ಚಿಕ್ಕಮಗಳೂರು: ಎರಡೂವರೆ ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆ ಎಂದಿಗೂ ಅಳಿಯದಿರುವ ಏಕೈಕ ಭಾಷೆಯಾಗಿದೆ. ಶಾಸ್ತಿçÃಯ ಸ್ಥಾನಮಾನವನ್ನು ಕೆಲವೇ ಕೆಲವು ಭಾಷೆಗಳು ಮಾತ್ರ ಪಡೆದಿದ್ದು, ಆ ಪೈಕಿ ಕನ್ನಡ ಭಾಷೆಯೂ ಒಂದು ಎಂದು ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ತಿಳಿಸಿದರು.
ನಗರದ ಕನ್ನಡ ಭವನದಲ್ಲಿ ಶನಿವಾರ ಜಿಲ್ಲಾ ಕಸಾಪದಿಂದ ಆಯೋಜಿಸಿದ್ಧ ೭೦ನೇ ಕನ್ನಡ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ವಿಶ್ವದಲ್ಲಿ ಅತ್ಯಂತ ಸುಂದರವಾದ ಲಿಪಿ ಇರುವುದು ಕನ್ನಡ ಭಾಷೆಗೆ ಎಂದು ಸಾಬೀತಾಗಿದೆ. ಹಾಗೆ ಅತ್ಯಂತ ಶ್ರೀಮಂತ ಭಾಷೆಗಳಲ್ಲಿ ಕನ್ನಡ ಭಾಷೆಯೂ ಒಂದು. ಮಾತನಾಡಲು, ಓದಲು, ಬರೆಯಲು ಕನ್ನಡ ಸರಳವಾಗಿದೆ ಎಂದರು.
ಜಿಲ್ಲಾ ಕಸಾಪ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್ ಭುವನೇಶ್ವರಿ ಪುತ್ತಳಿಗೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ನಮ್ಮ ಸಂಸ್ಕೃತಿಯ ಧಾತು ಮತ್ತು ಅಸ್ಮಿತೆ ಕನ್ನಡ ಭಾಷೆಯಲ್ಲಿ ಅಡಗಿದೆ. ಸಂಸ್ಕೃತಿ ಉಳಿದಾಗ ಮಾತ್ರ ನಮ್ಮ ಭಾಷೆ ಉಳಿಯಲು ಸಾಧ್ಯವಿದೆ ಎಂದರು.
ಯಾವುದೇ ಭಾಷೆ ಅಳಿಯುವುದಾದರೆ ಸಂಸ್ಕೃತಿಯೊAದಿಗೆ ಆ ಭಾಷೆ ಅಳಿಯುತ್ತದೆ ಎನ್ನುವುದಕ್ಕೆ ಹಲವು ಉದಾಹರಣೆಗಳಿವೆ. ಆದುದರಿಂದ ನಮ್ಮ ಭಾಷೆಯನ್ನು ಸಂಸ್ಕೃತಿಯೊAದಿಗೆ ಉಳಿಸಿ ಕೊಳ್ಳೋಣ. ಅತ್ಯಂತ ಶ್ರೀಮಂತವಾದ ಭಾಷೆ ನಮ್ಮದಾಗಿದ್ದು ಅದನ್ನು ಉಳಿಸುವ ಮತ್ತು ಬೆಳೆಸುವ ಹೊಣೆಗಾರಿಕೆ ನಮ್ಮೆಲ್ಲರದ್ದಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಸಾಪ ತಾಲೂಕು ಅಧ್ಯಕ್ಷ ದಯಾನಂದ್, ಮಹಿಳಾ ಘಟಕದ ಅಧ್ಯಕ್ಷೆ ವಿಜಯಲಕ್ಷ್ಮಿ ವಿಶ್ವನಾಥ್, ಹೋಬಳಿ ಘಟಕದ ಅಧ್ಯಕ್ಷ ವೀಣಾ ಮಲ್ಲಿಕಾರ್ಜುನ್, ಜಿಲ್ಲಾ ಪ್ರಧಾನ ಸಂಚಾಲಕರಾದ ಗುರುವೇಶ್, ರೂಪ ನಾಯಕ್, ಬೆನೆಡಿಕ್ಟ್ ಜೇಮ್ಸ್, ಸಾಹಿತಿಗಳಾದ ಲಕ್ಷö್ಮಣಗೌಡ, ಆಶಾರಾಜು, ಸತೀಶ್, ಪೂರ್ಣೇಶ್, ಸಂದೀಪ್, ಶಕುಂತಲಾ, ವೀರೇಗೌಡ ಉಪಸ್ಥಿತರಿದ್ದರು.