ಹಾರೂಗೇರಿ ಪಟ್ಟಣದ ಪಿಕೆಪಿಎಸ್‌ನಲ್ಲಿ ಹಮ್ಮಿಕೊಂಡಿದ್ದ ಸಿಇಒಗಳ ಒಂದು ದಿನದ ತರಬೇತಿ ಕಾರ್ಯಗಾರವನ್ನು ಗಣ್ಯರು ಉದ್ಘಾಟಿಸಿದರು. ಅಪ್ಪಾಸಾಬ ಕುಲಗೂಡೆ, ಬಿ.ಎಸ್.ರಬಗಲ್, ಬಿ.ಡಿ.ಪಾಟೀಲ, ಜಯಕುಮಾರ ದೇಸಾಯಿ, ಎಂ.ಎಂ.ಜಂಬಗಿ, ಮಹಾಲಿಂಗ ಮರಡಿ ಇತರರಿದ್ದರು. 
ಜಿಲ್ಲೆ

ಉಪವಿಧಿ ಅರಿತರೆ ಸಹಕಾರ ರಂಗ ಬಲಿಷ್ಠ

ಹಾರೂಗೇರಿ: ಸಹಕಾರ ಸಂಘಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಸಹಕಾರ, ಸಂಘದ ಕಾಯ್ದೆ ಮತ್ತು ಉಪವಿಧಿ ತಿಳಿದುಕೊಂಡು ಕಾರ್ಯನಿರ್ವಹಿಸಿದರೆ ಮಾತ್ರ ಸಹಕಾರ ರಂಗ ಬಲಿಷ್ಠವಾಗಲು ಸಾಧ್ಯ ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಅಪ್ಪಾಸಾಬ ಕುಲಗೂಡೆ ಅಭಿಮತ ವ್ಯಕ್ತಪಡಿಸಿದರು.

ಇಲ್ಲಿನ ಪಿಕೆಪಿಎಸ್ ಸಭಾ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಾಯಬಾಗ ತಾಲೂಕಿನ ಪಿಕೆಪಿಎಸ್ ಸಿಇಒಗಳಿಗೆ ಒಂದು ದಿನದ ತರಬೇತಿ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
ತಾಲೂಕು ನಿಯಂತ್ರಣಾಧಿಕಾರಿ ಬಿ.ಎಸ್.ರಬಗಲ್ ಮಾತನಾಡಿ, ಆರ್ಥಿಕ ವರ್ಷ ಪೂರ್ಣಗೊಂಡ ಬಳಿಕ ಲೆಕ್ಕ ಪರಿಶೋಧನೆ ಇಲಾಖೆಗೆ ಕಾಗದ ಪತ್ರ ಸಲ್ಲಿಸಬೇಕು ಎಂದರು.

ಜಿಲ್ಲಾ ಸಹಕಾರ ಯುನಿಯನ್ ಅಧ್ಯಕ್ಷ ಬಿ.ಡಿ.ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಯುನಿಯನ್ ನಿರ್ದೇಶಕ ಜಯಕುಮಾರ ದೇಸಾಯಿ, ಬಿಡಿಸಿಸಿ ಬ್ಯಾಂಕ್ ನಿರೀಕ್ಷಕ ಎಂ.ಎಂ.ಜಂಬಗಿ, ಮಹಾಲಿಂಗ ಮರಡಿ, ಸುನೀಲ ನಂದಗಾಂವ, ಬಿ.ಎಂ.ಬಾಬನ್ನವರ, ಸುಧೀರ ನಂದಗಾಂವ, ರಾಯಬಾಗ ಸಹಕಾರ ಅಭಿವೃದ್ಧಿ ಅಧಿಕಾರಿ ಶಂಕರ ಕರಬಸನ್ನವರ, ಜಿಲ್ಲಾ ಯುನಿಯನ್ ಮುಖ್ಯಕಾರ್ಯನಿರ್ವಾಹಕ ಹಾಲಪ್ಪ ಜಗ್ಯಾನ್ನವರ, ಜಿಲ್ಲಾ ಸಹಕಾರ ಯುನಿಯನ್ ಶಿಕ್ಷಕ ಶ್ರೀಶೈಲ ಯಡಹಳ್ಳಿ, ಬಿಡಿಸಿಸಿ ಬ್ಯಾಂಕ್ ನಿರೀಕ್ಷಕ ಶಿವಾನಂದ ಸತ್ತಿ ಇತರರಿದ್ದರು.