ಹಾಸನ: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು ಅನುಷ್ಠಾನಗೊಳಿಸುತ್ತಿರುವ ಅರಿವು ವಿದ್ಯಾಭ್ಯಾಸ ಯೋಜನೆಯಡಿ ಪ್ರವೇಶ ಪಡೆಯಬಯಸುವ ವಿದ್ಯಾರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ 2025-26 ನೇ ಸಾಲಿಗೆ ಸಿಇಟಿ, ನೀಟ್ ಮೂಲಕ ಆಯ್ಕೆಯಾಗುವ, ವೈದ್ಯಕೀಯ, ಬಿಡಿಎಸ್, ಬಿಇ, ಬಿ.ಟೆಕ್, ಬ್ಯಾಚುರಲ್ ಆಫ್ ಆರ್ಕಿಟೆಕ್ಚರ್, ಬಿ.ಆಯುಷ್, ಫಾರ್ಮಸಿ, ಕೃಷಿ ವಿಜ್ಞಾನ ಮತ್ತು ಪಶುವೈದ್ಯಕೀಯ ಇಂತಹ ಕೋರ್ಸ್‌ಗಳಿಗೆ ಸಾಲವನ್ನು ಪಡೆಯಲು ಆನ್‌ಲೈನ್ ಮೂಲಕ ಮೇ 31ರವರೆಗೆ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಮೌಲಾನಾ ಆಜಾದ್ ಭವನ, 1 ನೇ ಮಹಡಿ, ಸಾಲಗಾಮೆ ಮುಖ್ಯ ರಸ್ತೆ, ಆಕಾಶವಾಣಿ ಕ್ವಾಟ್ರಸ್ ಹಿಂಭಾಗ, ಶ್ರೀ ವಿದ್ಯಾ ಗಣಪತಿ ದೇವಸ್ಥಾನ ಅಡ್ಡ ರಸ್ತೆ, ಮಲ್ನಾಡ್ ಇಂಜಿನಿಯರಿಂಗ್ ಕಾಲೇಜು ಹತ್ತಿರ, ಹಾಸನ. ದೂರವಾಣಿ ಸಂಖ್ಯೆ- 08172-246333 ಗೆ ಸಂಪರ್ಕಿಸಬಹುದು ಎಂದು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.