ಉಪನ್ಯಾಸ ಕಾರ್ಯಕ್ರಮವನ್ನು ರೈತ ಸಂಘದ ಜಿಲ್ಲಾಧ್ಯಕ್ಷೆ ಯದುಶೈಲ ಸಂಪತ್ ಭತ್ತದ ರಾಶಿಗೆ ಪೂಜೆ ಮಾಡುವುದರ ಮೂಲಕ ಉದ್ಟಾಟಿಸಿದರು. ಪುಟ್ಟಸ್ವಾಮಿಗೌಡ, ಜಿ.ರಾಮಕೃಷ್ಣ, ಲಿಂಗಪ್ಪಾಜಿ, ವರದರಾಜು, ರವಿಕುಮಾರ್, ವೆಂಕಟೇಗೌಡ ಇದ್ದರು. 
ಜಿಲ್ಲೆ

ಉಪಕುಸುಬಗಳಿಂದ ಆರ್ಥಿಕ ಮಟ್ಟ ಸುಧಾರಣೆ

ಮದ್ದೂರು: ಕೃಷಿ ಕ್ಷೇತ್ರದಲ್ಲಿ ಗ್ರಾಮೀಣ ಪ್ರದೇಶದ ಮಹಿಳೆಯರು ಸಮರ್ಪಕವಾಗಿ ತೊಡಗಿಸಿಕೊಂಡಿರುವುದರಿಂದ ಕೃಷಿ ಕುಟುಂಬಗಳು ಇನ್ನೂ ಉಳಿಯುವಂತಾಗಿದೆ ಎಂದು ರಾಜ್ಯ ರೈತ ಸಂಘದ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಯದುಶೈಲ ಸಂಪತ್ ಅಭಿಪ್ರಾಯಪಟ್ಟರು.

ತಾಲೂಕಿನ ತೂಬಿನಕೆರೆ ಗ್ರಾಮದಲ್ಲಿ ಎಚ್.ಕೆ.ವೀರಣ್ಣಗೌಡ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿ ‘ದೇಶದ ಪ್ರಗತಿಯಲ್ಲಿ ರೈತರ ಪಾತ್ರ’ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಭತ್ತದ ರಾಶಿಗೆ ಪೂಜೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಮಹಿಳೆಯರು ಕೃಷಿ ಜತೆಗೆ ಹೈನುಗಾರಿಕೆ, ಕುರಿ-ಕೋಳಿ ಸಾಕಣೆ ಸೇರಿದಂತೆ ಇನ್ನಿತರ ಕೃಷಿ ಉಪಕಸಬುಗಳನ್ನು ಮಾಡುವುದರ ಮೂಲಕ ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಿ ಭವಿಷ್ಯ ರೂಪಿಸಬೇಕು ಎಂದು ಹೇಳಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಪುಟ್ಟಸ್ವಾಮಿಗೌಡ ಮಾತನಾಡಿ, ವಿಷಕಾರಿ ಕೀಟನಾಶಕಗಳು ಹಾಗೂ ರಸಗೊಬ್ಬರಗಳನ್ನು ಅಧಿಕವಾಗಿ ಬಳಕೆ ಮಾಡುವುದರಿಂದ ಭೂಮಿಯ ಫಲವತ್ತತೆ ಹಾಳಾಗುವುದರ ಜತೆಗೆ ರೈತರ ಆರೋಗ್ಯ ಸಹ ಹದಗೆಡುತ್ತಿದೆ. ಆದ್ದರಿಂದ ರೈತರು ಸಾವಯವ ಪದ್ಧತಿ ಅನುಸರಿಸಬೇಕು ಎಂದು ಸಲಹೆ ನೀಡಿದರು.

ತಾಲೂಕು ಘಟಕದ ಅಧ್ಯಕ್ಷ ಜಿ.ರಾಮಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ರೈತ ಸಂಘದ ಪದಾಧಿಕಾರಿಗಳಾದ ಜಿ.ಎಸ್.ಶಂಕರ್, ವರದಪ್ಪರಾಜು, ಲಿಂಗಪ್ಪಾಜಿ, ರವಿಕುಮಾರ್, ವೆಂಕಟೇಗೌಡ, ವಿನೋದ್‌ಬಾಬು, ಸಿದ್ದೇಗೌಡ, ಶಿಬಿರಾಧಿಕಾರಿ ಎಚ್.ಎಸ್.ಪಂಚಲಿಂಗೇಗೌಡ, ಸಹ ಶಿಬಿರಾಧಿಗಳಾದ ರೇವಣ್ಣ ಎನ್.ಮೋಹನ್‌ಕುಮಾರ್, ಸಿ.ಜಯವರ್ಧನ್ ಇದ್ದರು.