ಗೋಕಾಕ, ಬೆಳಗಾವಿ: ಉಪ್ಪಾರ ಸಮುದಾಯವನ್ನು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿಸಿ, ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯವಾಗಿ ಅಭಿವೃದ್ಧಿ ಹೊಂದಲು ಸಹಕರಿಸಬೇಕು ಎಂದು ತಾಲೂಕು ಭಗೀರಥ ಉಪ್ಪಾರ ಸಂಘದ ಅಧ್ಯಕ್ಷ ಶಿವಪುತ್ರ ಜಕಬಾಳ ಆಗ್ರಹಿಸಿದರು.
ನಗರದ ಬಸವೇಶ್ವರ ವೃತ್ತದಲ್ಲಿ ಗೋಕಾಕ ತಾಲೂಕು ಭಗೀರಥ ಉಪ್ಪಾರ ಸಂಘದಿಂದ ಗುರುವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ತಹಸೀಲ್ದಾರ್ ಪ್ರಕಾಶ ಹೊಳೆಪ್ಪಗೋಳ ಅವರ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಉಪ್ಪಾರ ಸಮುದಾಯ 52ಲಕ್ಷಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿದೆ. 2009ರಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಅವರು ಉಪ್ಪಾರ ಸಮುದಾಯವನ್ನು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಪತ್ರ ಬರೆದಿದ್ದರು. ಸದ್ಯ ಅವರೇ ಮುಖ್ಯಮಂತ್ರಿ ಇದ್ದು, ಬೊಮ್ಮಾಯಿ ಅವರು ಕೂಡಲೇ ಉಪ್ಪಾರ ಸಮುದಾಯವನ್ನು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಠ ಪಂಗಡಕ್ಕೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು, ಉಪ್ಪಾರ ಸಮುದಾಯ ಅಭಿವೃದ್ಧಿ ಹೊಂದಲು ಮೀಸಲಾತಿ ಅವಶ್ಯ ಎಂದು ಒತ್ತಾಯಿಸಿದರು.
ಮಾಜಿ ಜಿಪಂ ಸದಸ್ಯ ಟಿ.ಆರ್.ಕಾಗಲ ಮಾತನಾಡಿ, ಉಪ್ಪಾರ ಸಮುದಾಯವನ್ನು ಸಮಾಜದ ಮುನ್ನಲೆಗೆ ತರುವಂತೆ ನ್ಯಾ.ಹಾವನೂರ, ನ್ಯಾ.ವೆಂಕಟಸ್ವಾಮಿ ಹಾಗೂ ನ್ಯಾ.ಚಿನ್ನಪ್ಪಾ ರೆಡ್ಡಿ ಆಯೋಗಗಳು ವರದಿ ಸಲ್ಲಿಸಿವೆ. ಆದ್ದರಂದ ಕೂಡಲೆ ಮೀಸಲಾತಿ ನೀಡಬೇಕೆಂದರು.
ರಾಜ್ಯ ಉಪ್ಪಾರ ಸಂಘದ ಮಾಜಿ ರಾಜ್ಯಾಧ್ಯಕ್ಷ ಬಿ.ಆರ್.ಕೊಪ್ಪ ಮಾತನಾಡಿದರು. ಗೋಕಾಕ ತಾಲೂಕು ಉಪ್ಪಾರ ಸಂಘದ ಉಪಾಧ್ಯಕ್ಷ ಕುಶಾಲ ಗುಡೇನ್ನವರ, ಅಡಿವೆಪ್ಪ ಕಿತ್ತೂರ, ಕಾರ್ಯದರ್ಶಿ ಯಲ್ಲಪ್ಪ ದುರದುಂಡಿ, ವಿಠ್ಠಲ ಮೆಳವಂಕಿ, ವಿಠ್ಠಲ ಸವದತ್ತಿ, ಪರಸಪ್ಪ ಚೂನನ್ನವರ, ಶಂಕರ ಬಿಲಕುಂದಿ, ಭೀಮಶಿ ಭರಮನ್ನವರ, ಅಶೋಕ ಗೋಣಿ, ಮುತ್ತೆಪ್ಪ ಕುಳ್ಳೂರ, ಮಲ್ಲಿಕಾರ್ಜುನ ಚೌಕಾಶಿ, ಲಕ್ಷ್ಮಣ ಖಡಕಭಾಂವಿ, ಬಸವರಾಜ ಖಾನಪ್ಪನವರ, ಗಂಗಾಧರ ಭಟ್ಟಿ, ಎಸ್.ಎಸ್.ಪಾಟೀಲ, ಸದಾನಂದ ಗುದಗೋಳ, ಸಿದ್ದಪ್ಪ ಹಮ್ಮನವರ, ಶಿವಪ್ಪ ಮರ್ದಿ, ಭರಮಣ್ಣ ಉಪ್ಪಾರ, ಪರಸಪ್ಪ ಬಬಲಿ, ಯಲ್ಲಪ್ಪ ಸುಳ್ಳನವರ, ಲಕ್ಕಪ್ಪ ಭೂಮನ್ನವರ, ಎಲ್.ಎಸ್.ಭಂಡಿ, ವೈ.ಎಲ್.ಹೆಜ್ಜೆಗಾರ, ಮಾಯಪ್ಪ ತಹಸೀಲ್ದಾರ್, ಮಂಜುನಾಥ ಜಲ್ಲಿ, ಕಲ್ಲಪ್ಪ ಕಿಚಡಿ, ರಾಮಸಿದ್ಧ ನಾಗನೂರ, ಗೋಪಾಲ ಗೋಣಿ, ರೇವಪ್ಪ ದುರದುಂಡಿ, ಸಿದ್ಧಪ್ಪ ಗೌಡಪ್ಪನವರ, ವೈ.ಕೆ.ಕೌಜಲಗಿ, ಅಲ್ಲಪ್ಪ ಕಂಕಣವಾಡಿ, ಸತ್ತೆಪ್ಪ ಬಬಲಿ, ಮಹಾದೇವ ಕಣವಿ, ಶಿವಪುತ್ರ ದುರದುಂಡಿ, ಅವ್ವಣ್ಣ ಗೌಡಿ, ಧರೆಪ್ಪ ಅಂತರಗಟ್ಟಿ, ಶಂಕರ ಸಣ್ಣಲಮನ್ನವರ ಇತರರಿದ್ದರು.