ಹೂವಿನಹಡಗಲಿ: ಹಿರೇಹಡಗಲಿ ಗ್ರಾಮದಲ್ಲಿ ಊರಮ್ಮ ದೇವಿ ಜಾತ್ರೋತ್ಸವ ಬುಧವಾರ ಅದ್ದೂರಿಯಾಗಿ ಜರುಗಿತು.
ಮಂಗಳವಾರ ಸಂಜೆ ಗ್ರಾಮದಲ್ಲಿ ದೇವಿಯ ಉತ್ಸವಮೂರ್ತಿ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು. ವಾದ್ಯಮೇಳ, ಮದ್ದು ಸುಡುವುದು ಮೆರವಣಿಗೆಗೆ ಮೆರುಗು ನೀಡಿದ್ದವು. ದೇವಿಮೂರ್ತಿಯನ್ನು ಚೌತಿಮನೆೆ ಕಟ್ಟೆಯಲ್ಲಿ ಪ್ರತಿಷ್ಠಾಪಿಸಿದ ನಂತರ ಗಟ್ಟಿಗಡಿಗಿ (ಕೇಲೋತ್ಸವ) ಒಂದೊತ್ತಿನವರ ವ್ರತಾಚರಣೆ ಸಂಪನ್ನವಾಯಿತು.
ಭಕ್ತರು ಮನೆಗಳಿಂದ ಚೌತಿಕಟ್ಟೆವರೆಗೆ ದೀರ್ಘದಂಡ ನಮಸ್ಕಾರ ಹಾಕಿ ಹರಕೆ ತೀರಿಸಿದರು. ಕೆಲವರು ದೇವಿಗೆ ಉಡಿ ತುಂಬಿದರು. ಕೆಲವರು ಬೆಳ್ಳಿ ಆಭರಣ ಇತರ ಸಾಮಗ್ರಿಗಳನ್ನು ಸಮರ್ಪಿಸಿದರು. ಜಾತ್ರೆಗೂ ಮೂರು ದಿನ ಮುಂಚೆ ಊರಿನ ಸುತ್ತ ಹಾಕಲಾಗಿದ್ದ ಅಗಸಿಯನ್ನು (ಮುಳ್ಳಿನ ಬೇಲಿ) ರಥೋತ್ಸವ ಮುಗಿದು ಹುಲುಸು (ಚರಗ) ಚೆಲ್ಲಿದ ಮೇಲೆ ತೆರವುಗೊಳಿಸಲಾಯಿತು.