ಬೆಳಗಾವಿ: ಭಾರತೀಯ ಸೇನೆಯ ಅತ್ಯಂತ ಹಳೆಯ ರೆಜಿಮೆಂಟ್‌ಗಳಲ್ಲಿ ಒಂದಾಗಿರುವ ಬೆಳಗಾವಿ ಮರಾಠ ಲಘು ಪದಾತಿದಳ (ಎಂಎಲ್‌ಐಆರ್‌ಸಿ)ವು ಜಾಗತಿಕ ಮಟ್ಟದಲ್ಲಿ ದೇಶದ ಹೆಸರು ಬೆಳಗಿದೆ. ಅನೇಕ ಯುದ್ಧಗಳಲ್ಲಿ ಭಾರತ ಜಯಗಳಿಸುವಲ್ಲಿ ಎಂಎಲ್ಐಆರ್‌ಸಿ ಮಹತ್ವದ ಪಾತ್ರ ವಹಿಸಿದೆ. ವೈರಿಗಳ ಉಪಟಳಕ್ಕೆ ಸರಿಯಾದ ಪ್ರತ್ಯುತ್ತರ ನೀಡುತ್ತ
ಬಂದಿದೆ ಎಂದು ಅಂಡಮಾನ್ ಮತ್ತು ನಿಕೋಬಾರ್ ಕಮಾಂಡ್‌ನ ಕಮಾಂಡರ್ ಇನ್ ಚ್ೀ, ಲೆಫ್ಟಿನೆಂಟ್ ಜನರಲ್ ಅಜಯ ಸಿಂಗ್ ಪ್ರಶಂಸೆ ವ್ಯಕ್ತಪಡಿಸಿದರು.
ನಗರದ ಮರಾಠ ಲಘು ಪದಾತಿ ದಳ (ಎಂಎಲ್ಐಆರ್‌ಸಿ)ದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಯುದ್ಧ ನಂತರದ 17ನೇ ಆವೃತ್ತಿಯ ಸೈನಿಕರ ಸಮ್ಮಿಲನದಲ್ಲಿ ಅವರು ಮಾತನಾಡಿದರು. 250 ವರ್ಷಗಳ ಇತಿಹಾಸ ಹೊಂದಿರುವ ಎಂಎಲ್‌ಐಆರ್‌ಸಿ ಸ್ವಾತಂತ್ರ್ಯ ಪೂರ್ವದಿಂದಲೂ ಶೌರ್ಯ, ಸಾಹಸ ಹಾಗೂ ರಾಷ್ಟ್ರನಿಷ್ಠೆ ಮೆರೆಯುತ್ತ ಬಂದಿದೆ. ವಿವಿಧ ಯುದ್ಧಗಳ ಕಾರ್ಯಾಚರಣೆ ವೇಳೆ ಎಂಎಲ್‌ಆರ್‌ಸಿ ತೋರಿದ ಸಾಹಸವನ್ನು ಸ್ವತಃ ನಾನೇ ಕಂಡಿದ್ದೇನೆ.
ಅನೇಕ ಯುದ್ಧಗಳಲ್ಲಿ ಭಾರತ ಜಯಗಳಿಸುವಲ್ಲಿ ಎಂಎಲ್ಐಆರ್‌ಸಿ ಮಹತ್ವದ ಪಾತ್ರ ವಹಿಸಿದೆ ಎಂದರು. ಎಂಎಲ್‌ಐಆರ್‌ಸಿ 2ನೇ ಬಟಾಲಿಯನ್‌ನ ಮೇಜರ್ ಶಾಶ್ವತ ದಬಾಸ್ ನೇತೃತ್ವದಲ್ಲಿ ಎಂಎಲ್‌ಐಆರ್‌ಸಿ, ಬಾಂಬೆ ಇಂಜಿನಿಯರ್ ಗ್ರೂಪ್, 34 ಮೀಡಿಯಂ ರೆಜಿಮೆಂಟ್, 36 ಮೀಡಿಯಂ ರೆಜಿಮೆಂಟ್, ಐಎನ್‌ಎಸ್ ಮುಂಬೈ, ಸಾಂಬ್ರಾದ ಏರ್‌ಮನ್ ತರಬೇತಿ ಶಾಲೆಯ 20 ಸ್ಕ್ವಾಡ್ರನ್ ಇಂಡಿಯನ್ ಏರ್‌ೆರ್ಸ್ ಮತ್ತು ಇಂಡಿಯನ್ ಕೋಸ್ಟ್‌ಗಾರ್ಡ್ ತಂಡಗಳು ಆಕರ್ಷಕ ಪಥಸಂಚಲನ ನಡೆಸಿದವು. ಬಳಿಕ, ಸೇನೆಯ ಹಿರಿಯ ಅಕಾರಿಗಳು ಮತ್ತು ನಿವೃತ್ತ ಅಕಾರಿಗಳು ಯುದ್ಧ ಸ್ಮಾರಕಕ್ಕೆ ಗೌರವ ಸಮರ್ಪಿಸಿದರು. ಯುದ್ಧದಲ್ಲಿ ಹುತಾತ್ಮರಾದ ಯೋಧರ ಪತ್ನಿಯರು ಮತ್ತು ಕುಟುಂಬಸ್ಥರನ್ನು ಸತ್ಕರಿಸಲಾಯಿತು.
ಭಾರತದ ಭೂಸೇನೆ ಮಾಜಿ ಮುಖ್ಯಸ್ಥ ಮತ್ತು ಅರುಣಾಚಲ ಪ್ರದೇಶದ ಮಾಜಿ ಗವರ್ನರ್ ಜನರಲ್ ಜೆ.ಜೆ.ಸಿಂಗ್, ಕೇಂದ್ರ ರಕ್ಷಣಾ ಸಚಿವಾಲಯದ ಜಂಟಿ ನಿರ್ದೇಶಕ (ಆರ್ಮಿ ಆ್ಯಂಡ್ ಟಿಎ) ಮೇಜರ್ ಜನರಲ್ ಕೆ.ನಾರಾಯಣ ಇದ್ದರು. ಸೇವೆಯಲ್ಲಿರುವ ಮತ್ತು ನಿವೃತ್ತರಾಗಿರುವ 10 ಲೆಫ್ಟಿನೆಂಟ್ ಜನರಲ್, 19 ಮೇಜರ್ ಜನರಲ್‌ಗಳು ಭಾಗವಹಿಸಿದ್ದರು.