ಜಿಲ್ಲೆ

ಉದ್ಯೋಗಕ್ಕಾಗಿ ಸಂದರ್ಶನ 17ರಂದು

ಕಲಬುರಗಿ: ಎಂಎಸ್‌ಕೆ ಮಿಲ್ ರಸ್ತೆಯ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಆ.೧೭ರಂದು ಬೆಳಗ್ಗೆ ೧೦.೩೦ ರಿಂದ ಮಧ್ಯಾಹ್ನ ೨ರವರೆಗೆ ಸಂದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಸಹಾಯಕ ನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ. ಫ್ಲಿಪ್‌ಕಾರ್ಟ್ದಲ್ಲಿ ಹಬ್ ಸ್ಟೋರರ್ ಹುದ್ದೆಗೆ ಎಸ್ಸೆಸ್ಸೆಲ್ಸಿ ಉತ್ತೀರ್ಣರಾಗಿರಬೇಕು. ಹಬ್ ಟೀಮ್ ಲೀಡರ್ ಹುದ್ದೆಗೆ ಪಿಯುಸಿ ಪಾಸಾಗಿರಬೇಕು. ಡೆಲಿವರಿ ಎಕ್ಸಿಕ್ಯೊಟಿವ್ ಹುದ್ದೆಗೆ ಎಸ್ಸೆಸ್ಸೆಲ್ಸಿ ಪಾಸಾಗಿರಬೇಕು. ವಯೋಮಿತಿ ೧೮ ರಿಂದ ೩೫ ವರ್ಷದೊಳಗಿರಬೇಕು. ಚೈತನ್ಯ ಫೈನಾನ್ಸ್ದಲ್ಲಿ ಯುನಿಟ್ ಆಡಿಟ್ ಮ್ಯಾನೇಜರ್, ಯುನಿಟ್ ಕ್ರೆಡಿಟ್ ಮ್ಯಾನೇಜರ್ ಹಾಗೂ ಬಿಎಂ ಹುದ್ದೆಗಳಿಗೆ ಯಾವುದೇ ಪದವಿ ಪಾಸಾಗಿರಬೇಕು. ವಯೋಮಿತಿ ೧೮ ರಿಂದ ೩೨ ವರ್ಷದೊಳಗಿರಬೇಕು. ಆರ್‌ಬಿಎಲ್ ಫಿನ್‌ಸರ್ವ್ದಲ್ಲಿ ಗ್ರೂಪ್ ಲೋನ್ ಆಫೀಸರ್ ಹುದ್ದೆಗೆ ಪಿಯುಸಿ, ಯಾವುದೇ ಪದವಿ ಪಾಸಾಗಿರಬೇಕು. ವಯೋಮಿತಿ ೧೮ ರಿಂದ ೩೦ ವರ್ಷದೊಳಗಿರಬೇಕು. ಆಸಕ್ತರು ಎಲ್ಲ ಅಂಕಪಟ್ಟಿಗಳ ಝೆರಾಕ್ಸ್, ರೆಸ್ಯೂಮ್(ಬಯೋಡಟಾ) ಭಾವಚಿತ್ರ ಹಾಗೂ ಆಧಾರ್‌ಕಾರ್ಡ್ ದಾಖಲೆಗಳೊಂದಿಗೆ ನಿಗದಿತ ದಿನದಂದು ನಡೆಯುವ ನೇರ ಸಂದರ್ಶನÀದಲ್ಲ್ಲಿ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಹಾಗೂ ದೂ.೦೮೪೭೨-೨೭೪೮೪೬, ಮೊ. ೯೬೨೦೦೯೫೨೭೦ ಗೆ ಸಂಪರ್ಕಿಸಲು ಕೋರಲಾಗಿದೆ.
ಇಂದು ಕಡ್ಡಾಯ