ಜಿಲ್ಲೆ

ಎಂಎಲ್‌ಸಿ ವಿಶ್ವನಾಥ್ ಪುತ್ರನಿಗೆ 1.99 ಲಕ್ಷ ರೂ. ವಂಚನೆ

ಮೈಸೂರು: ವಿಧಾನ ಪರಿಷತ್ತಿನ ಸದಸ್ಯ ಎಚ್.ವಿಶ್ವನಾಥ್ ಅವರ ಪುತ್ರ ಅಮಿತ್ ದೇವರಹಟ್ಟಿ ಅವರಿಗೆ ಆನ್‌ಲೈನ್ ಮೂಲಕ ಬ್ಯಾಂಕ್ ಖಾತೆಯಿಂದ 1.99 ಲಕ್ಷ ರೂ. ಹ್ಯಾಕ್ ಮಾಡುವ ಮೂಲಕ ವಂಚಿಸಲಾಗಿದೆ.
ಅಮಿತ್ ಅವರು ಕಳೆದ ಜುಲೈ 28ರಂದು ಕುವೆಂಪುನಗರದ ಎಟಿಎಂನಲ್ಲಿ ಹಣ ಡ್ರಾ ಮಾಡಲು ತೆರಳಿದ್ದರು. ಕಾರ್ಡ್ ಹಾಕಿ ಹಣ ಡ್ರಾ ಮಾಡಿದರೂ ಹಣ ಬಂದಿಲ್ಲ. ಆದರೆ ಮೊಬೈಲ್‌ಗೆ ಹಣ ಡ್ರಾ ಮಾಡಿರುವ ಬಗ್ಗೆ ಮೆಸೇಜ್ ಬಂದಿದೆ. ಹಾಗಾಗಿ ಅವರು ಬ್ಯಾಂಕ್‌ನ ಕಸ್ಟಮರ್ ಕೇರ್‌ಗೆ ಕರೆ ಮಾಡಲು ಗೂಗಲ್‌ನಲ್ಲಿ ನಂಬರ್ ಹುಡುಕಿದ್ದಾರೆ. ಗೂಗಲ್‌ನಲ್ಲಿ ಸಿಕ್ಕ ನಂಬರ್‌ಗೆ ಕರೆ ಮಾಡಿದಾಗ ಕರೆ ಸ್ವೀಕರಿಸಿದ ವ್ಯಕ್ತಿ, ಅಮಿತ್ ಅವರ ಬ್ಯಾಂಕ್ ವಿವರ ಪಡೆದುಕೊಂಡು ಹಣ ಬೇರೆ ಖಾತೆಗೆ ವರ್ಗಾವಣೆ ಮಾಡಿಕೊಂಡು ವಂಚನೆ ಮಾಡಿದ್ದಾನೆ.
ವಂಚನೆ ತಿಳಿದ ಬಳಿಕ ಅಮಿತ್ ದೇವರಹಟ್ಟಿ ನಗರದ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಸೈಬರ್ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.