ಬಸವಕಲ್ಯಾಣದ ಶ್ರೀ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ ಮತ್ತು ವಿಶ್ವಸ್ಥ ಸಮಿತಿಯಿಂದ ಶ್ರೀ ಬಸವೇಶ್ವರ ಐಟಿಐ ಕಾಲೇಜಿನಲ್ಲಿ ಭಾನುವಾರ ಆಯೋಜಿಸಲಾಗಿದ್ದ ಉದ್ಯೋಗ ಮೇಳವನ್ನು ಶ್ರೀ ಪ್ರಣವಾನಂದ ಮಹಾಸ್ವಾಮೀಜಿ ಉದ್ಘಾಟಿಸಿದರು. ಬಸವರಾಜ ಕೋರಕೆ, ಶಶಿಕಾಂತ ದುರ್ಗೆ, ವಿವೇಕಾನಂದ ಹೊದಲೂರೆ, ನಿಖಿಲ ದೇಶಮುಖ, ನಿಲೇಶ ನಿತ್ನಾವರೆ, ಪ್ರವೀಣ ಕಾಳೆ, ಜಯಜಿತ್ ನಾಗರಗೋಜೆ ಇತರರಿದ್ದರು. 
ಜಿಲ್ಲೆ

ಉದ್ಯೋಗ ಮೇಳದಲ್ಲಿ ೧೪೧ ಜನರಿಗೆ ಸಿಕ್ಕಿತು

ಬಸವಕಲ್ಯಾಣ: ಶ್ರೀ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ ಮತ್ತು ವಿಶ್ವಸ್ಥ ಸಮಿತಿಯಿಂದ ಶ್ರೀ ಬಸವೇಶ್ವರ ಜಾತ್ರಾ ಅಮೃತ ಮಹೋತ್ಸವ ನಿಮಿತ್ತ ಶ್ರೀ ಬಸವೇಶ್ವರ ಐಟಿಐ ಕಾಲೇಜಿನಲ್ಲಿ ಭಾನುವಾರ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ ನೋಂದಣಿ ಮಾಡಿದ ೨೫೦ ಜನರ ಪೈಕಿ ೧೪೧ ಜನ ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡರು.

ಉದ್ಘಾಟನೆ ನೆರವೇರಿಸಿದ ಮುಚಳಂಬದ ಶ್ರೀ ಪ್ರಣಾವಾನಂದ ಮಹಾಸ್ವಾಮೀಜಿ ಮಾತನಾಡಿ, ಶ್ರೀ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ ಮತ್ತು ವಿಶ್ವಸ್ಥ ಸಮಿತಿ ಈ ಭಾಗದಲ್ಲಿ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ, ಧಾರ್ಮಿಕ ಕೆಲಸದಲ್ಲಿ ಕಾಳಜಿ ವಹಿಸುತ್ತಿದೆ. ಜಾತ್ರಾ ಅಮೃತ ಮಹೋತ್ಸವ ನಿಮಿತ್ತ ಉದ್ಯೋಗ ಮೇಳ ಆಯೋಜಿಸಿ ಯುವಕರಿಗೆ ಅನುಕೂಲ ಕಲ್ಪಿಸಿದ್ದು, ಮೇಳದಲ್ಲಿ ಹಲವಾರು ಜನ ಭಾಗವಹಿಸಿ ಕೆಲಸ ಗಿಟ್ಟಿಸಿಕೊಂಡು ಜೀವನ ಸುಧಾರಿಸಿಕೊಳ್ಳಬೇಕು ಹಾರೈಸಿದರು.

ಬಿಡಿಪಿಸಿ ಅಧ್ಯಕ್ಷ ಬಸವರಾಜ ಕೋರಕೆ ಅಧ್ಯಕ್ಷತೆ ವಹಿಸಿದ್ದರು. ಬಿಡಿವಿಸಿ ಅಧ್ಯಕ್ಷ ಶಶಿಕಾಂತ ದುರ್ಗೆ ಇತರರಿದ್ದರು. ಯುವ ಮುಖಂಡ ಆಕಾಶ ಖಂಡಾಳೆ ಪ್ರಾಸ್ತಾವಿಕ ಮಾತನಾಡಿದರು. ಪ್ರಾಚಾರ್ಯ ಜ್ಞಾನ ರೆಡ್ಡಿ ಬೋಳಿಂಗೆ ಸ್ವಾಗತಿಸಿದರು. ರಾಜಕುಮಾರ ನಾಗರಾಳೆ ವಂದಿಸಿದರು. ಜಗನ್ನಾಥ ಖ್ಯಾಡೆ ಹಾಗೂ ಸಂದೀಪ ಪಾಟೀಲ್ ನಿರೂಪಣೆ ಮಾಡಿದರು.

೧೪೧ ಜನರಿಗೆ ನೇಮಕಾತಿ ಆದೇಶ: ಭಾರತ ಫೋರ್ಜ್ ಲಿಮಿಟೆಡ್‌ನಲ್ಲಿ ೨೧, ಕಿಯೋನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನಲ್ಲಿ ೪೦, ಗುರು ಯುವಶಕ್ತಿ ಪ್ರೈವೇಟ್ ಲಿಮಿಟೆಡ್‌ನಲ್ಲಿ ೪೫, ವಾಲಿಯೋದಲ್ಲಿ ೧೧ ಸೇರಿ ವಿವಿಧ ಕಂಪನಿಗಳಲ್ಲಿ ಒಟ್ಟು ೧೪೧ಜನರಿಗೆ ಉದ್ಯೋಗದ ನೇಮಕಾತಿ ಆದೇಶ ಪತ್ರ ನೀಡಲಾಯಿತು.