ಜಿಲ್ಲೆ

ಸಂಕಷ್ಟದಲ್ಲಿದ್ದ ಬಡವರಿಗೆ ಸರ್ಕಾರ ಅಭಯ, ಓರೋಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಆಹಾರ ಕಿಟ್ ವಿತರಿಸಿದ ಸಚಿವ ಎಂಟಿಬಿ ನಾಗರಾಜ್

ಬೆಂಗಳೂರು: ಕರೊನಾ ಸೋಂಕು ನಿವಾರಣೆಗೆ ಲಾಕ್‌ಡೌನ್‌ನ ಅನಿವಾರ್ಯವಾಗಿತ್ತು. ಸರ್ಕಾರ ಈ ಬಗ್ಗೆ ಸಾಕಷ್ಟು ನೆರವು ನೀಡಿದೆ ಆದರೂ ಬಡವರ ಬದುಕು ಸಂಕಷ್ಟಕ್ಕೆ ಸಿಲುಕಿದೆ ಎಂದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ತಿಳಿಸಿದರು.

ತಾಲೂಕಿನ ಓರೋಹಳ್ಳಿ ಗ್ರಾಪಂ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಬಡವರಿಗೆ ದಿನಸಿ ಕಿಟ್ ವಿತರಿಸಿ ಮಾತನಾಡಿದರು. ಕರೊನಾ ಸೋಂಕು ದೇಶವನ್ನೆ ಕಾಡಿದೆ. ಇಂತಹ ಸಂಧರ್ಭದಲ್ಲಿ ಸರ್ಕಾರ ಸೋಂಕು ನಿವಾರಣೆಗೆ ಲಾಕ್‌ಡೌನ್ ಅಸ್ತ್ರ ಪ್ರಯೋಗ ಮಾಡಿತ್ತು. ಇದರಿಂದ ಸಾಕಷ್ಟು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಬಡವರ ನೆರವಿಗೆ ನಿಲ್ಲುವ ದೃಷ್ಟಿಯಿಂದ ಪ್ರತಿ ಮನೆಗೆ ದಿನಸಿ ಕಿಟ್ ವಿತರಿಸಲಾಗುತ್ತಿದೆ ಎಂದರು.

ಬಿಜೆಪಿ ಯುವ ಮೋರ್ಚಾ ತಾಲೂಕು ಅಧ್ಯಕ್ಷ ತವಟಹಳ್ಳಿ ರಾಮು ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಕರೊನಾ ಸೋಂಕು ನಿವಾರಣೆಗೆ ದಿಟ್ಟ ಹೆಜ್ಜೆ ಇಟ್ಟಿದೆ. ಬಡವರ ಆರ್ಥಿಕ ಪರಿಸ್ಥಿತಿ ಅರಿತು, ಹಂತಹ ಹಂತವಾಗಿ ಲಾಕ್‌ಡೌನ್ ಸಡಿಲಿಕೆ ಮಾಡಿದೆ. ಅಲ್ಲದೆ ಪ್ರತಿಯೊಬ್ಬರಿಗೂ ವ್ಯಾಕ್ಸಿನ್ ನೀಡುವ ಮೂಲಕ ಸೋಂಕಿನ ತೀವ್ರತೆ ಕುಗ್ಗಿಸುವ ಪ್ರಯತ್ನ ಮಾಡಿದೆ ಎಂದರು.

ತಾಪಂ ಮಾಜಿ ಅಧ್ಯಕ್ಷ ವಿ.ಸಿ.ಜಯದೇವಯ್ಯ, ಸದಸ್ಯ ಸೋಲೂರು ಮುನಿರಾಜು, ತಾಲೂಕು ವಾಲ್ಮೀಕಿ ಸಂಘದ ಸದಸ್ಯ ತವಟಹಳ್ಳಿ ಮುನಿಯಪ್ಪ, ತಗ್ಗಲಿ ಹೊಸಹಳ್ಳಿ ಗ್ರಾಪಂ ಸದಸ್ಯ ಸಿದ್ದರಾಜು, ಗ್ರಾಪಂ ಮಾಜಿ ಸದಸ್ಯ ಅತ್ತಿವಟ್ಟ ನಾಗೇಶ್, ಮುಖಂಡರಾದ ಸೋಲೂರು ಮುನಿರಾಜು, ರಾಜಣ್ಣ, ಚಿಕ್ಕತಗ್ಗಲಿ ಮನೋಹರ್, ಕೇಶವಮೂರ್ತಿ, ಮಂಜುನಾಥ್ ಇದ್ದರು.