ಕೊಳ್ಳೇಗಾಲ ಪಟ್ಟಣದ ನೂರ್‌ಮೊಹಲ್ಲಾ ಬಡಾವಣೆಯಲ್ಲಿರುವ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ನಡೆಯಿತು. 
ಜಿಲ್ಲೆ

ಉರ್ದು ಶಾಲೆಗಳಲ್ಲಿ ಗುಣಮಟ್ಟ ಶಿಕ್ಷಣಕ್ಕೆ ಆದ್ಯತೆ

ಕೊಳ್ಳೇಗಾಲ: ನಗರದ ನೂರ್ ಮೊಹಲ್ಲಾದಲ್ಲಿರುವ ಉರ್ದು ಶಾಲೆಯಲ್ಲಿ ಇತ್ತೀಚೆಗೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಬಿಆರ್‌ಸಿ ಮಹಾದೇವಕುಮಾರ್, ಉರ್ದು ಶಾಲೆಗಳಲ್ಲಿ ಹಿಂದೆಗಿಂತ ಈಗ ಉತ್ತಮ ಶಿಕ್ಷಣ ಸಿಗುತ್ತಿದೆ. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಶಾಲೆಯ ಎಸ್‌ಡಿಎಂಸಿ ಸಹಕಾರ ನೀಡಬೇಕು. ಜತೆಗೆ ಸ್ಥಳೀಯ ನಗರಸಭೆ ಸದಸ್ಯರು ಕೈಜೋಡಿಸಬೇಕು ಎಂದರು.

ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ಸಹಕಾರಿ. ಮಕ್ಕಳು ಇಂದಿಲ್ಲಿ ನೀಡಿರುವ ಹಲವು ರೀತಿಯ ಚಟುವಟಿಕೆಗಳು ನಿಜಕ್ಕೂ ಶ್ಲಾಘನೀಯ ಎಂದು ಗುಣಗಾನ ಮಾಡಿದರು.

ಪ್ರತಿಭಾ ಕಾರಂಜಿಯಲ್ಲಿ ಉರ್ದು ಶಾಲೆಯ ಸುಮಾರು 130 ಮಕ್ಕಳು ಭಾಗವಹಿಸಿದ್ದರು. ಉರ್ದು ಸಿಆರ್‌ಪಿ ಆಯೇಷಾ ಖಾನಂ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆದವು. ನಗರಸಭೆ ಸದಸ್ಯೆ ಜಯಮರಿ, ಎಸ್‌ಡಿಎಂಸಿ ಅಧ್ಯಕ್ಷ ಮೊಹಮ್ಮದ್ ಗಯಾಜ್, ಇಸಿಒ ಗಳಾದ ಚಾಮರಾಜು, ಬಸವರಾಜು, ಬಿಆರ್‌ಪಿಗಳಾದ ಹಿನಾ ಕೌಸರ್, ಅನಿತಾ, ತಾಲೂಕು ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಕ್ಬರ್, ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀಧರ್, ಉರ್ದು ಪ್ರೌಢಶಾಲೆ ಮುಖ್ಯ ಶಿಕ್ಷಕಿ ಭಾಗ್ಯಾ, ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಶಬಾನ ಬಾನು ಮತ್ತಿತರರಿದ್ದರು.