ಭಾಲ್ಕಿ ತಾಲೂಕಿನ ನೀಲಮನಳ್ಳಿ ತಾಂಡಾ ಬಳಿ ರೇಂಜ್ ರೋವರ್ ಕಾರು ಸುಟ್ಟು ಕರಕಲಾಗಿರುವುದು. 
ಜಿಲ್ಲೆ

ಎಂಜಿನ್‌ನಲ್ಲಿ ಬೆಂಕಿ, ಸುಟ್ಟು ಕರಕಲಾದ ಕಾರು

ಭಾಲ್ಕಿ: ನೀಲಮನಳ್ಳಿ ತಾಂಡಾ ಬಳಿ ರೇಂಜ್ ರೋವರ್ ಕಾರಿನಲ್ಲಿ ಮಂಗಳವಾರ ಬೆಂಕಿ ಕಾಣಿಸಿಕೊಂಡು ಸಂಪೂರ್ಣ ಸುಟ್ಟು ಹೋಗಿದೆ.

ಬೀದರ್‌ನ ಕೆಇಬಿ ಕಾಲನಿ ನಿವಾಸಿ ರಾಜಶೇಖರ ಪಾಟೀಲ ಕಾರಿನಲ್ಲಿ ಹುಮನಾಬಾದ್‌ನಿಂದ ಬೀದರ್‌ಗೆ ಹೋಗುತ್ತಿದ್ದಾಗ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಗಮನಿಸಿದ ತಕ್ಷಣ ಕಾರನ್ನು ನೀಲಮನಳ್ಳಿ ತಾಂಡಾ ಬಳಿ ರಸ್ತೆ ಪಕ್ಕ ನಿಲ್ಲಿಸಿ ಕೆಳಗಿಳಿದಿದ್ದಾರೆ. ಕೆಲವೇ ನಿಮಿಷದಲ್ಲಿ ಬೆಂಕಿ ಕಾರಿಗೆ ಆವರಿಸಿದೆ.

ಅಗ್ನಿಶಾಮಕ ಸಿಬ್ಬಂದಿ ಬಂದು ನಂದಿಸುವಷ್ಟರಲ್ಲಿ ಸಂಪೂರ್ಣ ಸುಟ್ಟು ಹೋಗಿದೆ. ಬೀದರ್ ಅಗ್ನಿಶಾಮಕ ಠಾಣಾಧಿಕಾರಿ ನವೀನಬಾಬು, ಸಿಬ್ಬಂದಿ ರವಿ, ಶ್ರಿಕಾಂತ, ಸೆಲ್ವಿನ್, ಲಕ್ಷ್ಮೀಪುತ್ರ ಕಾರ್ಯಾಚರಣೆ ನಡೆಸಿದರು.