ಜಿಲ್ಲೆ

ಎಂ.ಬಸವಣ್ಣಗೆ ವರ್ಷದ ಗೌರವ ಪ್ರಶಸ್ತಿ

ಚಾಮರಾಜನಗರ: ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಅಮೂಲ್ಯವಾದ ಸೇವೆಯನ್ನು ಪರಿಗಣಿಸಿ ನೀಡುವ 2024ನೇ ವರ್ಷದ ಗೌರವ ಪ್ರಶಸ್ತಿಗಾಗಿ ಚಾಮರಾಜನಗರ ಮೂಲದ ಡಾ.ಎಂ.ಬಸವಣ್ಣ ಅವರನ್ನು ಆಯ್ಕೆ ಮಾಡಲಾಗಿದೆ.

ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್ ಅಧ್ಯಕ್ಷತೆಯಲ್ಲಿ ಗುರುವಾರ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಗೌರವ ಪ್ರಶಸ್ತಿ ನೀಡಲು ಡಾ.ಎಂ.ಬಸವಣ್ಣ ಅವರನ್ನು ಸರ್ವಾನುಮತದಿಂದ ನಿರ್ಣಯಿಸಲಾಗಿದ್ದು, ಪ್ರಶಸ್ತಿಯು 50 ಸಾವಿರ ರೂ. ನಗದು, ಪ್ರಶಸ್ತಿ ಲಕವಿರಲಿದೆ. ಡಾ.ಎಂ.ಬಸವಣ್ಣ ಮಂಗಲ ಗ್ರಾಮದವರು. ತಿರುಮಲೈ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದಾರೆ.