ಜಿಲ್ಲೆ

ಎಂಎಸ್‌ಪಿ ಕಾನೂನು ಜಾರಿ ಮಾಡಿ

ಕಲಬುರಗಿ: ಡಾ.ಸ್ವಾಮಿನಾಥನ್ ಆಯೋಗದ ವರದಿ ಪ್ರಕಾರ ಕನಿಷ್ಟ ಬೆಂಬಲ ಬೆಲೆ (ಎಂಎಸ್‌ಪಿ) ಕಾನೂನು ಜಾರಿ ಮಾಡಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಆಗ್ರಹಿಸಿದರು. ಕೇಂದ್ರ ಸರ್ಕಾರ ಅಸಮಂಜಸ ಎಂಎಸ್‌ಪಿ ಘೋಷಣೆ ಮಾಡಿದ್ದು ಖಂಡನೀಯ. ಸದ್ಯ ಎ೨+೫೦ ಸೇರಿಸಿ ಬೆಂಬಲ ಬೆಲೆ ಘೋಷಣೆ ಮಾಡಿ ರೈತರಿಗೆ ಮೋಸ ಮಾಡಿದೆ. ಸಿ೨+೫೦ ಸೇರಿಸಿ ಬೆಂಬಲ ಬೆಲೆ ನೀತಿ ಘೋಷಣೆ ಮಾಡಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು. ಪದ್ಮಿನಿ ಕಿರಣಗಿ ಇತರರಿದ್ದರು.