ಜಿಲ್ಲೆ

ಎಂಎಲ್ಸಿ ಸ್ಥಾನಕ್ಕೆ ಅಲೆಮಾರು ಬುಡಕಟ್ಟು ಮಹಾಸಭಾದ ಒತ್ತಾಯ

ಚಿತ್ರದುರ್ಗ: ಬಡವರು, ಹಿಂದುಳಿದವರು, ಅಲೆಮಾರಿ ಸಮುದಾಯದ ಏಳಿಗೆಗೆ ಶ್ರಮಿಸುತ್ತಿರುವ ಕೆಪಿಸಿಸಿ ಸಾಮಾಜಿಕ ನ್ಯಾಯ ವಿಭಾಗದ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕನಾಥ್ ಅವರನ್ನು ವಿಧಾನಪರಿಷತ್‌ಗೆ ನಾಮನಿರ್ದೇಶನ ಮಾಡುವಂತೆ ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಜಾನಕಲ್ ರಾಜಣ್ಣ ಒತ್ತಾಯಿಸಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ, ವಕೀಲ, ಪತ್ರಕರ್ತ, ಸಂವಿಧಾನದ ಅರಿವು ಇರುವಂಥ ಸೂಕ್ಷ್ಮಸಂವೇಧನಾಶೀಲ ವ್ಯಕ್ತಿ ದ್ವಾರಕನಾಥ್ ಅವರು ಸದಾ ಸಾಮಾಜಿಕ ನ್ಯಾಯದ ಪರವಾಗಿ ದುಡಿಯುತ್ತಿದ್ದಾರೆ ಎಂದು ಹೇಳಿದರು. ಜಿಲ್ಲಾ ಘಟಕದ ಅಧ್ಯಕ್ಷ ಪಿ.ಕಮಲ್‌ಹಾಸನ್, ಪ್ರಧಾನ ಕಾರ್ಯದರ್ಶಿ ಎನ್.ಧನಂಜಯ ಇತರರಿದ್ದರು.