ಜಿಲ್ಲೆ

ಎಂಎಲ್ಸಿ ಬೇಡ ಉಪಮುಖ್ಯಮಂತ್ರಿ ಆಗುವೆ

ಗುರುಮಠಕಲ್: ಹಿಂದಿನ ಬಾಗಿಲಿನಿಂದ ಎಂಎಲ್‌ಸಿ ಬಯಸುವ ವ್ಯಕ್ತಿ ನಾನಲ್ಲ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ, ಗೆಲ್ಲುವ ಮೂಲಕ ಶಾಸಕನಾಗಿ, ಉಪಮುಖ್ಯಮಂತ್ರಿಯಾಗುತ್ತೇನೆ ಎಂದು ಮಾಜಿ ಸಚಿವ ಬಾಬುರಾವ್ ಚಿಂಚನಸೂರ ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಜನ್ಮದಿನ ಕರ‍್ಯಕ್ರಮದಲ್ಲಿ ಮಾತನಾಡಿದ ಅವರು, ಮುಂಬರುವ ಚುನಾವಣೆಯಲ್ಲಿ ಮತ್ತೆ ಗೆಲ್ಲುವ ಮೂಲಕ ಉಪಮುಖ್ಯಮಂತ್ರಿಯಾಗುವೆ ಎಂದು ಹೇಳಿದರು.

ಕಳೆದ ಸಲ ನಾನು ಸೋತೆ, ಗೆಲುವು ಸಾಧಿಸಿದ್ದರೆ ಸಚಿವನಾಗಿರುತ್ತಿದ್ದೆ. ಅಲ್ಲದೆ ನನ್ನ ಕ್ಷೇತ್ರ ಸಿಂಗಾಪುರ ತರಹ ಮಾಡುತ್ತಿದ್ದೆ. ನನ್ನ ಕ್ಷೇತ್ರದಲ್ಲಿ ಜನರ ಸಮಸ್ಯೆ ತಿಳಿದು ಪರಿಹಾರಿಸಲು ತಿಂಗಳಿನಲ್ಲಿ ಎರಡು ಸಲ ಬರುತ್ತೇನೆ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಸಮಲೋಚನೆ ನಡೆಸುತ್ತೇನೆ. ಕುಂದುಕೊರತೆಗಳನ್ನು ಅಳಿಸಿ ಸ್ಪಂದಿಸುತ್ತೇನೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆಶಿ, ಸಚಿವ ಪ್ರಿಯಾಂಕ ಖರ್ಗೆ ಅವರ ಸಹಕಾರದೊಂದಿಗೆ ಕ್ಷೇತ್ರಕ್ಕೆ ಅರ್ಥಿಕ ಸಹಾಯ ಒದಗಿಸಿ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಭರವಸೆ ನೀಡಿದರು.

ನಮ್ಮ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಉನ್ನತ ಸ್ಥಾನಕ್ಕೆ ಹೋಗಿದ್ದಾರೆ. ಮುಂದೆ ಪ್ರಧಾನಿಯಾಗುವ ಲಕ್ಷಣಗಳಿವೆ. ಈಗ ಬಿಜೆಪಿ ಮುಳುಗುವ ಪಕ್ಷವಾಗಿದೆ. ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಇಮೇಜ್ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ ಎಂದು ಹೇಳಿದರು.

ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಚಪೇಟ್ಲಾ, ಪುರಸಭೆ ಉಪಾಧ್ಯಕ್ಷೆ ರೇಣುಕಾ ಪಡಿಗೆ, ಪುರಸಭೆ ಸದಸ್ಯರಾದ ಸೈಯದ್ ಖಾಜಾ ಮೈನೊದ್ದೀನ್, ಬಾಬು ತಲಾರಿ, ಮುಖಂಡರಾದ ಬಾಲಪ್ಪ ನಿರೇಟಿ, ಶ್ರೀನಿವಾಸ ಗುಮಡಾಲ, ಬಸವರಾಜ ದಳಪತಿ, ಸೈಯಾದ್ ಬಾಬಾ, ಫಯಾಜ್ ಅಹ್ಮದ್, ಕಾಶಪ್ಪ, ಸಂಜೀವಕುಮಾರ ಚಂದಾಪುರ, ಚಾಂದಪಾಶ, ಅಶೋಕ ಶನಿವಾರಂ, ಪದ್ಮರಾಜ ರಾಮಪುರ ಸೇರಿ ಇತರರಿದ್ದರು.