ಜಿಲ್ಲೆ

ಉಪಳಾಂವದಲ್ಲಿ ಆರೋಗ್ಯ ತಪಾಸಣೆ ಶಿಬಿರ ಯಶಸ್ವಿ

ಬಾಬುರಾವ ಯಡ್ರಾಮಿ

ಡಾ.ಗುಬ್ಬಿ ಅಭಿಮತ
ನೆಮ್ಮದಿಯಾಗಿರಲು ಆರೋಗ್ಯ ಮುಖ್ಯ
ವಿಜಯವಾಣಿ ಸುದ್ದಿಜಾಲ ಕಲಬುರಗಿ
ಆರ್ಥಿಕವಾಗಿ ಎಷ್ಟೆ ಸದೃಢರಾಗಿದ್ದರೂ ಜೀವನದ ಆನಂದ ಅನುಭವಿಸಲು ಮತ್ತು ನೆಮ್ಮದಿಯಾಗಿರಲು ಉತ್ತಮ ಆರೋಗ್ಯ ಬಹುಮುಖ್ಯ ಎಂದು ಹಿರಿಯ ವೈದ್ಯರಾದ ಸಾಹಿತಿ ಡಾ.ಎಸ್.ಎಸ್.ಗುಬ್ಬಿ ಹೇಳಿದರು.
ತಾಲೂಕಿನ ಉಪಳಾಂವ ಗ್ರಾಮದಲ್ಲಿರುವ ಶ್ರೀರಾಮ ಕನ್ನಡ ಶಾಲೆಯ ಆವರಣದಲ್ಲಿ ಸ್ನೇಹ ಸಂಗಮ ವಿವಿಧೋz್ದೆÃಶ ಸೇವಾ ಸಂಘ ಹಾಗೂ ಕಲಬುರಗಿಯ ಶೈನ್ ಹೆಲ್ತï ಕೇರ್ ಸೆಂಟರ್ ಸಂಯುಕ್ತವಾಗಿ ಶನಿವಾರ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿ. ಗ್ರಾಮೀಣ ಭಾಗದ ಜನರು ರೋಗ ಬಂದ ಮೇಲೆ ಚಿಕಿತ್ಸೆ ಪಡೆಯುವುದಕ್ಕಿಂತೆ ಮುನ್ನೆಚ್ಚರಿಕೆ ವಹಿಸಿ ಜೀವನ ನಡೆಸಬೇಕು ಎಂದರು. ಅಲ್ಲದೆ ಸಮಾಜ ಸೇವಕ ಹಣಮಂತರಾಯ ಅಟ್ಟೂರ ಕಾರ್ಯ ಶ್ಲಾಘಿಸಿದರು.
ಜೀವನ ಜ್ಯೋತಿ ಆಸ್ಪತ್ರೆ ನಿರ್ದೇಶಕ ಡಾ.ಅಮರನಾಥ ಮಹಾರಾಜ ಮಾತನಾಡಿ, ಇಂದಿನ ಸಮಯದಲ್ಲಿ ಜನರು ಹಣ ಗಳಿಸುವುದಕ್ಕೆ ಆರೋಗ್ಯ ಹಾಳು ಮಾಡಿಕೊಳ್ಳುತ್ತಿz್ದÁರೆ, ಮತ್ತೆ ಆರೋಗ್ಯ ಸರಿಪಡಿಸಿಕೊಳ್ಳಲು ಗಳಿಸಿದ ಹಣ ಖರ್ಚು ಮಾಡಿಕೊಳ್ಳುತ್ತಿz್ದÁರೆ. ಅದರ ಬದಲಿಗೆ ಆರೋಗ್ಯ ನಿರ್ಲP್ಷÀ ಮಾಡಬೇಡಿ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿದ್ದ ಯುವ ಮುಖಂಡ ವೀರೇಶ ಬಿರಾದಾರ, ಶಿವಲಿಂಗಪ್ಪ ಟೆಂಗಳಿ, ಕಲಾವಿದ ಸಂಗಮೇಶ ಶಾಸ್ತಿç ಮಾಶಾಳ, ಡಾ.ಜಿಲಾನಿ ಖಾನ, ಡಾ, ಸ್ಯಾಮುವೆಲ್ ಎಡಿಸನ್ ವೇದಿಕೆಯಲ್ಲಿದ್ದರು.

ಹಣಮಂತರಾಯ ಅಟ್ಟೂರ, ಲಕ್ಷ್ಮಿಕಾಂತ ಟೆಂಗಳಿ, ಉಮೇಶ ದೇಗಾಂವ, ರಘುನಂದನ ಕುಲಕರ್ಣಿ, ನಾಗರಾಜ ನಾಗೂರ, ನಾಗರಾಜ ತುಳಜಾಪುರ, ಹಣಮಂತರಾಯ ಮಾಳೆಗಾಂವ, ಚಂದ್ರಕಾAತ ಮುತ್ತಗಿ, ಶಿವಶರಣಪ್ಪ ಬಿರಾದಾರ, ಹಣಮಂತರಾಯ ಅಟ್ಟೂರ, ಜ್ಯೋತಿ ಪಾಟೀಲ, ಶ್ವೇತಾ ರೆಡ್ಡಿ, ದೇವರಾಜ ಮಳ್ಳಿ, ಸಂಗೀತಾ ಪಾಟೀಲ, ಸುನಿತಾ, ಮೀನಾಕ್ಷಿ, ಶಿಲ್ಪಾ, ಸುಶ್ಮಿತಾ ಕುಂಬಾರ, ಆಫ್ರಿನ್, ನಿವೇದಿತಾ, ಪ್ರಿಯಾಂಕಾ, ಓಮದೇವಿ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಉಪಳಾಂವ ಹಾಗೂ ಸುತ್ತಮುತ್ತಲಿನ ಹಳ್ಳಿಗಳÀ ಜನರು ಆರೋಗ್ಯ ತಪಾಸಣೆ ಮಾಡಿಕೊಂಡರು.