ಕೊಳ್ಳೇಗಾಲ: ಚಿತ್ರನಟ ಉಪೇಂದ್ರ ಅವರನ್ನು ಬಂಧಿಸುವಂತೆ ಆಗ್ರಹಿಸಿ ಆದಿ ದ್ರಾವಿಡ ಮೂಲನಿವಾಸಿಗಳ ಹೋರಾಟ ಸಮಿತಿ ಸದಸ್ಯರು ಪಟ್ಟಣದ ತಾಲೂಕು ಕಚೇರಿಯ ಮುಂಭಾಗದಲ್ಲಿ ನಡೆಸುತ್ತಿರುವ ಪ್ರತಿಭಟನೆಯಲ್ಲಿ 14ನೇ ದಿನವಾದ ಗುರುವಾರ ಹಳೇ ಅಣಗಳ್ಳಿ ಗ್ರಾಮಸ್ಥರು ಬೆಂಬಲ ಸೂಚಿಸಿ ಭಾಗವಹಿಸಿದರು.
ಹಿರಿಯ ವಕೀಲ ಕಾಮಗೆರೆ ಬಸವರಾಜು ಮಾತನಾಡಿ, ಉಪೇಂದ್ರ ಅವರನ್ನು ಬಂಧಿಸುವವರೆಗೂ ಪ್ರತಿಭಟನೆ ನಡೆಸುವುದಾಗಿ ಕಿಡಿಕಾರಿದರು.
ಯಜಮಾನರಾದ ಸಂಜೀವಯ್ಯ, ಸಿದ್ದರಾಜು, ಜೋಗಿಸಿದ್ದಯ್ಯ, ಸಮಿತಿಯ ಸಂಚಾಲಕರಾದ ಚಾಮರಾಜು, ರಾಜಪ್ಪ, ಅಣಗಳ್ಳಿ ಬಸವರಾಜು, ಜೈರಾಜು ಸತ್ತೇಗಾಲ, ಮಲ್ಲರಾಜು, ಮಹಾಲಿಂಗಯ್ಯ, ಕೆಂಪರಾಜು, ಲಿಂಗಯ್ಯ ಕುಂತೂರು, ಮುಖಂಡರಾದ ಶಂಕರ್, ಚೇತನ್ ಪ್ರಭು, ರಾಕೇಶ್, ಗಿರೀಶ್ ಇತರರು ಇದ್ದರು.