ಬೀದರ್: ಸೇವಾ ನಿವೃತ್ತಿ ಹೊಂದಿದ ತಾಲೂಕಿನ ಮನ್ನಳ್ಳಿ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜಿನ ಸಮಾಜಶಾಸ್ತ್ರ ಉಪನ್ಯಾಸಕ ಗುರುನಾಥ ಮೂಲಗೆ ಚಿಲ್ಲರ್ಗಿ ಅವರಿಗೆ ಆತ್ಮೀಯವಾಗಿ ಸತ್ಕರಿಸಿ ಬೀಳ್ಕೊಡಲಾಯಿತು.
ನಗರದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಸಹಪಾಠಿ, ವಿವಿಧ ಸಂಘ ಸಂಸ್ಥೆಗಳು ಸತ್ಕರಿಸಿದವು. ವೃತ್ತಿಯೊಂದಿಗೆ ಯೋಗ ತರಬೇತಿ ಶಿಬಿರ ನಡೆಸಿಕೊಟ್ಟ ಮೂಲಗೆ ಅವರು ಯೋಗದ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸಿರುವ ಕಾರ್ಯ ಶ್ಲಾಘನೀಯ ಎಂದು ಪ್ರಮುಖರು ಮೆಚ್ಚುಗೆ ವ್ಯಕ್ತಪಡಿಸಿದರು.
ಅಧ್ಯಕ್ಷತೆ ಕಾಲೇಜಿನ ಪ್ರಾಂಶುಪಾಲ ಚಂದ್ರಕಾಂತ ಶಹಬಾದಕರ್ ಮಾತನಾಡಿದರು. ಮುಖಂಡ ಬಸವರಾಜ ಯಾಕತಪುರ, ನಗರಸಭೆ ಸದಸ್ಯ ರಾಜಾರಾಮ ಚಿಟ್ಟಾ, ಆರ್ ಎಸ್ ಎಸ್ ಕಲಬುರಗಿ ವಿಭಾಗದ ಸಹ ಕಾರ್ಯವಾಹ ಹಣಮಂತರಾವ ಪಾಟೀಲ್, ಎಸ್.ಎಸ್.ಮಠ, ವಿಶ್ವನಾಥ ಪಾಟೀಲ್, ರಮೇಶ ಪಾಟೀಲ್ ಚಿಲ್ಲರ್ಗಿ, ನಾಗೇಂದ್ರ ಓತಿ, ವಿಜಯಕುಮಾರ ಅಣಕಲ್, ಮಲ್ಲು ಭಂಕೂರ ಮಾತನಾಡಿದರು. ಇಂದುಮತಿ ಮೂಲಗೆ, ಭೀಮರಾವ ಬೀದರಕರ್, ನವೀನಕುಮಾರ ಓತಿ, ನಿತಿನ್ ಓತಿ, ವೈಜಿನಾಥ ಭಂಕೂರ, ಸಂಜುಕುಮಾರ ಖಾನಾಪುರೆ, ರೋಹಣ ಅಣಕಲ್, ರಮೇಶ ತಂಬೋಲಿ ಇತರರಿದ್ದರು. ಶ್ರೀಕಾಂತ ಬಿರಾದಾರ ಸ್ವಾಗತಿಸಿದರು. ನಾಗಪ್ಪ ಜಾನಕನೋರ್ ನಿರೂಪಣೆ ಮಾಡಿದರು. ಗೀತಾ ವಂದಿಸಿದರು.