ವಿಜಯಪುರ ತಾಲೂಕಿನ ಹೊನಗನಹಳ್ಳಿ ಗ್ರಾಮದಲ್ಲಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಿಸಿದ ಸಂಜೀವಿನಿ (ಎನ್​ಆರ್​ಎಲ್​ಎಂ) ಟಕವನ್ನು ಸಚಿವ ಎಂ.ಬಿ. ಪಾಟೀಲ ಉದ್ಘಾಟಿಸಿದರು. ನಚಿಕೇತನ ಬಿದರಿ, ಸಂಗಮೇಶ ಬಬಲೇಶ್ವರ ಮತ್ತಿತರರಿದ್ದಾರೆ. 
ಜಿಲ್ಲೆ

ಎಂಎಸ್​ಐಎಲ್​ ಚಿಟ್ ಫಂಡ್ ವ್ಯವಸ್ಥೆ ಜಾರಿಗೆ ಚಿಂತನೆ

ವಿಜಯಪುರ: ಕೇರಳ ಮಾದರಿಯಲ್ಲಿ ಎಂಎಸ್​ಐಎಲ್​ ಮೂಲಕ ಚಿಟ್​ಫಂಡ್​ ವ್ಯವಸ್ಥೆ ಜಾರಿಗೊಳಿಸಿ ಮಹಿಳಾ ಸ್ವಸಹಾಯ ಗುಂಪುಗಳಿಗೆ ಶಕ್ತಿ ತುಂಬಲು ಚಿಂತನೆ ನಡೆದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ತಿಳಿಸಿದರು.

ತಾಲೂಕಿನ ಹೊನಗನಹಳ್ಳಿ ಗ್ರಾಮದಲ್ಲಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಿಸಿದ ಸಂಜೀವಿನಿ (ಎನ್​ಆರ್​ಎಲ್​ಎಂ) ಟಕದ ಉದ್ಘಾಟನೆ, ಗ್ರಾ.ಪಂ. ಕಟ್ಟಡಕ್ಕೆ ಅಡಿಗಲ್ಲು ಹಾಗೂ ಸಿಎಸ್​ಆರ್​ ಯೋಜನೆಯಡಿಯಡಿ ಬಸ್​ ನಿಲ್ದಾಣ ನಿರ್ಮಾಣಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.

ತಮಿಳುನಾಡು ಮತ್ತು ಕೇರಳ ರಾಜ್ಯದಲ್ಲಿ ಚಿಟ್​ಫಂಡ್​ ವ್ಯವಸ್ಥೆ ಬಹಳ ಯಶಸ್ವಿಯಾಗಿದ್ದು, ಕೇರಳದಲ್ಲಿ ಸುಮಾರು 25000 ಕೋಟಿ ರೂ. ಗಳಿಗಿಂತ ಹೆಚ್ಚಿನ ವ್ಯವಹಾರವಾಗುತ್ತಿದೆ. ನಮ್ಮ ರಾಜ್ಯದಲ್ಲಿ ಅಂಥಹದ್ದೇ ವ್ಯವಸ್ಥೆ ಜಾರಿಗೊಳಿಸಿ ಸ್ವಸಹಾಯ ಗುಂಪುಗಳಿಗೆ ಶಕ್ತಿ ತುಂಬಲಾಗುವುದು. ಪಿಗ್ಮಿ ಏಜೆಂಟರ ರೀತಿ ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯರಿಗೆ ಅದರಿಂದ ಉದ್ಯೋಗ ಲಭಿಸಿ ಗೃಹಲ್ಮ ಯೋಜನೆಯ ಹಣವೂ ಸದುಪಯೋಗವಾಗಲಿದೆ. ಸರ್ಕಾರವೇ ಅದನ್ನು ನಡೆಸುವುದರಿಂದ ಜನರಿಗೆ ವಿಶ್ವಾಸ ಹೆಚ್ಚಲಿದ್ದು, ಹಣವೂ ಸುರತವಾಗಿರಲಿದೆ. ತ್ವರಿತವಾಗಿ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ರೇವಣಸಿದ್ಧೇಶ್ವರ ಏತ ನೀರಾವರಿ ಯೋಜನೆ ಎರಡನೇ ಹಂತದಲ್ಲಿ ತೊರವಿ, ಅತಾಲಟ್ಟಿ, ಕಣಮುಚನಾಳ, ತೊನಶ್ಯಾಳ, ಹೊನಗನಹಳ್ಳಿ, ಸವನಹಳ್ಳಿಗೆ ನೀರಾವರಿ ಒದಗಿಸಲಾಗುವುದು. ಎರಡ್ಮೂರು ವರ್ಷಗಳಲ್ಲಿ ಈ ಭಾಗದಲ್ಲಿ ನೀರಾವರಿಯಾಗಲಿದೆ. ಶ್ರೀದಲ್ಲಿ 2ನೇ ಪ್ಯಾಕೆಜ್​ ಟೆಂಡರ್​ ಕರೆದು ಕೆಲಸ ಪ್ರಾರಂಭ ಮಾಡಲು, ಸಿಎಂ ಮತ್ತು ನೀರಾವರಿ ಸಚಿವ, ಡಿಸಿಎಂ ಅವರಿಗೆ ಮನವಿ ಮಾಡಲಾಗುವುದು. ಈಗಾಗಲೇ ಜಾಕವೆಲ್​ ಕೆಲಸ ಪ್ರಾರಂಭವಾಗಿದೆ ಎಂದು ಸಚಿವರು ತಿಳಿಸಿದರು.

