ಕೊಳ್ಳೇಗಾಲ: ಪಟ್ಟಣದ ಉಪ್ಪಾರ ಮೋಳೆ ಬಡಾವಣೆಯಲ್ಲಿ ಮಂಗಳವಾರ ತಾಲೂಕು ಉಪ್ಪಾರ ಸಂಘದ ವತಿಯಿಂದ ಮನೆ ಮನೆಗೆ ತೆರಳಿ ಉಪ್ಪಾರ ಸಮುದಾಯ ಕುಲಶಾಸ್ತ್ರ ಅಧ್ಯಯನದ ಸಮೀಕ್ಷೆ ಮಾಡಲಾಯಿತು.
ತಾಲೂಕು ಉಪ್ಪಾರ ಸಂಘದ ಅಧ್ಯಕ್ಷ ಉಪ್ಪಾರ ಸೋಮಣ್ಣ ಮಾತನಾಡಿ, ಎಸ್ಸಿ -ಎಸ್ಟಿ ಪಟ್ಟಿಗೆ ಉಪ್ಪಾರ ಸಮುದಾಯ ಸೇರಿಸುವ ಕುರಿತು ಸರ್ಕಾರದ ಮುಂದಿದ್ದ ಒತ್ತಾಯದಂತೆ ಸರ್ಕಾರ ನಿರ್ದೇಶನದಂತೆ ಉಪ್ಪಾರ ಜನರ ಕುಲಶಾಸ್ತ್ರ ಅಧ್ಯಯನ ಕಾರ್ಯ ನಡೆಯುತ್ತಿದೆ. ಆದ್ದರಿಂದ ಉಪ್ಪಾರರು ಸಮೀಕ್ಷೆ ನಡೆಸಲು ಬಂದವರಿಗೆ ಸೂಕ್ತ ಮಾಹಿತಿ ನೀಡಿ ಎಂದು ಮನವಿ ಮಾಡಿದರು
ತಾಲೂಕು ಉಪ್ಪಾರ ಸಂಘದ ಪದಾಧಿಕಾರಿಗಳಾದ ರಮೇಶ್. ಸೋಮಣ್ಣ ಉಪ್ಪಾರ್. ನಟರಾಜ್. ನಾಗರಾಜು. ಪರಮೇಶ್, ರಾಜೇಂದ್ರ, ಮಹಾದೇವಸ್ವಾಮಿ. ಹರೀಶ್, ಚಿಕ್ಕಣ್ಣ. ಪ್ರಸಾದ್, ಸ್ವಾಮಿ. ಮಹದೇವಶೆಟ್ಟಿ ಮತ್ತು ಗ್ರಾಮದ ಯಜಮಾನರು ಹಾಗು ಮುಖಂಡರು ಉಪಸ್ಥಿತರಿದ್ದರು.