ಜಿಲ್ಲೆ

ಉಪ-ನೋಂದಣಾಧಿಕಾರಿ ಕಟ್ಟಡಕ್ಕೆ ಮನವಿ

ಚಾಮರಾಜನಗರ: ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಕುದೇರು ಗ್ರಾಮದ ಉಪ-ನೋಂದಣಾಧಿಕಾರಿ ಕಚೇರಿಗೆ ಸ್ವಂತ ಕಟ್ಟಡ ನಿರ್ಮಾಣ ಮಾಡುವಂತೆ ಶಾಸಕ ಎ.ಆರ್.ಕೃಷ್ಣಮೂರ್ತಿ ಸದನದಲ್ಲಿ ಬುಧವಾರ ಗಮನಸೆಳೆದರು.

ಚಾಮರಾಜನಗರ ತಾಲೂಕಿನ ಕುದೇರು ಗ್ರಾಮದ ಉಪ-ನೋಂದಣಾಧಿಕಾರಿಗಳ ಕಚೇರಿ 1930 ರಲ್ಲಿ ಪ್ರಾರಂಭವಾಗಿದ್ದು, ಪ್ರಸ್ತುತ ಸಂದರ್ಭದಲ್ಲಿ ಶಿಥಿಲಾವಸ್ಥೆಗೆ ತಲುಪಿದೆ. ಆಗಾಗಿ ಸ್ವಂತ ಕಟ್ಟಡವಿಲ್ಲದೆ ಕಳೆದ 1 ವರ್ಷದಿಂದ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಆಗಾಗಿ ಹೊಸ ಕಟ್ಟಡವನ್ನು ನಿರ್ಮಾಣ ಮಾಡಿಕೊಡಬೇಕು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಕಂದಾಯ ಸಚಿವರ ಗಮನಸೆಳೆದರು.

ಈ ಪ್ರಶ್ನೆಗೆ ಕಂದಾಯ ಸಚಿವರ ಪರವಾಗಿ ವೈದ್ಯಕೀಯ ಶಿಕ್ಷಣ ಸಚಿವ ಶರಣ್ ಪ್ರಕಾಶ್ ಪಾಟೀಲ್ ಅವರು ಉತ್ತರಿಸಿ, ಈ ಸಂಬಂಧ ಈಗಾಗಲೇ 1.36 ಕೋಟಿ ರೂ, ವೆಚ್ಚದಲ್ಲಿ ಕಟ್ಟಡ ನಿರ್ಮಾಣಕ್ಕೆ ಎಸ್ಟಿಮೆಂಟ್ ಮಾಡಲಾಗಿದ್ದು, ಕೆಆರ್‌ಡಿಐಎಲ್‌ನಿಂದ ಅಂದಾಜು ಪಟ್ಟಿ ತರಿಸಿಕೊಂಡು ಸಿದ್ದಪಡಿಸಲಾಗಿದೆ. ಇದು ಆರ್ಥಿಕ ಇಲಾಖೆಯಲ್ಲಿ ಸಮಾಲೋಚನೆಯಲ್ಲಿದ್ದು, ಮುಂದಿನ ದಿನಗಳಲ್ಲಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.