ಹಾಸನ: ವಿದ್ಯಾರ್ಥಿ ಜೀವನ ಅತ್ಯಮೂಲ್ಯವಾಗಿದ್ದು, ಸಮಯ ವ್ಯರ್ಥ ಮಾಡದೇ ವ್ಯಾಸಂಗದಲ್ಲಿ ನಿರತರಾಗಬೇಕು. ಭವಿಷ್ಯ ಉಜ್ವಲವಾಗಿರಬೇಕೆಂದರೆ ಈಗ ಶ್ರಮವಹಿಸಿ ಓದಬೇಕು ಪ್ರೋ.ಎಸ್.ಆರ್.ತಮಯ್ಯ ಕಿವಿಮಾತು ಹೇಳಿದರು.
ನಗರದ ಎ.ವಿ.ಕಾಂತಮ ಮಹಿಳಾ ಕಾಲೇಜಿನಲ್ಲಿ ಬುಧವಾರ ಹಮಿಕೊಂಡಿದ್ದ ಪದವಿ ವಿದ್ಯಾರ್ಥಿಗಳಿಗೆ ಅಭಿವಿನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜೀವನವೆಂದರೆ ಮೋಜು ಮಸ್ತಿ ಮಾಡುವುದಲ್ಲ. ಅನಕ್ಷರಸ್ಥ ತಂದೆ-ತಾಯಿ ನಮಗಾಗಿ ಎಷ್ಟು ಕಷ್ಟಪಡುತ್ತಿದ್ದಾರೆಂಬುದನ್ನು ವಿದ್ಯಾರ್ಥಿಗಳು ಅರಿಯಬೇಕು. ಓದುವ ಸಮಯದಲ್ಲಿ ಇತರೆ ವಿಚಾರಗಳ ಕಡೆ ಗಮನ ಹರಿಸಬಾರದು ಹೇಳಿದರು.
ಮಕ್ಕಳ ಭವಿಷ್ಯ ಉಜ್ವಲವಾಗಿರಲಿ ಎಂಬ ಉದ್ದೇಶದಿಂದ ವಿಶ್ರಾಂತಿ ಪಡೆಯದೆ ಪೋಷಕರು ಕೆಲಸ ಮಾಡುತ್ತಾರೆ. ತಮ ಪರಿಶ್ರಮದ ಕಷ್ಟವನ್ನು ಮಕ್ಕಳಿಗೆ ಹೇಳಿಕೊಟ್ಟರೆ ಅವರು ಯಾವತ್ತೂ ದಾರಿ ತಪ್ಪುವುದಿಲ್ಲವೆಂದು ಹೇಳಿದರು.
ಮೊಬೈಲ್ ಬಳಕೆ ಸೀಮಿತವಾಗಿರಬೇಕು. ಸಾಮಾಜಿಕ ಜಾಲತಾಣಗಳು ದಾರಿ ತಪ್ಪಿಸುವ ಮಾರ್ಗವಾಗಿದ್ದು ಅದರಿಂದ ದೂರವಿರಬೇಕು. ಪ್ರತಿಕ್ಷಣವೂ ಅಮೂಲ್ಯ ಎಂಬ ಅರಿವು ಮೂಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಯತೀಶ್ವರ್ ಅವರು ಮಾತನಾಡಿ, ಪದವಿ ಹಂತ ಉನ್ನತ ಶಿಕ್ಷಣಕ್ಕೆ ಅಡಿಪಾಯವಾಗಿದೆ. ಇಲ್ಲಿ ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಜೀವನದ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಹೆಣ್ಣು ಮಕ್ಕಳು ಸ್ವಾವಲಂಬಿ ಜೀವನ ಕಟ್ಟಿಕೊಳ್ಳಬೇಕು. ಉತ್ತಮ ಅಂಕ ಗಳಿಕೆ ಮೂಲಕ ಹೆಸರು ಮಾಡಬೇಕು. ಆ ಮೂಲಕ ಒಳ್ಳೆಯ ಉದ್ಯೊ?ಗ ಪಡೆದು ಸುಖಕರ ಜೀವನ ಕಟ್ಟಿಕೊಳ್ಳಬೇಕು ಎಂದರು.
ಉಪನ್ಯಾಸಕರಾದ ಡಾ.ಎನ್.ಎಸ್.ಶಶಿಕಲಾ,ಪ್ರೋ.ಎಸ್.ಆರ್.ಹೇಮಾವತಿ, ಡಾ.ಡಿ.ಪಿ. ಲಿಂಗರಾಜು ಇತರರಿದ್ದರು.