ಮುನವಳ್ಳಿ ಪಟ್ಟಣದ ಇನ್ನರ್​ವ್ಹೀಲ್​ ಕ್ಲಬ್​ ವತಿಯಿಂದ ಕುಮಾರೇಶ್ವರ ವಿದ್ಯಾಮಂದಿರದ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ಕಿಟ್​ ವಿತರಣೆ ಮಾಡಲಾಯಿತು. ಡಾ.ನಯನಾ ಭಸ್ಮೆ, ಸುಜಾತಾ ಕೋರಿ, ಅನುರಾಧಾ ಬೆಟಗೇರಿ ಇತರರು ಇದ್ದರು. 
ಜಿಲ್ಲೆ

ಋತುಚಕ್ರ ನೈಸರ್ಗಿಕ ಪ್ರಕ್ರಿಯೆ

ಮುನವಳ್ಳಿ: ಕಿಶೋರಿಯರಲ್ಲಿ ದೈಹಿಕ ಹಾಗೂ ಮಾನಸಿಕ ಆರೋಗ್ಯ ಬದಲಾವಣೆ ಆಗುವುದು ಸಹಜ ಪ್ರಕ್ರಿಯೆಯಾಗಿದ್ದು, ಆರೋಗ್ಯ ಜಾಗೃತಿ ಮೂಡಿಸುವುದು ಅವಶ್ಯ ಎಂದು ವೈದ್ಯೆ ಡಾ.ನಯನಾ ಭಸ್ಮೆ ಹೇಳಿದರು.

ಪಟ್ಟಣದ ಮಹಿಳಾ ಸಮಾಜ ಸೇವಾ ಸಂಸ್ಥೆ, ಇನ್ನರ್​ವ್ಹೀಲ್​ ಕ್ಲಬ್​ ಅ್​ ಮುನವಳ್ಳಿ ಹಾಗೂ ಕುಮಾರೇಶ್ವರ ವಿದ್ಯಾಮಂದಿರ ಸಂಯುಕ್ತಾಶ್ರಯದಲ್ಲಿ ವೈದ್ಯರು ಹಾಗೂ ಪತ್ರಿಕಾ ದಿನದ ಪ್ರಯುಕ್ತ ಪ್ರೌಢಶಾಲಾ ವಿದ್ಯಾರ್ಥಿನಿಯರಿಗೆ ಮಂಗಳವಾರ ಹಮ್ಮಿಕೊಂಡಿದ್ದ ಆರೋಗ್ಯ ಶುಚಿತ್ವ ಜಾಗೃತಿ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಿಶೋರಿಯರು ಋತುಚಕ್ರ ಸಮಯದಲ್ಲಿ ಸ್ವಚ್ಛತೆ ಕಡೆಗಣಿಸಬಾರದು. ಭಯ, ಮುಜುಗರ, ಗೊಂದಲಕ್ಕೆ ಒಳಗಾಗದೆ ಪಾಲಕರು ಹಾಗೂ ವೈದ್ಯರ ಸಲಹೆ ಪಡೆಯಬೇಕು. ಪೌಷ್ಟಿಕ ಆಹಾರ ಸೇವಿಸಬೇಕು ಎಂದರು.

ಸಂಸ್ಥೆಯ ನಿಕಟಪೂರ್ವ ಅಧ್ಯೆ ಅನುರಾಧಾ ಬೆಟಗೇರಿ ಮಾತನಾಡಿ, ವಿದ್ಯಾರ್ಥಿನಿಯರು ಶಿಣದಿಂದ ಮಾತ್ರ ಜೀವನದಲ್ಲಿ ಸಬಲರಾಗಬಲ್ಲರು ಎಂದರು.
ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ಕಿಟ್​ ವಿತರಿಸಲಾಯಿತು. ಸ್ಥಳಿಯ ಪತ್ರಕರ್ತರನ್ನು ಸನ್ಮಾನಿಸಲಾಯಿತು. ಇನ್ನರ್​ವ್ಹೀಲ್​ ತಾಲೂಕಾಧ್ಯೆ ಸುಜಾತಾ ಕೋರಿ, ಮುಖ್ಯೋಪಾಧ್ಯಾಯ ಶಂಕರ ರಾಠೋಡ, ಸುಷ್ಮಾ ಗೋಮಾಡಿ, ಪ್ರೀತಿ ಕರೀಕಟ್ಟಿ, ಪೂಜಾ ಗೋಪಶೆಟ್ಟಿ, ಅಶ್ವಿನಿ ಬಾಳಿ, ಲಲಿತಾ ಕಾಮಶೆಟ್ಟಿ, ಗೀತಾ ಜಾವೂರ, ಸಹನಾ ನಲವಡೆ, ಸುಜಾತಾ ಪಾಟೀಲ, ಉಮಾ ಹಂಪಣ್ಣವರ, ಶೀತಲ ಗೋಮಾಡಿ, ಗೌರಿ ಜಾವೂರ, ಸುಮಾ ಗೋಪಶೆಟ್ಟಿ. ಪ್ರಶಾಂತ ತುಳಜಣ್ಣವರ ಇತರರು ಇದ್ದರು.