ಜಿಲ್ಲೆ

ಉದ್ಯೋಗಾವಕಾಶಕ್ಕೆ ಬೇಕು ಕೌಶಲ

ಚಿತ್ರದುರ್ಗ: ಕೌಶಲ ಕೊರತೆಯಿಂದ ಅನೇಕ ಯುವಕರು ನಾನಾ ಕಾರ್ಪೊರೇಟ್ ಕಂಪನಿಗಳ ಉದ್ಯೋಗವಾಕಾಶಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಐಸಿಟಿ ಅಕಾಡೆಮಿ ಸೀನಿಯರ್ ಅಸೋಸಿಯೆಟ್ ಪ್ರವೀಣ್ ವಿ. ಗಸ್ತಿ ಹೇಳಿದರು.

ರೆಡಿಂಗ್ಟನ್ ಫೌಂಡೆಷನ್ ಮತ್ತು ಐಸಿಟಿ ಅಕಾಡೆಮಿ ಸಹಯೋಗದಲ್ಲಿ ನಗರದ ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ 21 ದಿನಗಳ ಸೈಬರ್ ಸೆಕ್ಯೂರಿಟಿ ಮತ್ತು ಸ್‌ಟಾಸ್ಕಿಲ್ಸ್ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿ, ಕೌಶಲವಿದ್ದರೆ ಜಾಗತಿಕ ಮಟ್ಟದ ಉದ್ಯೋಗ ಆಯ್ಕೆ ಪ್ರಕಿಯೆಯಲ್ಲಿ ಭಾಗವಹಿಸಲು ಹೆಚ್ಚು ಸಹಕಾರಿಯಾಗಲಿದೆ ಎಂದರು.

ಕಾರ್ಯಾಗಾರದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಪರೀಕ್ಷೆ ನಡೆಸಿ ಸರ್ಟಿಫಿಕೆಟ್ ನೀಡಲಾಗುವುದು ಎಂದು ತಿಳಿಸಿದರು.

ಗಣಕ ವಿಜ್ಞಾನ ವಿಭಾಗದ ಹಿರಿಯ ಪ್ರಾಧ್ಯಾಪಕ ಪ್ರೊ.ಬಿ.ಇ. ರಮೇಶ ಮಾತನಾಡಿ, ಮನೆ, ಹೊಲ ಮತ್ತು ವಾಹನಗಳು ನಮ್ಮ ಹಿಡಿತದಲ್ಲಿವೆ. ಆದರೆ, ನಮ್ಮ ಮೊಬೈಲ್‌ನಲ್ಲಿರುವ ವಿವರಗಳು ನಮ್ಮ ಹಿಡಿತದಲ್ಲಿ ಇಲ್ಲ. ಇಂತಹ ಕಾರ್ಯಾಗಾರಗಳು ಸೈಬರ್ ಅಟ್ಯಾಕ್ ನಿಯಂತ್ರಣ ಕಲಿಕೆಗೆ ಸಹಕಾರಿಯಾಗಲಿವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಪಿ.ಬಿ.ಭರತ್ ಮಾತನಾಡಿ, ಸೈಬರ್ ಸೆಕ್ಯೂರಿಟಿ ಜಾಗೃತಿ ಇವತ್ತಿನ ಅಗತ್ಯವಾಗಿದೆ ಎಂದರು.

ಎಂ.ಎಸ್. ಜಕಾಉಲ್ಲ, ಮುತ್ತುಕುಮಾರ್, ಡಾ.ಕೆ.ಬಿ. ಸಿದ್ದೇಶ್, ಡಾ.ಕೆ.ಆರ್. ಕೃಷ್ಣರೆಡ್ಡಿ, ಡಾ.ಟಿ.ವಿ. ಅರವಿಂದ್, ಡಾ.ಎಸ್.ಪಿ. ಶಿವಕುಮಾರ್, ಪ್ರೊ.ಧನುಷ್ ಇತರರು ಇದ್ದರು.

ಪ್ರೊ. ಪುಷ್ಪಲತಾ ಪ್ರತಿಜ್ಞಾವಿಧಿ ಭೋದಿಸಿದರು. ಆಕಾಂಕ್ಷ ಪ್ರಾರ್ಥಿಸಿದರು. ಕೋಮಲಾ ಸ್ವಾಗತಿಸಿ, ವೆಂಕಟೇಶ್ ವಂದಿಸಿದರು. ರುಚಿತಾ ನಿರೂಪಿಸಿದರು.