ಗೋಣಿಕೊಪ್ಪಲು : ಶಾಸಕ ಎ.ಎಸ್ ಪೊನ್ನಣ್ಣ ತಮ್ಮ ತಂದೆ ದಿವಂಗತ ಎ.ಕೆ.ಸುಬ್ಬಯ್ಯ ಅವರ 6ನೇ ಪುಣ್ಯ ಸ್ಮರಣೆ ಅಂಗವಾಗಿ ಬುಧವಾರ ಗೌರವ ನಮನ ಸಲ್ಲಿಸಿದರು.
ಪೊನ್ನಂಪೇಟೆ ತಾಲೂಕು ಹುದಿಕೇರಿಯ ಬೆಳ್ಳೂರಿನಲ್ಲಿರುವ ತಮ್ಮ ತಂದೆಯ ಸಮಾಧಿ ಬಳಿಗೆ ತೆರಳಿದ ಶಾಸಕರು, ಪುಷ್ಪ ನಮನ ಸಲ್ಲಿಸು ಮೂಲಕ ಗೌರವ ಸಮರ್ಪಿಸಿದರು. ಶಾಸಕರ ಹಿರಿಯ ಸಹೋದರ ಅಜ್ಜಿಕುಟ್ಟಿರ ಎಸ್.ನರೇನ್, ತಾಯಿ, ಹಿರಿಯ ಸಹೋದರಿ, ಅಜ್ಜಿಕುಟ್ಟಿರ ಕುಟುಂಬದ ಸದಸ್ಯರು, ಶಾಸಕರ ಆಪ್ತರು, ಪಕ್ಷದ ಪ್ರಮುಖರು ಇದ್ದರು.