ಜಿಲ್ಲೆ

ಎಂಸಿಎಸ್ ಪ್ರೌಢಶಾಲೆಯಲ್ಲಿ ಸ್ವಾತಂತ್ರೃ ದಿನ

ಕೊಡಗು : ಗೋಣಿಕೊಪ್ಪಲಿನ ಪೊನ್ನಪ್ಪಸಂತೆಯ ಎಂಸಿಎಸ್ ಪ್ರೌಢಶಾಲೆಯಲ್ಲಿ ನಡೆದ ಸ್ವಾತಂತ್ರೊೃೀತ್ಸವದಲ್ಲಿ ಮುಖ್ಯ ಶಿಕ್ಷಕಿ ಸಿ.ಎಂ. ರಾಧ ಧ್ವಜಾರೋಹಣ ನೆರವೇರಿಸಿದರು.


ನಂತರ ಪೊನ್ನಪ್ಪಸಂತೆಯ ವಿವಿಧ ಬೀದಿಗಳಲ್ಲಿ ದೇಶಭಕ್ತಿಯ ಘೋಷಣೆಗಳ ಮೂಲಕ ಶಿಕ್ಷಕರು-ವಿದ್ಯಾರ್ಥಿಗಳು ಮೆರವಣಿಗೆ ನಡೆಸಿದರು.
ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಪುಚ್ಚಿಮಾಡ ಟಿ.ಪೂಣಚ್ಚ ವಹಿಸಿ ಮಾತನಾಡಿ, ಯುವಜನತೆ ದೇಶಕ್ಕಾಗಿ ಹೋರಾಡಿದ ಮಹನೀಯರ ಇತಿಹಾಸ ತಿಳಿಯುವ ಪ್ರಯತ್ನ ಮಾಡಬೇಕು. ಹಿರಿಯರ ಆದರ್ಶ ಪಾಲಿಸುವ ಮೂಲಕ ಭವ್ಯಭಾರತ ನಿರ್ಮಾಣಕ್ಕೆ ಮೆಟ್ಟಿಲಾಗುವಂತೆ ಕರೆ ನೀಡಿದರು.


ಸಹ ಶಿಕ್ಷಕ ಎಂ ಗುಡುದಪ್ಪ, ಗೌರವ ಕಾರ್ಯದರ್ಶಿ ಪುಚ್ಚಿಮಾಡ ಜಿ ಪ್ರಕಾಶ್ ಪೂಣಚ್ಚ, ನಿರ್ದೇಶಕರಾದ ಪುಳ್ಳಂಗಡ ಬಿ. ನಟೇಶ್, ಪುಚ್ಚಿಮಾಡ ಪಿ.ಬೋಪಯ್ಯ, ಚೆಪ್ಪುಡಿರ ಪಿ. ಮಾಚಯ್ಯ, ಪುಳ್ಳಂಗಡ ಎಸ್.ಪೂಣಚ್ಚ, ಭಾರತೀಯ ನೌಕಾದಳದ ನಿವೃತ್ತ ನೌಕರ ಚೇಮೀರ ಗಣಪತಿ, ಶಿಕ್ಷಕಕರು, ಸಿಬ್ಬಂದಿ, ಮಕ್ಕಳು ಇದ್ದರು.