ಬಾಗಲಕೋಟೆ ನಗರದ ಬಿವಿವಿ ಸಂಘದ ಆಟದ ಮೈದಾನದಲ್ಲಿ ಶುಕ್ರವಾರ ಬಿವಿವಿ ಸಂಘದ ಅಟೋಮೊಬೈಲ್ ವಿಭಾಗದಿಂದ ಹಮ್ಮಿಕೊಂಡ ಆಯುಧ ಪೂಜೆ ವೇಳೆ ಬೀಳೂರು ಗುರುಬಸವ ಪುತ್ಥಳಿಗೆ ಪೂಜೆ ಸಲ್ಲಿಸಲಾಯಿತು.  
ಜಿಲ್ಲೆ

ಉಪಕಾರ-ಕೃತಜ್ಞತೆ ಹಿಂದೂ ಧರ್ಮ ವಿಶಿಷ್ಠ ಗುಣ

ಬಾಗಲಕೋಟೆ: ಉಪಕಾರ ಮತ್ತು ಕೃತಜ್ಞತೆ ಹಿಂದೂ ಧರ್ಮ ವಿಶಿಷ್ಟವಾದ ಗುಣವಾಗಿದ್ದು, ಆಯುಧಗಳನ್ನು ಪೂಜೆ ಸಲ್ಲಿಸುವ ಮೂಲಕ ಅವುಗಳಿಗೆ ಕೃತಜ್ಞತೆ ಸಲ್ಲಿಸುವ ಪರಂಪರೆ ಇರುವುದು ವಿಶ್ವದಲ್ಲಿ ಭಾರತದಲ್ಲಿ ಮಾತ್ರ. ಅನಾದಿ ಕಾಲದಿಂದ ಈ ಪರಂಪರೆ ನಡೆದುಕೊಂಡು ಬಂದಿದೆ ಎಂದು ಬಿವಿವಿ ಸಂಘದ ಕಾರ್ಯಾಧ್ಯಕ್ಷ, ಮಾಜಿ ಶಾಸಕ ವೀರಣ್ಣ ಚರಂತಿಮಠ ಹೇಳಿದರು.

ನಗರದ ಬಿವಿವಿ ಸಂಘದ ಆಟದ ಮೈದಾನದಲ್ಲಿ ಶುಕ್ರವಾರ ಬಿವಿವಿ ಸಂಘದ ಅಟೋಮೊಬೈಲ್ ವಿಭಾಗದಿಂದ ಹಮ್ಮಿಕೊಂಡ ಆಯುಧ ಪೂಜೆಯಲ್ಲಿ ಸಂಘದ ಎಲ್ಲ ವಾಹನಗಳಿಗೆ ಏಕಕಾಲಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

ನಮ್ಮ ಬದುಕು ಅತ್ಯಂತ ಸುಖಮಯವಾಗಲು, ಉತ್ಕೃಷ್ಟವಾಗಿರಲು ಯಾವ ಯಾವ ಸಂಗತಿ ನಮಗೆ ಸಹಾಯ ಸಲ್ಲಿಸಿದೆಯೋ ಅವುಗಳನ್ನು ಸ್ಮರಣೆ ಮಾಡುವುದು ನಮ್ಮ ಕರ್ತವ್ಯವಾಗಿದೆ. ಅದಕ್ಕಾಗಿ ನಮ್ಮ ಬದುಕಿಗಾಗಿ ಶಸ್ತ್ರ ಹಾಗೂ ಯಂತ್ರ ಮತ್ತು ಸಾಧನಗಳಿಗೆ ಉಪಕಾರ ಸ್ಮರಿಸುವ ಹಿನ್ನೆಲೆಯಲ್ಲಿ ನಾವೂ ಶಸಾöಸ್ತ, ಆಯುಧಗಳು, ಯಂತ್ರಗಳು, ರೈತ ಪರ ಸಲಕರಣೆಗಳನ್ನಿಟ್ಟು ಅವುಗಳನ್ನು ಪೂಜೆ ಸಲ್ಲಿಸಲಾಗುತ್ತದೆ ಎಂದರು.

ಅಲ್ಲದೆ ವಿಜಯದ ಸಂಕೇತವಾಗಿ ಆಯುಧ ಪೂಜೆ ಮಾಡುತ್ತಿದ್ದು, ರಾವಣನನ್ನು ಶ್ರೀರಾಮ ಸಂಹಾರ ಮಾಡಿದ ದಿನ, ಶ್ರೀರಾಮ ಅಯೋಧ್ಯಗೆ ಮರಳಿದ ದಿನ, ಪಾಂಡವರು ವನವಾಸ ಪೂರೈಸಿ ಹಸ್ತಿನಾಪುರಕ್ಕೆ ಬಂದ ದಿನವಾಗಿದ್ದು, ದುಷ್ಟ ಶಕ್ತಿಯ ಸಂಹಾರ ಮಾಡಿದ ದಿನವಾಗಿದ್ದರಿಂದ ಈ ದಿನವನ್ನು ವಿಜಯದಶಮಿ ಎಂದು ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ಬಿವಿವಿ ಸಂಘದ ಹಳೇ ಮೈದಾನದಲ್ಲಿ ೧೬೦ ಕ್ಕೂ ಹೆಚ್ಚು ವಾಹನಗಳಿಗೆ ಏಕಕಾಲದಲ್ಲಿ ಪೂಜೆ ಸಲ್ಲಿಸಲಾಯಿತು. ನಂತರ ಎಲ್ಲ ವಾಹನಗಳು ಸಂಘದ ಮೈಧಾನದಿಂದ ವಿದ್ಯಾಗಿರಿ ಇಂಜನಿಯರಿಂಗ್ ಕಾಲೇಜು ಮೈಧಾನದವರೆಗೆ ರೋಡ ಶೋ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಬಿಟಿಡಿಎ ಮಾಜಿ ಅಧ್ಯಕ್ಷ ಜಿ.ಎನ್.ಪಾಟೀಲ, ಮುಖಂಡರಾದ ಲಕ್ಷಿ÷್ಮÃನಾರಾಯಣ ಕಾಸಟ್, ಎಸ್.ಆರ್.ಮನಹಳ್ಳಿ, ಪ್ರಭುಸ್ವಾಮಿ ಸರಗಣಾಚಾರಿ, ಸಂಗಣ್ಣ ಕಲಾದಗಿ, ಗುರುಬಸವ ಸೂಳಿಭಾವಿ, ಮಲ್ಲಿಕಾರ್ಜುನ ಸಾಸನೂರ, ಮಹಾಂತೇಶ ಶೆಟ್ಟರ, ಶೇಖರಪ್ಪ ಪಟ್ಟಣಶೆಟ್ಟಿ, ಶಿವಕುಮಾರ ಹಿರೇಮಠ, ಎಸ್.ಎಸ್.ಮೊರಬದ, ಶರಣಪ್ಪ ಗುಳೇದ, ಬಿ.ಸಿ.ಇಂಡಿ ಸೇರಿದಂತೆ ಅಟೋ ಮೊಬೈಲ್ ವಿಭಾಗದ ಸಿಬ್ಬಂದಿ ಭಾಗವಹಿಸಿದ್ದರು.