ಮೈಸೂರು: ಜಿಲ್ಲಾ ಉಪ್ಪಾರ ನೌಕರರ ಮತ್ತು ವೃತ್ತಪರರ ಸಂಘದಿಂದ ಉಪ್ಪಾರ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಗುವುದು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಲಿಂಗಣ್ಣ ತಿಳಿಸಿದರು.
ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಶೇ.85, ಸಿಬಿಎಸ್‌ಸಿಯಲ್ಲಿ ಶೇ.75 ಅಲ್ಲದೇ ಅಂತಿಮ ಪದವಿ, ಸ್ನಾತಕೋತ್ತರ ಪದವಿಗಳಲ್ಲಿ ರ‌್ಯಾಂಕ್ ಪಡೆದವರು, ಪಿಎಚ್‌ಡಿ ಪದವೀಧರರು, ವಿವಿಧ ಹುದ್ದೆಗಳಲ್ಲಿ ಬಡ್ತಿ, ನಿವೃತ್ತಿ ಹೊಂದಿದ ನೌಕರರು ಹಾಗೂ ವಿಶೇಷ ಸ್ಥಾನಮಾನ ಪಡೆದ ಸಮಾಜದ ಜನಪ್ರತಿನಿಧಿಗಳು, ಸಮಾಜ ಸೇವಕರನ್ನು ಸನ್ಮಾನಿಸಲಾಗುವುದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಗರದ ಕಲಾಮಂದಿರದಲ್ಲಿ ನವೆಂಬರ್ 11ರಂದು ಕಾರ್ಯಕ್ರಮ ಆಯೋಜಿಸಲಾಗಿದ್ದು, ಆಸಕ್ತರು ಸೆ.30ರ ಒಳಗೆ ಅರ್ಜಿಗಳನ್ನು ಅಂಕಪಟ್ಟಿ, ಜಾತಿ ಪ್ರಮಾಣಪತ್ರ, ವಿಳಾಸ, ಮೊಬೈಲ್ ಸಂಖ್ಯೆಯೊಂದಿಗೆ ಪ್ರಧಾನ ಕಾರ್ಯದರ್ಶಿ, ನಂ.2793, 2ನೇ ಮುಖ್ಯರಸ್ತೆ, 2ನೇ ಕ್ರಾಸ್, ಜಯನಗರ, ಮೈಸೂರು-14. ಇಲ್ಲಿಗೆ ಕಳುಹಿಸಬಹುದು. ಮಾಹಿತಿಗೆ 9980906469 ಅನ್ನು ಸಂಪರ್ಕಿಸಲು ಕೋರಿದರು.
ಸಂಘದ ಅಧ್ಯಕ್ಷ ಜವರಶೆಟ್ಟಿ, ಪದಾಧಿಕಾರಿಗಳಾದ ಫಿಲಂ ಮಹದೇಶೆಟ್ಟಿ, ಶಿವರಾಜು ಇದ್ದರು.