ಜಿಲ್ಲೆ

ಉದ್ಯೋಗ ಖಾತ್ರಿ ಸಮಸ್ಯೆ ನೀಗಿಸಿ

ಕಲಬುರಗಿ: ಉದ್ಯೋಗ ಖಾತ್ರಿ ಯೋಜನೆ ಅಡಿ ಕೆಲಸ ಮಾಡಿದ ಕೂಲಿಕಾರರ ಆರು ವಾರದ ಬಾಕಿ ವೇತನ ಬಿಡುಗಡೆ ಮಾಡಬೇಕು, ಬೇಸಿಗೆಯಲ್ಲಿ ಕೆಲಸದ ಪ್ರಮಾಣದಲ್ಲಿ ರಿಯಾಯಿತಿ ನೀಡಬೇಕು ಸೇರಿ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಮಂಗಳವಾರ ಪ್ರಾಂತ ರೈತ ಸಂದಿಂದ ಪ್ರತಿಭಟನೆ ನಡೆಸಲಾಯಿತು.

ನಗರದ ಜಗತ್​ ವೃತ್ತದಿಂದ ಜಿಪಂ ಕಚೇರಿವರೆಗೆ ನೂರಾರು ಕೂಲಿ ಕರ‍್ಮಿಕರು, ರೈತರು ಪ್ರತಿಭಟನಾ ಮೆರವಣಿಗೆ ನಡೆಸಿ, ಕೂಲಿಗಾರರಿಗೆ ನಮೂನೆ ೬ ಎ ರ‍್ಜಿ ನೀಡದಿರುವ ಕಂಪ್ಯೂಟರ್​ ಆಪರೇಟರ್​ಗಳ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು, ನರೇಗಾ ಭ್ರಷ್ಟಾಚಾರ ತಡೆಗಟ್ಟಬೇಕು, ನಿಜವಾದ ಕೂಲಿಕಾರರಿಗೆ ಉದ್ಯೋಗ ಚೀಟಿ ಸರಳವಾಗಿ ನೀಡಬೇಕು ಎಂದು ಆಗ್ರಹಿಸಿದರು.

ಸಂದ ಜಿಲ್ಲಾಧ್ಯ ಶರಣಬಸಪ್ಪ ಮಮಶೆಟ್ಟಿ ಮಾತನಾಡಿ, ಜಿಲ್ಲೆಯಲ್ಲಿ ಎರಡು ಲ ಹೆಕ್ಟೆರ್​ ತೊಗರಿ ಹಾನಿಗೀಡಾಗಿದ್ದು, ಪರಿಹಾರ ನೀಡಬೇಕು. ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಪರಿಹಾರ ಕೊಡಬೇಕು, ರಾಷ್ಟ್ರೀಕೃತ ಬ್ಯಾಂಕ್​ಗಳು, ರೈತರ ಖಾತೆಗಳು, ಕೂಲಿಕಾರರ ಖಾತೆ ಸ್ಥಗಿತ ಮಾಡಿದ್ದು, ಒಪನ್​ ಮಾಡಬೇಕು, ನರೇಗಾ ಕೂಲಿಕಾರರಿಗೆ ಸ್ಥಳದಲ್ಲಿ ಮೂಲಭೂತ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿದರು.

ಜೇರ‍್ಗಿ ತಾಲೂಕಿನ ಹರವಾಳ ಗ್ರಾಪಂನಲ್ಲಿ ೬ ಕಿ.ಮೀ ದೂರ ಕೆಲಸ ಮಾಡುತ್ತಿರುವ ಕರ‍್ಮಿಕರಿಗೆ ಪ್ರಯಾಣ ವೆಚ್ಚ ನೀಡಬೇಕು, ನಿರಂತರವಾಗಿ ಕೆಲಸ ಕೊಡಲು ಮೀನಮೇಷ ಎಣಿಸುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು, ಹರನೂರ ಗ್ರಾಪಂನಲ್ಲಿ ಕೂಲಿಕಾರರಿಗೆ ಕಡಿಮೆ ಕೂಲಿ ಬರೆದು ಮೋಸ ಮಾಡುವುದು ಕೈ ಬಿಡಬೇಕು, ಬೋಗಸ್​ ಬಿಲ್​ ಬರೆಯುವುದು ತಡೆಯಬೇಕು, ಯಡ್ರಾಮಿ ತಾಲೂಕಿನ ಇಜೇರಿ ಗ್ರಾಪಂನಲ್ಲಿ ಕೂಲಿ ಮೋಸ ತಡೆಯಬೇಕು, ಜಲ್​ ಜೀವನ್​ ಮಿಷನ್​ ಕಾಮಗಾರಿ ಗುಣಮಟ್ಟ ಕಾಪಾಡಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಜಿಪಂ ಕಚೇರಿ ಸಿಬ್ಬಂದಿಗೆ ನೀಡಿದರು.

ಪ್ರಮುಖರಾದ ರಾಯಪ್ಪ ಹುರುಮುಂಜಿ, ಚಂದಪ್ಪ ಪೂಜಾರಿ, ಶಿವಕುಮಾರ ಸಲಗರ, ದೇವು ಬಿರಾದಾರ, ಪ್ರಕಾಶ ಜಾನೆ, ೇಮಲಿಂಗ, ಕಮಲಾಕರ, ಸಿದ್ರಾಮಪ್ಪ ತಳವಾರ, ಅಶೋಕ ಚವ್ಹಾಣ್​, ಅಂಬಯ್ಯ, ಭಾಗ್ಯಶ್ರೀ ಮಠ ಇತರರಿದ್ದರು.