ಕಳಸ: ಎ.ಆರ್.ಫ್ರೆಂಡ್ಸ್ ಕ್ರಿಕೆಟ್‌ಗೆ ಸೀಮಿತವಾಗಿರದೆ ಇತರ ಸಾಮಾಜಿಕ ಕಾರ್ಯಗಳಲ್ಲೂಗುರುತಿಸಿಕೊಂಡಿದೆ ಎಂದು ಟೀಮ್ ಕಳಸ ಲೀಗ್ ಅಧ್ಯಕ್ಷ ಸೂಕ್ತ ಜಿ.ಗೌಡ ಹೇಳಿದರು.
ಕಳಸ ಕಾಲೇಜು ಕ್ರೀಡಾಂಗಣದಲ್ಲಿ ಎರಡು ದಿನಗಳ ಕಾಲ ಎ.ಆರ್.್ರೆಂಡ್ಸ್, ರಾಯಲ್ ಸ್ಟ್ರೈಕರ್, ಎಎ್ಸಿ ಆಶ್ರಯದಲ್ಲಿ ನಡೆದ ಟೀಮ್ ಕಳಸ ಲೀಗ್ ಕ್ರಿಕೆಟ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಕಳಸ ತಾಲೂಕಿನಲ್ಲಿ ಯಾರೇ ಆಗಲಿ ಬಡತನದಲ್ಲಿದ್ದು, ಆರೋಗ್ಯ ಸಮಸ್ಯೆ, ಶಾಲೆಗೆ ಹೋಗಲು ಹಣಕಾಸಿನ ತೊಂದರೆ ಆದಲ್ಲಿ ಅವರಿಗೆ ಎ.ಆರ್ ್ರೆಂಡ್ಸ್ ನೆರವಿಗೆ ನಿಲ್ಲುತ್ತದೆ. ಎ.ಆರ್.್ರೆಂಡ್ಸ್ ಕ್ರೀಡೆಗೆ ಸೀಮಿತವಾಗದೆ ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಸಿಕೊಂಡಿದೆ. ಯಾವುದೇ ವೈಯಕ್ತಿಕ ಅಭಿಲಾಷೆ ಇಲ್ಲದೆ ಕ್ರೀಡಾಕೂಟ ಆಯೋಜನೆ ಮಾಡಿ ಯುವಕರಿಗೆ ಪ್ರೋತ್ಸಾಹ ನೀಡುವುದು ಕೂಡ ದೊಡ್ಡ ಕೆಲಸ ಎಂದು ಹೇಳಿದರು.
ಎರಡು ದಿನಗಳ ಕಾಲ ನಡೆದ ಪಂದ್ಯಾವಳಿಯಲ್ಲಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ 16 ತಂಡಗಳು ಭಾಗವಹಿಸಿದ್ದವು. ಅಂತಿಮವಾಗಿ ಎಎ್ಸಿ ವಿನ್ನರ್ ಆಗಿ ಒಂದು 1.11 ಲಕ್ಷ ರೂ. ನಗದು ಮತ್ತು ಆಕರ್ಷಕ ಟ್ರೋಫಿಯನ್ನು ಪಡೆದುಕೊಂಡರೆ ರನ್ನರ್ ಆಗಿ ವಿಜಯ ವಾರಿಯರ್ಸ್ 55 ಸಾವಿರ ರೂ., ತೃತೀಯ ಬಹುಮಾನವನ್ನು ಸಿಡಿಎನ್‌ಎಸ್ ನೆಲ್ಲಿಬೀಡು 22 ಸಾವಿರ ರೂ. ಮತ್ತು ಟ್ರೋಫಿ ಪಡೆದುಕೊಂಡರು.
ಎ.ಆರ್.ಫ್ರೆಂಡ್ಸ್ ಮಾಲೀಕ ರಾಜೇಶ್, ಆದರ್ಶ್, ಎಎಫ್‌ಸಿ ಮಾಲೀಕ ಶಿವರಾಜ್, ರಾಯಲ್ ಸ್ಟ್ರೈಕರ್ ಮಾಲೀಕ ಶ್ರೇಣಿಕ್ ಜೈನ್, ಊರಿನ ಪ್ರಮುಖ ಮುಖಂಡರಾದ ಗಿರೀಶ್ ಹೆಮ್ಮಕ್ಕಿ, ಕೆ.ಎ.ಶ್ರೇಣಿಕ್, ಮಹಮ್ಮದ್ ರಫೀಕ್, ವಿಶ್ವನಾಥ್, ಸಂತೋಷ್ ಎಂ.ಸಿ, ರವಿ ಕಳಕೋಡು, ಸತೀಶ್ ಕಲ್ಲಾನೆ, ಪ್ರಕಾಶ್ ಆಚಾರ್ಯ, ಸುನೀಲ್ ಹೆಮ್ಮಕ್ಕಿ, ರವಿ ಗೌಡ, ಅವಿನಾಶ್ ನೂಜಿ ಇತರರಿದ್ದರು.