ಜಿಲ್ಲೆ

ಉಪ್ಪಾರಮೋಳೆಗಳೆಂದರೆ ಕಾಳಜಿ

ಚಾಮರಾಜನಗರ: ಸಂಸದರಾಗಿದ್ದ ವಿ.ಶ್ರೀನಿವಾಸಪ್ರಸಾದ್‌ಗೆ ಉಪ್ಪಾರ ಮೋಳೆಗಳ ಮೇಲೆ ಅಪಾರ ಕಾಳಜಿ ತೋರುತ್ತಿದ್ದರು ಎಂದು ಎಂಎಸ್‌ಐಎಲ್ ಅಧ್ಯಕ್ಷರೂ ಆಗಿರುವ ಶಾಸಕ ಸಿ.ಪುಟ್ಟರಂಗಶೆಟ್ಟಿ ಹೇಳಿದರು.

ನಗರದ ರಾಮಸಮುದ್ರದ ಆಟೋ ನಿಲ್ದಾಣದಲ್ಲಿ ವಿ.ಶ್ರೀನಿವಾಸಪ್ರಸಾದ್ ಅವರ ಉತ್ತರ ಕ್ರಿಯಾಧಿ ಮತ್ತು ಭೂಶಾಂತಿ ಕಾರ್ಯಕ್ರಮದ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ನುಡಿ ನಮನ ಕಾರ್ಯಕ್ರಮದಲ್ಲಿ ಪುಷ್ಪಾರ್ಚನೆ ನೆರವೇರಿಸಿ ಅವರು ಮಾತನಾಡಿದರು. ಪ್ರಸಾದ್ ಅವರು ರಾಜಕಾರಣದಲ್ಲಿ ಸುದೀರ್ಘ ಸೇವೆ ಸಲ್ಲಿಸಿದರು. ಎಲ್ಲ ಸಮುದಾಯಗಳ ಬಗ್ಗೆ ಅಪಾರ ಪ್ರೀತಿ, ವಿಶ್ವಾಸ ಹೊಂದಿದ್ದರು. ಉಪ್ಪಾರ ಸಮುದಾಯ ವಾಸ ಮಾಡುವ ಮೋಳೆಗಳ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು. ನಾನು ಕೂಡ ರಾಜಕಾರಣದಲ್ಲಿ ಇಷ್ಟುಮಟ್ಟಕ್ಕೆ ಬರಲು ಪ್ರಸಾದ್ ಕಾರಣಕರ್ತರು. ಅವರನ್ನು ಎಂದೆಂದಿಗೂ ಮರೆಯೋದಿಲ್ಲ ಎಂದರು.

ರಾಮಸಮುದ್ರದ ದೊಡ್ಡ ಯಾಜಮಾನ ಬಿ.ನಾಗರಾಜು, ಯಜಮಾನರಾದ ಪಾಪಣ್ಣ, ನಂಜುಂಡ, ಬಸವರಾಜು, ಶಿವರಾಜು, ಅಂಜನೇಯ, ಡಿ.ನಂಜಯ್ಯ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮದ್ ಅಸ್ಗರ್, ಮುಖಂಡ ಎ.ಎಚ್.ಖಾನ್, ನಗರಸಭೆ ಸದಸ್ಯ ಆರ್.ಎಂ.ರಾಜಪ್ಪ ಮತ್ತು ಇತರರು ಇದ್ದರು.