ಮುಗಳಖೋಡ: ಇಲ್ಲಿನ ಪುರಸಭೆಯಲ್ಲಿ ಶನಿವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಉಪಾಧ್ಯಕ್ಷರಾಗಿ ಲಕ್ಷ್ಮಿಬಾಯಿ ಶೇಗುಣಸಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ, ತಹಸೀಲ್ದಾರ್ ಮುಂಜೆ ಘೋಷಿಸಿದ್ದಾರೆ.
ಈ ಸಂದರ್ಭದಲ್ಲಿ ಅಧ್ಯಕ್ಷೆ ಶಾಂತಾ ಗೋಕಾಕ, ಮಾಜಿ ಉಪಾಧ್ಯಕ್ಷೆ ಗಂಗವ್ವ ಬೆಳಗಲಿ, ರಾಜು ನಾಯಿಕ, ಅನುಸುಯಾ ಲಮಾಣಿ, ಹಾಲಪ್ಪ ಶೇಗುಣಸಿ, ಗೀತಾ ಪ್ರಧಾನಿ, ಲಕ್ಷ್ಮಿಬಾಯಿ ಶಿವಪ್ಪ ಶೇಗುಣಸಿ, ಚೇತನ ಯಡವಣ್ಣವರ, ಮಹಾಂತೇಶ ಯರಡೆತ್ತಿ, ಸಾವಿತ್ರಿ ಶ್ರೀಶೈಲ ಯರಡೆತ್ತಿ, ಕೆಂಪಣ್ಣ ಕಾಡಪ್ಪ ಅಂಗಡಿ, ಪ್ರಭಾವತಿ ಹೊಸಪೇಟಿ, ಐರವ್ವ ವಾಡೆಣ್ಣವರ, ಅನುಸೂಯಾ ಲಮಾಣಿ ಇತರರಿದ್ದರು.