ಜಿಲ್ಲೆ

ಎಂಎಸ್ಐಎಲ್ ಕಚೇರಿ ಮೇಲೆ ಎಸಿಬಿ ದಾಳಿ

ಕಲಬುರಗಿ: ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿರುವ ಸರ್ಕಾರದ ಅಂಗ ಸಂಸ್ಥೆ ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಸೇಲ್ಸ್ (ಎಂಎಸ್ಐಎಲ್) ಶಾಖಾ ಕಚೇರಿ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಪೊಲೀಸರು ಶುಕ್ರವಾರ ಸಂಜೆ ದಾಳಿ ನಡೆಸಿ 4.21 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ.
ಕಚೇರಿಯಲ್ಲಿ ದಾಖಲೆಗಳಿಲ್ಲದ ಹಣ ಮೇಲಿಂದ ಮೇಲೆ ಕಂಡು ಬರುತ್ತಿದೆ ಎಂಬ ಖಚಿತ ಮಾಹಿತಿಯಂತೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ತಡರಾತ್ರಿವರೆಗೂ ಶೋಧ ನಡೆಸಿ ದಾಖಲೆಗಳನ್ನು ಪರಿಶೀಲಿಸಿದಾಗ ಶಾಖಾ ಮುಖ್ಯಸ್ಥ ಶಂಕ್ರಯ್ಯ ಸೇರಿ ಹಲವರ ಬಳಿ ಹಣ ಪತ್ತೆಯಾಗಿದೆ.
ವಶಪಡಿಸಿಕೊಂಡ 4.21 ಲಕ್ಷ ರೂ.ಗಳಲ್ಲಿ 2.95 ಲಕ್ಷಕ್ಕೆ ಸೂಕ್ತ ದಾಖಲೆಗಳಿದ್ದರೆ, 1.25 ಲಕ್ಷ ರೂ.ಗೆ ದಾಖಲೆಗಳಿಲ್ಲ. ಇನ್ನು ಎಂಎಸ್ಐಎಲ್ ಕಲಬುರಗಿ ಶಾಖೆ ಮುಖ್ಯಸ್ಥ ಶಂಕ್ರಯ್ಯ ಬಳಿ 22500 ರೂ., ಗಣಕಯಂತ್ರ ನಿವರ್ಾಹಕ ಚಂದ್ರಕಾಂತ ಕಂಠಿ ಹತ್ತಿರ 11,500 ರೂ., ರಿಟೇಲ್ ಇನ್ಚಾಜರ್್ ಶ್ರೀನಾಥ ಬಳಿ 5260 ರೂ., ಡಾಟಾ ಎಂಟ್ರಿ ಆಪರೇಟರ್ ಮಿಲಿಂದ ಬಳಿ ಚಿಟ್ ಫಂಡ್ ಹಣ 5 ಸಾವಿರ ರೂ. ಹಾಗೂ ಕಚೇರಿ ಅಲ್ಮಾರದಲ್ಲಿ ಅನಧಿಕೃತವಾಗಿದ್ದ 86 ಸಾವಿರ ರೂ. ಸಹ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಎಸಿಬಿ ಎಸ್ಪಿ ಮಹೇಶ ಮೇಘಣ್ಣನವರ ಮಾರ್ಗದರ್ಶದಲ್ಲಿ ಡಿಎಸ್ಪಿ ಬಸಿರುದ್ದೀನ್ ಪಟೇಲ್, ಇನ್ಸ್ಪೆಕ್ಟರ್ಗಳಾದ ರಾಘವೇಂದ್ರ ಭಜಂತ್ರಿ, ಇಸ್ಮಾಯಿಲ್ ಶರೀಫ್, ಶರಣಬಸವಪ್ಪ ಕೋಡ್ಲಾ, ಸಿಬ್ಬಂದಿ ಮರೆಪ್ಪ, ಶರಣು, ಯಮನೂರಪ್ಪ, ಸಲೀಂ ಇತರರು ಶುಕ್ರವಾರ ತಡರಾತ್ರಿವರೆಗೆ ಮತ್ತು ಶನಿವಾರ ಬೆಳಗ್ಗೆ ಪರಿಶೀಲನೆ ನಡೆಸಿದರು.
ಜಿಲ್ಲೆಯಲ್ಲಿರುವ ಎಂಎಸ್ಐಎಲ್ ಮದ್ಯ ಮಳಿಗೆಯವರು ಮಾರಾಟಕ್ಕೆ ಬೇಕಾಗಿರುವ ಮದ್ಯ ಖರೀದಿ ಇಂಡೆಂಟ್ ಹಾಕಲು ಮತ್ತು ಹಣ ಭರಿಸಲು ಕಚೇರಿಗೆ ಬಂದಾಗ ಸ್ವಲ್ಪ ಹೆಚ್ಚಿನ ಹಣ ಪಡೆದುಕೊಳ್ಳಲಾಗುತ್ತಿತ್ತು ಎಂಬ ಮಾಹಿತಿಯಂತೆ ದಾಳಿ ನಡೆಸಿರುವ ಸಾಧ್ಯತೆಯಿದೆ. ಎಸಿಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯಾರನ್ನೂ ಬಂಧಿಸಿಲ್ಲ, ಹಣದ ಬಗ್ಗೆ ಸೂಕ್ತ ದಾಖಲೆ ಹಾಜರುಪಡಿಸುವಂತೆ ನೋಟಿಸ್ ನೀಡಲಾಗಿದೆ.