ಹೊನಗನಹಳ್ಳಿ& ದದಾಮಟ್ಟಿ ರಸ್ತೆ ಕಾಮಗಾರಿಯು 1 ಕೋಟಿ ರೂ. ಗಳ ವೆಚ್ಚದಲ್ಲಿ ಪ್ರಾರಂಭವಾಗಿದೆ. ಸವನಹಳ್ಳಿ& ಹಿಟ್ನಳ್ಳಿ ಕಾಮಗಾರಿ ಮುಕ್ತಾಯವಾಗಿದೆ. ಹೊನಗನಹಳ್ಳಿ&ಸನವಹಳ್ಳಿ ರಸ್ತೆಗೆ ಶ್ರೀದಲ್ಲಿ ಚಾಲನೆ ನೀಡಲಾಗುವುದು. ಹೊನಗನಹಳ್ಳಿ& ಸವನಹಳ್ಳಿ ಅಂಡರಪಾಸ್​ ಸೇತುವೆಗೆ 80 ಲ ರೂ., ನೀಡಿ ಈಗಾಗಲೇ ಟೆಂಡರ್​ ಕರೆದಿದೆ. ನಮ್ಮ ಮತೇತ್ರದ ಶಾಲೆಗಳಿಗೆ ಕಟ್ಟಡ ನೀಡಲು ಸಿಎಸ್​ಆರ್​ನಲ್ಲಿ ಮುಂದಿನ ಆರು ತಿಂಗಳಲ್ಲಿ ಶಾಲೆಗಳ ರೂಂ, ಡೆಸ್ಕ್​, ಶೌಚಗೃಹ ಸೇರಿದಂತೆ ಸಕಲ ಮೂಲ ಸೌಕರ್ಯ ಕಲ್ಪಿಸಲಾಗುವುದು ಎಂದು ಹೇಳಿದರು.

