ಜಿಲ್ಲೆ

ಉಲ್ಲಾಸದ ಜೀವನಕ್ಕೆ ಯೋಗ ಪ್ರೇರಣೆ

ಚಿತ್ರದುರ್ಗ: ನಿತ್ಯಯೋಗಾಭ್ಯಾಸದಿಂದ ಕಾಯಿಲೆಗಳಿಂದ ದೂರವಿರಬಹುದೆಂದು ಯೋಗಾಚಾರ‌್ಯ ಎಲ್.ಎಸ್.ಚಿನ್ಮಯಾನಂದ ಅಭಿಪ್ರಾಯ ಪಟ್ಟರು. 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಶುಕ್ರವಾರ ಮುರುಘಾ ಮಠದ ಅನುಭವ ಮಂಟಪದಲ್ಲಿ ಏರ್ಪಡಿಸಿ ದ್ದ‘ಯೋಗ ಸಂಭ್ರಮ’ ಪ್ರಾಣಾಯಾಮ, ಯೋಗಾಸನಗಳ ಪ್ರಾತ್ಯಕ್ಷಿಕೆ ಕಾರ‌್ಯಕ್ರಮದಲ್ಲಿ ಮಾತನಾಡಿ,ಆರೋಗ್ಯ ಸಮಸ್ಯೆಗೊಳಗಾದ ಮೇಲೆ ತಪಾಸಣೆ, ಚಿಕಿತ್ಸೆಗಿಂತ ಮುಂಜಾಗ್ರತವಾಗಿ ಯೋಗದ ಮೊರೆ ಹೋಗುವುದು ಜಾಣತನ. ಯೋಗ ಉಲ್ಲಾಸದ ಜೀವನಕ್ಕೆ ಪ್ರೇರಣೆಯಾಗಿ ದೆ. ಕ್ರಮಬದ್ಧ ಯೋಗಭ್ಯಾಸ ಜೀವನದ ವಿಧಾನವಾಗಬೇಕೆಂದರು.

ಸಾನ್ನಿಧ್ಯ ವಹಿಸಿದ್ದ ಶ್ರೀಮಠದ ಆಡಳಿತ ಮಂಡಳಿ ಸದಸ್ಯರಾದ ಶ್ರೀ ಡಾ.ಶ್ರೀ ಬಸವಕುಮಾರ ಸ್ವಾಮೀಜಿ ಮಾತನಾಡಿ,ಹವ್ಯಾಸ ಮತ್ತು ಅಭಿರುಚಿಗಳಿಂದ ಒಬ್ಬ ಮನುಷ್ಯನ ವ್ಯಕ್ತಿತ್ವ ನಿರ್ಧಾರವಾಗುತ್ತದೆ. ಕ್ರಿಯಾಶೀಲ ವ್ಯಕ್ತಿತ್ವ ರೂಪಿಸಿಕೊಳ್ಳಲು ಯೋಗ ನೆರವಾಗಲಿದೆ. ಆರೋ ಗ್ಯ ಚೆನ್ನಾಗಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು. ಆರೋಗ್ಯ ಕೆಟ್ಟರೆ ಬದುಕೇ ನಿರರ್ಥಕ ಎನಿಸುತ್ತದೆ ಎಂದು ಎಚ್ಚರಿಸಿದರು.

ವಿಶ್ವಪರಿಸರ ದಿನದ ಅಂಗವಾಗಿ ಶ್ರೀಮಠದಿಂದ ಈ ಬಾರಿ ಸಸಿ ನೆಡುವ ಸಪ್ತಾಹದ ಕಾರ‌್ಯಕ್ರಮದಡಿ ಸಾವಿರಾರು ಗಿಡಗಳನ್ನು ನೆಡಲಾ ಗಿದೆ. ಪರಿಸರ ಪ್ರಜ್ಞೆ ಎಲ್ಲರಲ್ಲೂ ಜಾಗೃತವಾಗಬೇಕೆಂದ ಶ್ರೀಗಳು,ವಿವಿಧ ಸಸಿಗಳನ್ನು ವಿತರಿಸಿದರು. ಶ್ರೀಮಠ ಶ್ರೀ ಬಸವ ಮುರುಘೇಂದ್ರ ಸ್ವಾಮೀಜಿ ಈಚೆಗೆ ಸಾಣೇಹಳ್ಳಿಯಲ್ಲಿ ನಡೆದ ವಚನ ಕಂಠಪಾಠ ಸ್ಪರ್ಧೆಯಲ್ಲಿ ನಗದು ಬಹುಮಾನ,ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿ ದ್ದಾರೆ ಎಂದು ಪ್ರಕಟಿಸಿದರು.

ಸಮ್ಮಖ ವಹಿಸಿದ್ದ ದಾವಣಗೆರೆ ವಿರಕ್ತಮಠದ ಡಾ.ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ,ದೇಹದಲ್ಲಿರುವ ಜಡತ್ವವನ್ನು ತೊಲಗಿಸಿ ದೈಹಿಕ ಮತ್ತು ಮನಸ್ಸಿನ ಸುಸ್ಥಿರತೆ, ಚೇತನಕ್ಕೆ ಯೋಗ ಸಹಕಾರಿಯಾಗುತ್ತದೆ. ಶಾಂತಿ, ನೆಮ್ಮದಿಗೆ ಯೋಗ, ಧ್ಯಾನ ಚಟುವಟಿಕೆಗಳು ಸಹ ಕಾರಿಯಾಗಿವೆ ಎಂದರು.

ಶ್ರೀ ಬಸವ ಮುರುಘೇಂದ್ರ ಸ್ವಾಮೀಜಿ,ರಾಷ್ಟ್ರೀಯ ಯೋಗ ಶಿಕ್ಷಣ ಹಾಗೂ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷ ಬಿ.ಆರ್.ಪ್ರಸನ್ನಕುಮಾರ್, ಉಪಾಧ್ಯಕ್ಷ ಎಂ.ಆರ್.ಮಂಜುನಾಥ್, ಕಾರ‌್ಯದರ್ಶಿ ಎಲ್.ಎಸ್.ಬಸವರಾಜ ಸೇರಿದಂತೆ ನಗರದ ವಿವಿಧ ಬಡಾವಣೆಗಳ ಯೋಗ ತರ ಬೇತುದಾರರು ಇದ್ದರು. ಕಲಾವಿದ ಉಮೇಶ್ ಪತ್ತಾರ್ ವಚನ ಪ್ರಾರ್ಥಿಸಿದರು. ಎಸ್‌ಜೆಎಂ ಐಟಿಐ ಕಾಲೇಜು ಪ್ರಾಚಾರ‌್ಯ ಬೋರೇಶ್ ಸ್ವಾಗತಿಸಿ,ಎಸ್‌ಜೆಎಂ ಪಾಲಿಟೆಕ್ನಿಕ್ ಹಿರಿಯ ಉಪನ್ಯಾಸಕಿ ಜೆ.ಪ್ರತಿಮಾ ವಂದಿಸಿದರು. ಬೋಧಕ ಕೆ. ಸುರೇಶ್ ಕಾರ‌್ಯಕ್ರಮ ನಿರ್ವಹಿಸಿದರು.