ಚಿಕ್ಕಮಗಳೂರು: ವಿಷಯುಕ್ತ ಆಹಾರದ ಜೊತೆಗೆ ಉಸಿರಾಟದ ಆಮ್ಲಜನಕವು ವಿಷಾನಿಲವಾಗಿ ಪರಿಣಾಮಿಸಿ ಮಾನವ ಸಂಕುಲವು ಹೃದ್ರೋಗ ಹಾಗೂ ಮಾರಕ ಕಾಯಿಲೆಗಳಿಗೆ ತುತ್ತಾಗಿ ಸರ್ವನಾಶ ದತ್ತ ಹೆಜ್ಜೆಹಾಕುತ್ತಿದೆ ಎಂದು ನೇಚರ್ ಕನ್ಸರ್‌ವೇಷನ್ ಟ್ರಸ್ಟ್ ಅಧ್ಯಕ್ಷ ಡಾ. ಕೆ.ಸುಂದರಗೌಡ ಕಳವಳ ವ್ಯಕ್ತಪಡಿಸಿದರು.
ತಾಲೂಕಿನ ತೇಗೂರು ಗ್ರಾಮ ಪಂಚಾಯಿತಿ ಆವರಣದಲ್ಲಿ ನೇಚರ್ ಕನ್ಸರ್‌ವೇಷನ್ ಟ್ರಸ್ಟ್ ಹಾಗೂ ಗ್ರಾಪಂ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ಧ ಪ್ಲಾಸ್ಟಿಕ್ ಮುಕ್ತ ನಿರ್ಮಾಣ ಕಾರ್ಯಕ್ರಮದ ಅಂಗವಾಗಿ ಸಸಿ ನೆಟ್ಟು ಮಾತನಾಡಿದರು.
ಪ್ರಪಂಚದಲ್ಲಿ ಪ್ಲಾಸ್ಟಿಕ್ ಸುಡುವುದು ಹಾಗೂ ಕಾಡ್ಗಿಚ್ಚಿನಿಂದ ೩೫೦ ಕೋಟಿ ಟನ್‌ನಷ್ಟು ವಿಷ ಅನಿಲ ಹೊರಸೂಸಿ ಜೀವಸಂಕುಲಕ್ಕೆ ಸ್ವಚ್ಛಂದ ಆಮ್ಲಜನಕ ಸಿಗುತ್ತಿಲ್ಲ. ಸ್ವರ್ಗದಂತ ಭೂಮಿಯಲ್ಲಿ ಕಾರ್ಖಾನೆಗಳ ವಿಷಾನಿಲ, ಪ್ಲಾಸ್ಟಿಕ್ ಸುಡುವುದರಿಂದ ಮನುಷ್ಯ ಅಲ್ಪಾಯುಷ್ಯದಲ್ಲೇ ಹೃದಯಘಾತಕ್ಕೆ ತುತ್ತಾಗುತ್ತಿದ್ದಾನೆ ಎಂದು ಹೇಳಿದರು.
ಹಬ್ಬ-ಹರಿದಿನಗಳಲ್ಲಿ ಮಾನವರು ರಸವನ್ನು ಕಸವನ್ನಾಗಿ ಮಾರ್ಪಾಡಿಸಿ ಪರಿಸರವನ್ನು ಕಲುಷಿತಗೊಳಿಸುತ್ತಿರುವುದು ಆತಂಕಕಾರಿ ಬೆಳವಣಿಗೆ. ಹೀಗಾಗಿ ನಾವುಗಳು ಕಸದಿಂದ ರಸವನ್ನು ತಯಾರಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ಹಮ್ಮಿಕೊಂಡಿದೆ ಹಾಗೂ ಸ್ವಚ್ಛಂದ ಆಮ್ಲಜನಕ ಉತ್ಪಾದಿಸಲು ಎಲ್ಲೆಡೆ ಸಸಿಗಳನ್ನು ನೆಟ್ಟು ಪೋಷಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದರು.
ಹAತ ಹಂತವಾಗಿ ಪರಿಸರವು ಕೈಜಾರುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಳ ವಾಗುತ್ತಿದೆ. ವೃದ್ದರ ಕಣ್ಮುಂದೆ ಮಕ್ಕಳು, ಮೊಮ್ಮಕ್ಕಳು ಹೃದಯ ಸಂಬAಧಿ ಕಾಯಿಲೆಗಳಿಗೆ ತುತ್ತಾಗಿ ಸಾವಿಗೀಡಾಗುತ್ತಿದ್ದಾರೆ. ಹೀಗಾಗಿ ಪ್ರತಿಯೊಬ್ಬರು ಜವಾಬ್ದಾರಿ ಹೊತ್ತು ನಮ್ಮ ಭೂಮಿ, ನಮ್ಮ ರಕ್ಷಣೆ ಎಂಬ ಧ್ಯೇಯದೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ತೇಗೂರು ಗ್ರಾಪಂ ಅಧ್ಯಕ್ಷೆ ರಾಧಾ ಮಾತನಾಡಿ, ಭವಿಷ್ಯದಲ್ಲಿ ನಾಡನ್ನು ಸುಗಂಧ ಭರಿತವಾಗಿ ಉಳಿಸುವ ನಿಟ್ಟಿನಲ್ಲಿ ಮಾನವ ಇಂದಿನಿAದಲೇ ಸಸಿಗಳನ್ನು ನೆಡಬೇಕು. ಅಲ್ಲದೇ ಪ್ರತಿ ಗ್ರಾಂಪA ವ್ಯಾಪ್ತಿಯಲ್ಲಿ ಹಾಗೂ ಶಾಲಾ-ಕಾಲೇಜುಗಳಲ್ಲಿ ಪರಿಸರಕ್ಕೆ ಪೂರಕ ಕಾರ್ಯಕ್ರಮ ಹಮ್ಮಿಕೊಂಡರೆ ಯುವಪೀಳಿಗೆಗೆ ಆಸರೆಯಾಗಲಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷೆ ಜಯಮ್ಮ, ಸದಸ್ಯರಾದ ಜಯಶ್ರೀ, ನಾರಾಯಣ್, ವೇಣುಗೋಪಾಲ್, ಮಹೇಶ್‌ಕುಮಾರ್, ಗಣೇಶರಾಜು, ಮನುಜ, ಪವನ್, ಬೀಬಿಜಾನ್, ಸುಧಾ, ದೇವಮ್ಮ, ರಂಗನಾಥ್, ಶಿವಪ್ರಸಾದ್, ಸ್ವಾಗತಿ, ಶೇಖರ್, ಪಿಡಿಓ ಮತ್ತಿತರರಿದ್ದರು.