ಬಾಗಲಕೋಟೆ: ಉನ್ನತ ಶಿಕ್ಷಣ ಪೂರೈಸಿದ ವಿದ್ಯಾರ್ಥಿಗಳಿಗೆ ಹಲವಾರು ಅವಕಾಶಗಳಿವೆ. ಶಿಕ್ಷಣದ ಕಲಿಕೆಯು ಈಗ ಕೌಶಲ ಪೂರಿತವಾಗಿರುವುದರಿಂದ ಅವಕಾಶಗಳು ಆರಿಸಿಕೊಂಡು ಬರುತ್ತವೆ ಎಂದು ಪ್ರಾಚಾರ್ಯ ಡಾ.ಜಗನ್ನಾಥ ಚವ್ಹಾಣ ಹೇಳಿದರು.
ನಗರದ ಬಿವಿವಿ ಸಂಘದ ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದ ಸ್ನಾತಕೋತ್ತರ ವಿಭಾಗದ ಸಭಾಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಂತಿಮ ವರ್ಷದದ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.
ತಿಳುವಳಿಕೆ, ಬುದ್ಧಿಮತ್ತೆಯ ಪ್ರಯೋಗಶೀಲತೆಯನ್ನು ಬಳಸಿಕೊಳ್ಳುವ ಮನೋವೃತ್ತಿಯನ್ನು ವಿದ್ಯಾರ್ಥಿಗಳು ಬೆಳೆಸಿಕೊಂಡಲ್ಲಿ ಯಶಸ್ಸು ಸಾಧ್ಯ, ವಿದ್ಯಾರ್ಥಿಗಳಲ್ಲಿ ಇರುವ ಪ್ರತಿಭೆಯನ್ನು ಗುರುತಿಸಿ ಪ್ರತಿಭೆಯನ್ನು ಅನಾವರಣಗೊಳಿಸುವುದೇ ಮಹಾವಿದ್ಯಾಲಯ ಹಾಗೂ ಶಿಕ್ಷಕರ ಕೆಲಸವೆ ಎಂದು ಹೇಳಿದರು.
ಎಂ.ಕಾಂ.ವಿಭಾಗದ ಸಂಯೋಜಿಕಿ ಕವಿತಾ ಮಳಜಿ, ಗಿರಿಜಾ ನಾವದಗಿ ಮಾತನಾಡಿದರು. ಪ್ರಥಮ ವರ್ಷದ ವಿದ್ಯಾರ್ಥಿಗಳಾದ ಗೌರಮ್ಮ, ಸಂತೋಷ, ಕಿರಣ, ರಭೀಯಾ, ಸದ್ದಾಮ ಅನಿಸಿಕೆ ವ್ಯಕ್ತಪಡಿಸಿದರು. ವಿವಿಧ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪ್ರೊ.ವಿನೋದ ನಂದರಗಿ, ಪ್ರೊ. ಟಿ.ನಾ.ದರ್ಬಾರ, ಪ್ರೊ.ಸಾಗರ ಛಬ್ಬಿ, ವಿದ್ಯಾರ್ಥಿ ಪ್ರತಿನಿಽ ವೀರೇಶ ಹುನಗುಂದ ಉಪಸ್ಥಿತರಿದ್ದರು. ವೇದಾ ಪ್ರಾರ್ಥಿಸಿದರು. ವಿಶ್ವನಾಥ ಸ್ವಾಗತಿಸಿದರು. ಸುಮಾ ನಾಯ್ಕರ ವಂದಿಸಿದರು.