ಈಗಾಗಲೇ, ಮತೇತ್ರದಲ್ಲಿ ಶಾಲೆಗಳ ಪರಿಸ್ಥಿತಿ ಕುರಿತು ಸಮೀೆ ನಡೆದಿದೆ. ಅದರಂತೆ ಎಲ್ಲ ಶಾಲೆಗಳಿಗೆ ಮೂಲ ಸೌಕರ್ಯ ಒದಗಿಸಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಕ್ರಮಕೈಗೊಳ್ಳಲಾಗುವುದು. ಕಾರಜೋಳ ಬಳಿ ಒಂದು ಬಾವಿ ತೆರೆದು 2.10 ಕೋಟಿ ರೂ. ಗಳ ವೆಚ್ಚದಲ್ಲಿ ಕೆಲಸ ನಡೆದಿದ್ದು, ಅಲ್ಲಿಂದ ಹೊನಗನಹಳ್ಳಿ, ಸವನಹಳ್ಳಿ, ತೊನಶ್ಯಾಳಕ್ಕೆ ನೀರು ಪೂರೈಕೆಯಾಗಲಿದೆ. ಈ ಬೇಸಿಗೆಯೊಳಗೆ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ಬಿಸಿಲಿನ ತಾಪಮಾನ ಎದುರಿಸಲು ತಯಾರಿ ನಡೆಸಲು ಹಾಗೂ ಕುಡಿಯಲು ನೀರು ಪೂರೈಸಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ಫಾಕ್ಸಕಾನ್​ ಕಂಪನಿಯಿಂದ ಬೆಂಗಳೂರಿನಲ್ಲಿ 50 ಸಾವಿರ ನೌಕರಿ ಕೊಡುತ್ತಿದ್ದು, ನಮ್ಮ ಜಿಲ್ಲೆಗೆ ಬಂದು ಉದ್ಯೋಗ ಮೇಳ ನಡೆಸಲು ಮತ್ತು ಈ ಮೂಲಕ ಇನ್ನೂ 15&20 ಕಂಪನಿಗಳನ್ನು ಆಹ್ವಾನಿಸಿ ನಮ್ಮ ಜಿಲ್ಲೆಯಲ್ಲಿ ಕನಿಷ್ಠ 10 ಸಾವಿರ ಯುವಕರಿಗೆ ಉದ್ಯೋಗ ಒದಗಿಸಲುವ ಗುರಿ ಇದೆ. ನೀರಾವರಿ ಬಳಿಕ ಜಿಲ್ಲೆಯಲ್ಲಿ ಔದ್ಯೋಗಿಕರಣ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಜಿಲ್ಲೆಯನ್ನು ರಾಜ್ಯದಲ್ಲಿಯೇ ನಂಬರ್​ ಒನ್​ ಜಿಲ್ಲೆ ಮಾಡಲು ಗುರಿ ಹೊಂದಿದ್ದೇನೆ ಎಂದರು.

ಗ್ರಾಮಸ್ಥರಿಗೆ ಅನುಕೂಲವಾಗಿದ್ದ ಗಾರ್ಮೆಂಟ್​ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರು ಸದ್ಯ ನೌಕರಿ ಕಳೆದುಕೊಂಡಿದ್ದು, ಅದಕ್ಕೆ ಪರ್ಯಾಯ ವ್ಯವಸ್ಥೆ ಬಗ್ಗೆ ಚಿಂತನೆ ನಡೆದಿದೆ ಎಂದು ಹೇಳಿದರು.

ಬಾಲವಿಕಾಸ ಅಕಾಡೆಮಿ ಅಧ್ಯ ಸಂಗಮೇಶ ಬಬಲೇಶ್ವರ, ಗ್ರಾ.ಪಂ. ಅಧ್ಯ ನಚಿಕೇತನ ಬಿದರಿ, ಉಪಾಧ್ಯ ರಮೇಶ ಕಾಂಬಳೆ, ಮುಖಂಡರಾದ ಎ.ಬಿ. ಶಿರೋಳ, ಶಶಿಧರ ಬಿದರಿ, ವಿಠಲಗೌಡ ಬಿರಾದಾರ, ಮಲ್ಲಪ್ಪ ಕಾಳಪ್ಪಗೋಳ, ರಾವುತಪ್ಪ ಗಾಣಿಗೇರ, ಲಕ್ಷ$್ಮಣ ಪೂಜಾರಿ, ಮಲ್ಲಿಕಾರ್ಜುನ ಹಳ್ಳಿ, ಜಿ.ಪಂ. ಮುಖ್ಯ ಯೋಜನಾಧಿಕಾರಿ ಎನ್​.ಕೆ. ಗೋಠೆ, ಬಬಲೇಶ್ವರ ತಾ.ಪಂ. ಇಒ ಜೆ.ಎಸ್​. ಪಠಾಣ ಮತ್ತಿತರರಿದ್ದರು.