ಜಿಲ್ಲೆ

ಉಪ್ಪಿಟ್ಟು ಸೇವಿಸಿ ಆಸ್ಪತ್ರೆಗೆ ವಿದ್ಯಾರ್ಥಿಗಳು ದಾಖಲಾದ ಪ್ರಕರಣ |ವಾರ್ಡ್‌ನ,ಪ್ರಾಂಶುಪಾಲ ಅಮಾನತು!

ಉಪ್ಪಿಟ್ಟು ಸೇವಿಸಿ ಆಸ್ಪತ್ರೆಗೆ ವಿದ್ಯಾರ್ಥಿಗಳು ದಾಖಲಾದ ಪ್ರಕರಣ

|ವಾರ್ಡ್‌ನ,ಪ್ರಾಂಶುಪಾಲ ಅಮಾನತು!

!ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದ ಜಿಪಂ ಸಿಇಒ ಶಿಂಧೆ

ವಿಜಯವಾಣಿ ಸುದ್ದಿಜಾಲ ಚಿಕ್ಕೋಡಿ:

ತಾಲೂಕಿನ ಹಿರೇಕೊಡಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳು ಅಸ್ವಸ್ಥತಗೊಂದು ಆಸ್ಪತ್ರೆಗೆ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸ್ಟೆಲ್ ವಾರ್ಡನ್ ಹಾಗೂ ಪ್ರಾಂಶುಪಾಲರನ್ನು ಅಮಾನತು ಮಾಡಲಾಗಿದೆ ಎಂದು ಜಿಪಂ ಸಿಇಒ ರಾಹುಲ್ ಶಿಂಧೆ ತಿಳಿಸಿದರು.

ಪಟ್ಟಣದ ಸರ್ಕಾರಿ ತಾಲೂಕು ಆಸ್ಪತ್ರೆಗೆ ಶನಿವಾರ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿ, ಮಾತನಾಡಿದ ಅವರು, ಮಕ್ಕಳ ಸೇವಿಸಿದ ಆಹಾರ ಹಾಗೂ ನೀರಿನ ಮಾದರಿಯನ್ನು ಪರಿಶೀಲನೆಗೆ ಕಳುಹಿಸಲಾಗಿದೆ. ಮಾದರಿಗಳ ವರದಿ ಬಂದ ಬಳಿಕ ತಪ್ಪಿತಸ್ಥರ ಮೇಲೆ ಕ್ರಮಕೈಗೊಳ್ಳಲಾಗುವುದು ಎಂದರು.

ಮಕ್ಕಳ ಪೋಷಕರಿಗೆ ವಸತಿ ಹಾಗೂ ಊಟದ ವ್ಯವಸ್ಥೆ ಮಾಡಬೇಕು. ಜತೆಗೆ ಆರೋಗ್ಯ ಸುಧಾರಣೆ ಕಂಡ ಮಕ್ಕಳನ್ನು ಮನೆಗೆ ಕಳುಹಿಸಲು ವಾಹನದ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಬಳಿಕ ಹಿರೆಕೋಡಿ ಮೋರಾರ್ಜಿ ದೇಸಾಯಿ ಹಾಸ್ಟೆಲ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಅಡುಗೆ ಕೋಣೆ, ನೀರಿ‌ನ ಪೂರೈಕೆಯ ವ್ಯವಸ್ಥೆ ಪರಿಶೀಲಿಸಿ, ವಾರ್ಡನ್ ಮತ್ತು ಪ್ರಾಂಶುಪಾಲರಿಂದ ಮಾಹಿತಿ ಪಡೆದುಕೊಂಡರು.

ಉಪ ವಿಭಾಗಾಧಿಕಾರಿ ಸುಭಾಷ ಸಂಪಗಾಂವ, ತಾಪಂ ಇಒ ಕೆ.ಎನ್.ವಣ್ಣೂರ, ಡಿವೈಎಸ್ ಪಿ ಗೋಪಾಲಕೃಷ್ಣ ಗೌಡರ, ಜಿಪಂ ಯೋಜನಾ ನಿರ್ದೇಶಕ ರವಿ ಬಂಗಾರೆಪ್ಪನ್ನವರ, ತಹಶಿಲ್ದಾರರ ರಾಜೇಶ್ ಬುರ್ಲಿ, ತಾಪಂ ಸಹಾಯಕ ನಿರ್ದೇಶಕರಾದ ಎಸ್.ಎಸ್.ಮಠದ, ಶಿವಾನಂದ ಶಿರಗಾಂವೆ ಇತರರಿದ್ದರು.

----

ಭಾಕ್ಸ್

ಮತ್ತಷ್ಟು ಮಕ್ಕಳು ಆಸ್ಪತ್ರೆಗೆ ದಾಖಲು

ಕಲುಷಿತ ಆಹಾರ ಸೇವಿಸಿದ ಪರಿಣಾಮ ಅಸ್ವಸ್ಥಗೊಂಡು ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದ ವಿದ್ಯಾರ್ಥಿಗಳಿಗೆ ಚಿಕಿತ್ಸೆ ಮುಂದುವರೆದಿದ್ದು,ಶನಿವಾರ ಬೆಳಗ್ಗೆ ಮತ್ತಷ್ಟು ವಿದ್ಯಾರ್ಥಿಗಳಲ್ಲಿ ವಾಂತಿ ಭೇದಿ ಕಾಣಿಸಿಕೊಂಡಿದ್ದರಿಂದ ಮತ್ತೆ 33 ವಿದ್ಯಾರ್ಥಿಗಳನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ತಾಲೂಕಿನ ಹಿರೇಕೋಡಿ ಗ್ರಾಮದಲ್ಲಿರುವ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಮೋರಾರ್ಜಿ ವಸತಿ ನಿಲಯದಲ್ಲಿನ ಒಟ್ಟು 400 ವಿದ್ಯಾರ್ಥಿಗಳು ಓದುತಿದ್ದು,ಶುಕ್ರವಾರ ಬೆಳಗ್ಗೆ ಉಪಹಾರದ ಉಪ್ಪಿಟ್ಟು ಸೇವಿಸಿ ಮಕ್ಕಳು ಅಸ್ವಸ್ಥರಾಗಿದ್ದರು.

ಒಟ್ಟು ದಾಖಲಾದ 110 ವಿದ್ಯಾರ್ಥಿಗಳ ಪೈಕಿ ಚೇತರಿಸಿಕೊಂಡ 45 ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಲಾಗಿದ್ದು,ಹಾಗೂ 9 ವಿದ್ಯಾರ್ಥಿಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ.ಇನ್ನುಳಿದ ವಿದ್ಯಾರ್ಥಿಗಳಿಗೆ ಚಿಕಿತ್ಸೆ ಮುಂದುವರಿದಿದೆ ಎಂದು ಟಿಎಚ್ ಓ ಡಾ.ಸುಕುಮಾರ ಬಾಗಾಯಿ ತಿಳಿಸಿದ್ದಾರೆ.