ಚಿತ್ರದುರ್ಗ: ನಗರದ ಎಸ್‌ಜೆಎಂ ತಾಂತ್ರಿಕ ವಹಾವಿದ್ಯಾಲಯದಲ್ಲಿ,ಎಲೆಕ್ಟ್ರಾನಿಕ್ಸ್ ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದಿಂದ ಸೆಮಿ ಕಂಡ ಕ್ಟರ್ ಡಿಸೈನ್ ಅಪರ್ಚುನಿಟೀಸ್ ವಿಷಯ ಕುರಿತು ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕಾರ‌್ಯಕ್ರಮ ಉದ್ಘಾಟಿಸಿದ ಪ್ರಾಚಾರ‌್ಯ ಡಾ.ಪಿ.ಬಿ.ಭರತ್ ಅವರು ಮಾತನಾಡಿ,ಸೆಮಿಕಂಡಕ್ಟರ್ ಕ್ಷೇತ್ರ ಮುಂಬರುವ ದಿನಗಳಲ್ಲಿ ಹೆಚ್ಚಿನ ಪ್ರಾಧಾನ್ಯತೆ ಪಡೆಯಲಿದೆ. ಈ ಕ್ಷೇತ್ರ ಉದ್ಯೋಗವಕಾಶಕ್ಕೆ ಹೆಚ್ಚಿನ ಸಹಕಾರಿಯಾಗಲಿದೆ ಎಂದರು. ವಿಭಾಗದ ಮುಖ್ಯಸ್ಥ ಡಾ.ಕೆ.ಬಿ. ಸಿದ್ದೇಶ್ ಅವರು ಮಾತನಾಡಿ, ಎಲೆಕ್ಟ್ರಾನಿಕ್ಸ್ ಮೂಲ ವಲಯದಲ್ಲಿ ಉದ್ಯೋಗ ಪಡೆಯಲು ಈ ಕಾರ‌್ಯಕ್ರಮ ಸಹಕಾರಿಯಾಗಲಿದೆ ಎಂದರು.
ಸಂಪನ್ಮೂಲ ವ್ಯಕ್ತಿಗಳಾದ ಡಾ.ವಿ.ಮಂಜುನಾಥ್,ಕೆ.ಬಿ.ಪ್ರಕಾಶ್ ಉಪನ್ಯಾಸ ನೀಡಿದರು. ಪ್ರೊ.ಎಂ.ಕೆ.ಸುದರ್ಶನ್,ಪ್ರೊ.ಎಸ್. ಚೇತನ್,ಪ್ರೊ.ಎಸ್.ರಘು ಮತ್ತಿತರರು ಇದ್ದರು. ಆರ್.ರಕ್ಷಿತಾ ನಿರೂಪಿಸಿ,ಜಿ.ವಿ.ಆಕಾಂಕ್ಷಾ ಪ್ರಾರ್ಥಿಸಿದರು. ಆರ್.ಎಲ್.ವೆನ್ನಲಾ ವಂದಿಸಿದರು.
ಟೆಕ್ನೋವಿಷನ್
ಎಸ್‌ಜೆಎಂ ತಾಂತ್ರಿಕ ವಹಾವಿದ್ಯಾಲಯದ ಎಲೆಕ್ಟ್ರಾನಿಕ್ಸ್ ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದಿಂದ ಶನಿವಾರ ಟೆಕ್ನೋ ವಿ ಷನ್-2024 ಮಿನಿ ಪ್ರಾಜೆಕ್ಟ್ ಪ್ರದರ್ಶನ ಏರ್ಪಡಿಸಲಾಗಿತ್ತು.ಪ್ರಾಚಾರ್ಯ ಡಾ.ಪಿ.ಬಿ.ಭರತ್ ಪ್ರದರ್ಶನ ಉದ್ಘಾಟಿಸಿದರು.ಡಾ.ವಿ. ಮಂಜುನಾಥ್,ಕೆ.ಬಿ.ಪ್ರಕಾಶ್,ನಾಗರಾಜ್‌ಮೆಸ್ತಾ ಮತ್ತಿತರರು ಇದ್ದರು.
ಪ್ರದರ್ಶನದಲ್ಲಿ 6ನೇ ಸೆಮಿಸ್ಟರ್ ವಿದ್ಯಾರ್ಥಿಗಳ ವಿವಿಧ ಪ್ರಾಜೆಕ್ಟ್‌ಗಳನ್ನು ಪ್ರದರ್ಶಿಸಲಾಯಿತು. ಪ್ರೊ.ಎಸ್.ಚೇತನ್ ಮಾರ್ಗದರ್ಶನ ದಲ್ಲಿ ಎಲ್.ಕಾರ್ತಿಕ್ ತಂಡದ ಪ್ರಾಜೆಕ್ಟ್ ಪ್ರಥಮ,ಪ್ರೊ.ವಿ.ಎಚ್.ಪ್ರದೀಪ್ ಕುಮಾರ್ ಮಾರ್ಗದರ್ಶನದಲ್ಲಿ ಕೆ.ಜಿ.ಲಿಖಿತ್ ತಂಡ ಸಿದ್ಧಪ ಡಿಸಿದ್ದ ಪ್ರಾಜೆಕ್ಟ್ ದ್ವಿತೀಯ ಬಹುಮಾನಕ್ಕೆ ಭಾಜನವಾದವು.