?????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????? 
ಜಿಲ್ಲೆ

ಉಪಯೋಗಕ್ಕೆ ಬಾರದ ಕುಡಿಯುವ ನೀರಿನ ಘಟಕ

ಎ. ಆರ್. ರಘುರಾಮ

ಅಧಿಕಾರಿಗಳ ಇಚ್ಛಾಶಕ್ತಿ ಕೊರತೆ

ಹನೂರು: ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಪಟ್ಟಣದಲ್ಲಿ ನಿರ್ಮಿಸಿರುವ 3 ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟುನಿಂತು ವರ್ಷವೇ ಕಳೆದಿದೆ. ಆದರೆ ರಿಪೇರಿ ಪಡಿಸುವಲ್ಲಿ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆ ಕಾಡುತ್ತಿದೆ. ಇದರಿಂದ ಘಟಕಗಳು ಬಾಗಿಲು ಮುಚ್ಚಿವೆ. ಉಪಯೋಗಕ್ಕೆ ಬಾರದಂತಾಗಿದೆ. ಪಟ್ಟಣದ ಜನರು ನೀರಿಗಾಗಿ ಪರತಪಿಸುವಂತಾಗಿದೆ.

ಸರ್ಕಾರದ ಯೋಜನೆಗಳನ್ನು ಸೂಕ್ತವಾಗಿ ಅನುಷ್ಠಾನಗೊಳಿಸುವ ಮೂಲಕ ಅವುಗಳು ಸಮರ್ಪಕವಾಗಿ ಜನರಿಗೆ ತಲುವಂತಾಗಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳ ಪಾತ್ರ ಬಹು ಮುಖ್ಯ. ಇದರಲ್ಲಿ ನಿರ್ವಹಣೆ ಹಾಗೂ ಜವಾಬ್ದಾರಿ ಮಹತ್ವದ ಪಾತ್ರವನ್ನು ವಹಿಸುತ್ತವೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯ ಮಿತಿ ಮೀರಿದಾಗ ಸರ್ಕಾರದ ಯೋಜನೆಗಳ ಸದುಪಯೋಗ ಜನರಿಗೆ ದಕ್ಕದಂತೆ ಆಗುತ್ತವೆ. ಇದಕ್ಕೆ ಹನೂರು ಪಟ್ಟಣದಲ್ಲಿ (ಸರ್ಕಾರದ ಲಕ್ಷಾಂತರ ರೂ ಅನುದಾನದಲ್ಲಿ ನಿರ್ಮಿಸಿರುವ ) ಶುದ್ಧ ಕುಡಿಯುವ ನೀರಿನ ಘಟಕಗಳು ಕಳೆದ ಒಂದು ವರ್ಷದಿಂದದ ಕೆಟ್ಟು ನಿಂತಿರುವುದೇ ಸಾಕ್ಷಿಯಾಗಿದೆ.