಯಾಜ್ಞೆ ಹಿನ್ನೆಲೆಯಲ್ಲಿ ಮೂರು ಕ್ಷೇತ್ರಗಳಿಗೆ ಎಲೆಕ್ಷನ್ ನಡೆಯುತ್ತಿಲ್ಲ. ಒಂದು ಕ್ಷೇತ್ರಕ್ಕೆ ವಿರೋಧ ಆಯ್ಕೆಯಾಗಿದೆ. ಹೀಗಾಗಿ, 12 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಗೆ 26ರಂದು ಮತದಾನದ ಬಳಿಕ ಎಣಿಕೆ ಪ್ರಕ್ರಿಯೆ ನಡೆಯಲಿದೆ. ಉಪವಿಭಾಗಾಧಿಕಾರಿ ಅವರು ಫಲಿತಾಂಶವನ್ನು ಪ್ರಕಟಿಸಲಾಗಿದ್ದಾರೆ.

ಮೈಸೂರು ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಆಯ್ಕೆಯಾಗಬೇಕಾದ ಪ್ರತಿನಿಧಿ ಕ್ಷೇತ್ರದ ಅಭ್ಯರ್ಥಿಗಳಾದ ಎಂ.ಕೆಂಚಪ್ಪ ಅವರಿಗೆ ಗ್ಯಾಸ್ ಸಿಲಿಂಡರ್, ಎಂ.ಜಿ.ಸಿದ್ದರಾಜು ಅವರಿಗೆ ಆಟೋರಿಕ್ಷಾ ಚಿಹ್ನೆ ಹಂಚಿಕೆ ಮಾಡಲಾಗಿದೆ.

ನಂಜನಗೂಡು ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಆಯ್ಕೆಯಾಗಬೇಕಾದ ಪ್ರತಿನಿಧಿ ಕ್ಷೇತ್ರದ ಅಭ್ಯರ್ಥಿಗಳಾದ ಕೆ.ರಾಜು ಅವರಿಗೆ ಆಟೋರಿಕ್ಷಾ, ಬಿ.ಎನ್.ಸದಾನಂದ ಅವರಿಗೆ ಗ್ಯಾಸ್ ಸಿಲಿಂಡರ್ ಚಿಹ್ನೆಯನ್ನು ನೀಡಲಾಗಿದೆ.

ಅಂತೆಯೇ ತಿ.ನರಸೀಪುರ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಆಯ್ಕೆಯಾಗಬೇಕಾದ ಪ್ರತಿನಿಧಿ ಕ್ಷೇತ್ರದಲ್ಲಿ ಸಿ.ಬಸವೇಗೌಡ( ಗ್ಯಾಸ್ ಸಿಲಿಂಡರ್), ಟಿ.ಪಿ.ಬೋರೇಗೌಡ( ಮೇಣದ ಬತ್ತಿ) ಕಣದಲ್ಲಿದ್ದಾರೆ.

ಎಚ್.ಡಿ.ಕೋಟೆ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಆಯ್ಕೆಯಾಗಬೇಕಾದ ಪ್ರತಿನಿಧಿ ಕ್ಷೇತ್ರದಲ್ಲಿ ಎಚ್.ಡಿ.ಕೋಟೆ ಶಾಸಕ ಅನಿಲ್ ಚಿಕ್ಕಮಾದು ಅವರಿಗೆ ಗ್ಯಾಸ್ ಸಿಲಿಂಡರ್, ಮಾದಪ್ಪ ಅವರಿಗೆ ದ್ರಾಕ್ಷಿ, ಜಿ.ಕೆ.ಲಕ್ಷ್ಮೀಪ್ರಸಾದ್ ಅವರಿಗೆ ಆಟೋರಿಕ್ಷಾ, ಶಿವನಂಜೇಗೌಡ ಅವರಿಗೆ ಮೇಣದ ಬತ್ತಿ ಗುರುತು ನೀಡಲಾಗಿದೆ.

