ಚಿತ್ರದುರ್ಗ: ಜಿಲ್ಲೆಯಲ್ಲಿ ಕಳೆದು ಹೋಗಿದ್ದ 8 ಲಕ್ಷ ರೂ. ಮೌಲ್ಯದ 80 ಮೊಬೈಲ್‌ಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್‌ಕುಮಾರ್ ಮೀನಾ ಅವರು ಸೋಮವಾರ ಸಂಬಂಧಿಸಿದ ಮಾಲೀಕರಿಗೆ ಹಸ್ತಾಂತರಿಸಿದರು.
ಸಿಇಎನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸರು ಸಿಇಐಆರ್ ತಂತ್ರಾಂಶದ ಸಹಾಯದಿಂದ ಕರ್ನಾಟಕದಲ್ಲಿ 54, ಕೇರಳ-18, ಆಂಧ್ರ ಪ್ರದೇಶ-6, ಗೋವಾ-2 ಸೇರಿ ಬೆಲೆ ಬಾಳುವ 80 ಮೊಬೈಲ್‌ಗಳನ್ನು ಪತ್ತೆ ಹಚ್ಚಿದ್ದಾರೆ.
ಎಎಸ್‌ಪಿ ಕುಮಾರಸ್ವಾಮಿ ಮಾರ್ಗದರ್ಶನ ನೀಡಿದ್ದಾರೆ. ಠಾಣೆಯ ಪಿಐ ಎನ್.ವೆಂಕಟೇಶ್ ಮತ್ತು ತಂಡ ಕಳವಾಗಿದ್ದ ಮೊಬೈಲ್‌ಗಳನ್ನು ಪತ್ತೆ ಹಚ್ಚುವಲ್ಲಿ ಸಫಲವಾಗಿದೆ ಎಂದು ಎಸ್‌ಪಿ ತಿಳಿಸಿದರು.