ತರೀಕೆರೆ: ಹೆಣ್ಣು ಮಕ್ಕಳು ಮೊದಲ ಬಾರಿ ಋತುಮತಿಯಾಗುವ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಎಚ್ಚರಿಕೆ ಕ್ರಮವನ್ನು ಹಿರಿಯರಿಂದ ತಿಳಿದಿರಬೇಕು ಎಂದು ಸರ್ಕಾರಿ ಆಯುರ್ವೇದ ಆಸ್ಪತ್ರೆ ಸ್ತ್ರಿರೋಗ ತಜ್ಞೆ ಡಾ. ಎಚ್.ಎಲ್.ಕಾವ್ಯಶ್ರೀ ಹೇಳಿದರು.
ಪಟ್ಟಣದ ಖಾಸಗಿ ಶಾಲೆಯಲ್ಲಿ ರೋಟರಿ ಕ್ಲಬ್, ಸರ್ಕಾರಿ ಆಯುರ್ವೇದ ಆಸ್ಪತ್ರೆ ಹಾಗೂ ನಂದಿ ಆಯುಷ್ಮಾನ್ ಆರೋಗ್ಯ ಮಂದಿರದ ಸಹಯೋಗದಲ್ಲಿ ಆಯೋಜಿಸಿದ್ದ ಋತುಸ್ರಾವದ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿ, ಮುಟ್ಟಿನ ವೇಳೆ ಬಳಸುವ ವಸ್ತುಗಳು ಮತ್ತು ಸ್ವಚ್ಛತೆಗೆ ಆದ್ಯತೆ ನೀಡಬೇಕು. ಜತೆಗೆ ಆರೋಗ್ಯದ ಕಡೆ ಹೆಚ್ಚಿನ ಹೆಚ್ಚಿನ ಗಮನ ಕೊಡಬೇಕು ಎಂದರು. ಸರ್ಕಾರಿ ಆಯುರ್ವೇದ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಬಿ.ವಿ.ಕಿಶೋರ್‌ಕುಮಾರ್, ರೋಟರಿ ಕ್ಲಬ್ ಅಧ್ಯಕ್ಷ ಬಿ.ಪಿ.ರವಿಕುಮಾರ್, ಪಿ.ಪ್ರವೀಣ್, ಸಿಸ್ಟರ್ ಮೋಕ್ಷಾ, ರಮ್ಯಾ, ಅರ್ಪಿತಾ, ಅಮೃತಾ, ಆರಾಧನಾ ಮತ್ತಿತರರಿದ್ದರು.