ಹುಣಸೂರು ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಆಯ್ಕೆಯಾಗಬೇಕಾದ ಪ್ರತಿನಿಧಿ ಕ್ಷೇತ್ರಯಲ್ಲಿ ಗೋವಿಂದೇಗೌಡ( ಕಪಾಟು), ಜೆ.ಶಿವಣ್ಣ( ಹಣ್ಣುಗಳ ಬುಟ್ಟಿ), ಹುಣಸೂರು ಶಾಸಕ ಜಿ.ಡಿ.ಹರೀಶ್(ಆಟೋರಿಕ್ಷಾ) ಕಣದಲ್ಲಿದ್ದಾರೆ.

ಪಿರಿಯಾಪಟ್ಟಣ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಆಯ್ಕೆಯಾಗಬೇಕಾದ ಪ್ರತಿನಿಧಿ ಕ್ಷೇತ್ರದಲ್ಲಿ ಸಿ.ಎನ್.ರವಿ(ಹಣ್ಣುಗಳ ಬುಟ್ಟಿ), ಈ.ಪಿ.ಲೋಕೇಶ್(ಆಟೋರಿಕ್ಷಾ) ನಡುವೆ ಸ್ಪರ್ಧೆ ಏರ್ಪಟ್ಟಿದೆ.

ಕೆ.ಆರ್.ನಗರ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಆಯ್ಕೆಯಾಗಬೇಕಾದ ಪ್ರತಿನಿಧಿ ಕ್ಷೇತ್ರದಲ್ಲಿ ಎಂಎಲ್‌ಸಿ ಎಚ್.ವಿಶ್ವನಾಥ್ ಪುತ್ರ ಅಮಿತ್ ವಿ.ದೇವರಹಳ್ಳಿ(ಕಿರೀಟ್), ಕೆಆರ್ ನಗರ ಶಾಸಕ ರವಿಶಂಕರ್ ತಂದೆ ದೊಡ್ಡಸ್ವಾಮೇಗೌಡ(ಆಟೋರಿಕ್ಷಾ), ಎಸ್.ಸಿದ್ದೇಗೌಡ(ಗ್ಯಾಸ್ ಸಿಲಿಂಡರ್) ಅವರ ನಡುವೆ ಗೆಲುವಿಗಾಗಿ ಪೈಪೋಟಿ ನಿರ್ಮಾಣವಾಗಿದೆ.

ಚಾಮರಾಜನಗರ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಆಯ್ಕೆಯಾಗಬೇಕಾದ ಪ್ರತಿನಿಧಿ ಕ್ಷೇತ್ರದಲ್ಲಿ ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರಿಗೆ ಟ್ರಾೃಕ್ಟರ್ ಓಡಿಸುತ್ತಿರುವ ರೈತ, ಇವರ ಪ್ರತಿಸ್ಪರ್ಧಿ ಪಿ.ವೃಷಬೇಂದ್ರಪ್ಪ ಅವರಿಗೆ ಆಟೋ ರಿಕ್ಷಾ ಚಿಹ್ನೆ ಹಂಚಿಕೆಯಾಗಿದೆ.

ಗುಂಡ್ಲುಪೇಟೆ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಆಯ್ಕೆಯಾಗಬೇಕಾದ ಪ್ರತಿನಿಧಿ ಕ್ಷೇತ್ರದಲ್ಲಿ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಅವರಿಗೆ ಟ್ರಾೃಕ್ಟರ್ ಓಡಿಸುತ್ತಿರುವ ರೈತ, ಎಸ್.ಎಂ.ವೀರಪ್ಪ ಅವರಿಗೆ ಆಟೋರಿಕ್ಷಾ ಚಿಹ್ನೆಯನ್ನು ನೀಡಲಾಗಿದೆ.

ಕೊಳ್ಳೇಗಾಲ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಆಯ್ಕೆಯಾಗಬೇಕಾದ ಪ್ರತಿನಿಧಿ ಕ್ಷೇತ್ರದಲ್ಲಿ ಮಾಜಿ ಶಾಸಕ ಆರ್.ನರೇಂದ್ರ(ಟ್ರಾೃಕ್ಟರ್ ಓಡಿಸುತ್ತಿರುವ ರೈತ), ಬಿ.ಎಸ್.ಮಲ್ಲೇಶ್( ಆಟೋರಿಕ್ಷಾ) ನಡುವೆ ಸ್ಪರ್ಧೆ ಇದೆ.

ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪಟ್ಟಣ ಸಹಕಾರ ಬ್ಯಾಂಕ್‌ಗಳು, ಗೃಹ ನಿರ್ಮಾಣ ಸಹಕಾರ ಸಂಘಗಳಿಂದ ಆಯ್ಕೆಯಾಗಬೇಕಾದ ಪ್ರತಿನಿಧಿಯ ಕ್ಷೇತ್ರದಲ್ಲಿ ಪಾಲಿಕೆ ಮಾಜಿ ಸದಸ್ಯ ಎಸ್‌ಬಿಎಂ ಮಂಜು(ಆಟೋರಿಕ್ಷಾ), ಜಿ.ಎನ್.ಮಂಜುನಾಥ್(ಗ್ಯಾಸ್ ಸಿಲಿಂಡರ್), ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್(ಬ್ರೀಫ್‌ಕೇಸ್) ಕಣದಲ್ಲಿದ್ದಾರೆ.

ಜಿಲ್ಲಾ ಮೇಲ್ಪಟ್ಟು ಕಾರ್ಯವ್ಯಾಪ್ತಿ ಹೊಂದಿರುವ ಸಹಕಾರ ಸಂಘಗಳು, ಸಹಕಾರ ಬ್ಯಾಂಕ್‌ಗಳ ಕ್ಷೇತ್ರದಿಂದ ಆಯ್ಕೆಯಾಗಬೇಕಾದ ಪ್ರತಿನಿಧಿಯ ಕ್ಷೇತ್ರದಲ್ಲಿ ಎಸ್.ಚಂದ್ರಶೇಖರ್(ಗ್ಯಾಸ್ ಸಿಲಿಂಡರ್), ಟಿ.ರಾಮೇಗೌಡ (ಆಟೋರಿಕ್ಷಾ) ಕಣದಲ್ಲಿ ಉಳಿದುಕೊಂಡಿದ್ದಾರೆ.

ಸ್ಪರ್ಧೆಯಿಂದ ಹಿಂದೆ ಸರಿದವರು:

ಆರು ಜನರು ನಾಮಪತ್ರವನ್ನು ವಾಪಸ್ ಪಡೆದು ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ.

ತಿ.ನರಸೀಪುರ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಆಯ್ಕೆಯಾಗುಬೇಕಾದ ಪ್ರತಿನಿಧಿ ಕ್ಷೇತ್ರದಿಂದ ಮಾಜಿ ಶಾಸಕಿ ಜೆ.ಸುನಿತಾ ವೀರಪ್ಪಗೌಡ, ಹುಣಸೂರು ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಆಯ್ಕೆಯಾಗಬೇಕಾದ ಪ್ರತಿನಿಧಿ ಕ್ಷೇತ್ರದಿಂದ ಉದ್ಯಮಿ ಎಚ್.ಪಿ.ಅಮರ್‌ನಾಥ್,

ಕೊಳ್ಳೇಗಾಲ, ಹನೂರು ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಆಯ್ಕೆಯಾಗಬೇಕಾದ ಪ್ರತಿನಿಧಿ ಕ್ಷೇತ್ರದಿಂದ ಸಿ.ನಾಗರಾಜು, ಜಿಲ್ಲಾ ಮೇಲ್ಪಟ್ಟು ಕಾರ್ಯವ್ಯಾಪ್ತಿ ಹೊಂದಿರುವ ಸಹಕಾರ ಸಂಘಗಳು, ಸಹಕಾರ ಬ್ಯಾಂಕ್‌ಗಳ ಕ್ಷೇತ್ರದಿಂದ ಆಯ್ಕೆಯಾಗಬೇಕಾದ ಪ್ರತಿನಿಧಿಯ ಕ್ಷೇತ್ರದಿಂದ ಎನ್.ಮಂಜುನಾಥ್, ಎಚ್.ಜಿ.ಶಿವಶಂಕರ್, ಎಚ್.ಎಸ್.ಚಂದ್ರೇಗೌಡ ನಾಮಪತ್ರವನ್ನು ವಾಪಸ್ ಪಡೆದುಕೊಂಡಿದ್ದಾರೆ.