ವಿಜಯವಾಣಿ ಸುದ್ದಿಜಾಲ ಗದಗ
2018ರಿಂದ 2023ರಲ್ಲಿ ಶಾಸಕನಾಗಿದ್ದ ಸಂದರ್ಭದಲ್ಲಿ ಸಿಎಂ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರ ಮಾರ್ಗದರ್ಶನದಲ್ಲಿ ನನಗೆ ನೀಡಿದ ಖಾತೆಗಳನ್ನು ಯಾವುದೇ ಕಪ್ಪುಚುಕ್ಕೆ ಬಾರದ ರೀತಿಯಲ್ಲಿ ಸಮರ್ಥವಾಗಿ ನಿರ್ವಹಿಸಿದ ತೃಪ್ತಿಯಿದೆ ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.
ತಾಲೂಕಿನ ನರಸಾಪೂರ ಗ್ರಾಮದ ಖಾದಿ ನಗರದ ವರಸಿದ್ಧಿ ವಿನಾಯಕ ದೇವಸ್ಥಾನದ ಸಮುದಾಯ ಭವನದಲ್ಲಿ ನಡೆದ ಮತದಾರರಿಗೆ ಕೃತತೆ ಸಲ್ಲಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿ.ಎಸ್. ಯಡಿಯೂರಪ್ಪ ಅವರು ಸಿಎಂ ಆದ ಸಂದರ್ಭದಲ್ಲಿ ಅವರ ಆಶೀರ್ವಾದದಿಂದ ಸಚಿವನಾಗುವ ಅವಕಾಶ ಸಿಕ್ಕಿತು. ಗಣಿ ಮತ್ತು ಭೂ ವಿಜ್ಞಾನ ಸಚಿವನಾಗಿದ್ದ ವೇಳೆ ಇಲಾಖೆಗೆ ವರ್ಷಕ್ಕೆ 3500 ಕೋಟಿ ರೂ.ನಷ್ಟು ಆದಾಯವನ್ನು ಸಂದಾಯವಾಗುವಂತೆ ದತೆಯಿಂದ ಕಾರ್ಯ ನಿರ್ವಸಿದ್ದೇನೆ ಎಂದರು.
ಭಾವುಕರಾದ ಸಿ.ಸಿ. ಪಾಟೀಲ:
2023ರ ಚುನಾವಣೆಯಲ್ಲಿ ನರಸಾಪೂರ ಗ್ರಾಮ ಅತೀ ಹೆಚ್ಚಿನ ಮತಗಳನ್ನು ಕೊಟ್ಟಿದ್ದು, ಅಭಿಮಾನದ ಸಂಗತಿಯಾಗಿದೆ. ತಮ್ಮೆಲ್ಲರಗೂ ಕೃತತೆಗಳನ್ನು ಸಲ್ಲಿಸುತ್ತೇನೆ. ನನ್ನ ನಿಮ್ಮ ಪ್ರೀತಿ, ವಿಶ್ವಾಸ, ಅಭಿಮಾನ ಜೀವನದ ಕೊನೆ ಉಸಿರಿರುವವರೆಗೆ ಮುಂದುವರಿಯಲಿ ಎನ್ನುತ್ತಲೇ ಭಾವುಕರಾದ ಸಿ.ಸಿ. ಪಾಟೀಲ ಅವರು ಕಷ್ಟದ ಸಮಯದಲ್ಲೂ ನನ್ನ ಕೈಹಿಡಿದ ಜನತೆಯ ಋಣ ತೀರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಪಿಡಿಒಗೆ ತರಾಟೆ:
ನರಸಾಪೂರ ಗ್ರಾಮದ ಬನಶಂಕರಿ ಬಡಾವಣೆಯಲ್ಲಿ ಉದ್ಯಾನ ಹಾಗೂ ಖಾದಿ ನಗರದಲ್ಲಿ ರಸ್ತೆ ಅತಿಕ್ರಮಣ ಮಾಡಲಾಗಿದೆ. ಕುಡಿಯು ನೀರು ಸಮರ್ಪವಾಗಿ ಪೂರೈಕೆಯಾಗುತ್ತಿಲ್ಲ ಎಂದು ಸ್ಥಳಿಯರು ಶಾಸಕರಿಗೆ ಮನವಿ ಸಲ್ಲಿಸಿದರು. ಈ ವೇಳೆ ಪಿಡಿಒ ಸುರೇಶ ನಾಯಕ್ ಅವರನ್ನು ತರಾಟೆಗೆ ತೆಗೆದುಕೊಂಡರಲ್ಲದೇ ಒಂದು ವಾರದೊಳಗೆ ಕುಡಿಯುವ ನೀರು ಪೂರೈಕೆ ಜೊತೆಗೆ ಸ್ಥಳಿಯ ಸಮಸ್ಯೆಯನ್ನು ಸರಿಪಡಿಸಬೇಕು. ಇಲ್ಲವಾದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಖಾದಿ ನಗರದ ಹಿತರಣಾ ಸಮಿತಿ ಅಧ್ಯ ಕೆ.ಎಸ್. ಹಿರೇಮಠ, ವಸಂತ ಮೇಟಿ, ಬಿಜೆಪಿ ಲಕ್ಕುಂಡಿ ಮಂಡಲದ ಅಧ್ಯ ನಿಂಗಪ್ಪ ಮಣ್ಣೂರ ಮಾತನಾಡಿದರು. ಇದೇ ಸಂದರ್ಭದಲ್ಲಿ ಖಾದಿ ನಗರದ ಹಿತರಣಾ ಸಮೀತಿ ವತಿಯಿಂದ ಶಾಸಕ ಸಿ.ಸಿ. ಪಾಟೀಲ ಅವರನ್ನು ಸನ್ಮಾನಿಸಲಾಯಿತು.
ಹಾತಲಗೇರಿ ಗ್ರಾಪಂ ಉಪಾಧ್ಯ ಶಿವಾನಂದ ಕರಿಗೌಡ್ರ, ಸದಸ್ಯರಾದ ಜಂಬಣ್ಣ ಕಲಬುರಗಿ, ನಿರ್ಮಲಾ ಕರಿಗೌಡ್ರ, ಮುಖಂಡರಾದ ಶಿವಪುತ್ರಪ್ಪ ಗುರ್ಲಹೊಸೂರ, ಸಿ.ವಿ. ಪವಾಡಶೆಟ್ಟರ, ಸಿದ್ದಲಿಂಗಪ್ಪ ಕುರ್ಲಗೇರಿ, ಮಲ್ಲಿಕಾರ್ಜುನ ದೊಡ್ಡಮನಿ, ಹನಮಂತ ಬಾವಿಕಟ್ಟಿ, ಈಶ್ವರ, ವಿನೋದ ಬೀಳಗಿ, ನಾಗೇಶ ಸಜ್ಜಿ, ಸೌಮ್ಯ ಕೆರಕನವರ, ಶಾರದಾ ಬೀಳಗಿ ಸೇರಿ ಹಲವರಿದ್ದರು.